ಗಾಂಧಿನಗರ:ಪ್ರೀತಿ ತಪ್ಪಲ್ಲ. ಆದರೆ ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ ಮಾಡಿ, ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು. ಅದೇ ರೀತಿಯ ತಪ್ಪನ್ನು ಮಾಡಿದ್ದ ಮಗಳಿಗೆ ಬುದ್ಧಿ ಕಲಿಸಲು ಹೋದ ತಂದೆ ಇದೀಗ ಕಣ್ಣೀರು ಸುರಿಸುತ್ತಿರುವ ಘಟನೆ ಗುಜರಾತ್​ನ ರಾಜಕೋಟ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ
ರಾಜಕೋಟ್​ ಜಿಲ್ಲೆಯ ಜಮ್ಖಾಂಬಲಿಯಾ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 17 ವರ್ಷದ ಯುವತಿ 21 ವರ್ಷದ ಯುವಕನನ್ನು ಪ್ರೀತಿಸಿದ್ದಳು. ಆತನನ್ನೇ ಮದುವೆಯಾಗುವುದಾಗಿ ತಂದೆಯ ಬಳಿ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ತಂದೆ, ಪೋಸ್ಕೋ ಕಾನೂನಿನಡಿ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ತಂದೆಯ ಆರೋಪದ ಹಿನ್ನೆಲೆಯಲ್ಲಿ ಯುವಕನನ್ನು ಎರಡು ತಿಂಗಳ ಹಿಂದೆಯೇ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಹೋಟೆಲ್​ನ ಟಾಯ್ಲೆಟ್​ನಲ್ಲಿ ಕೈಚಳಕ ತೋರಿಸಲು ಹೋಗಿ ಸಿಕ್ಕಿಬಿದ್ದ! ಇಂತವರ ಬಗ್ಗೆ ನೀವೂ ಎಚ್ಚರವಾಗಿರಿ!
ಪ್ರಿಯತಮನನ್ನು ಬಂಧಿಸಿದ ಮೇಲೆಯೂ ಆತನ ಪ್ರೀತಿಯಿಂದ ಹೊರಬರದ ಯುವತಿ ಆತನಿಗೆ ಜಾಮೀನು ನೀಡಿ ಠಾಣೆಯಿಂದ ಬಿಡಿಸಲು ಅಪ್ಪನ ಬೆನ್ನು ಬಿದ್ದಿದ್ದಾಳೆ. ಆದರೆ ಮಗಳು ಏನೇ ಹೇಳಿದರೂ ಕೇಳದ ಅಪ್ಪ, ಜಾಮೀನು ನೀಡಲು ಒಪ್ಪಿಲ್ಲ. ಇದರಿಂದ ಸಿಟ್ಟಿಗೆದ್ದ ಯುವತಿ ಡಿಸೆಂಬರ್​ 31ರಂದು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಪ್ರೀತಿಗೆ ನಿರಾಕರಿಸಿದ್ದ ಅಪ್ಪ ಇದೀಗ ಮಗಳನ್ನೇ ಕಳೆದುಕೊಂಡ ನೋವಿನಲ್ಲಿದ್ದಾರೆ. (ಏಜೆನ್ಸೀಸ್​)
ಕೋವಿಡ್​ ರೋಗಿಯ ಜತೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ನರ್ಸ್​: ಪ್ರಕರಣದಲ್ಲಿದೆ ಊಹೆಗೂ ಮೀರಿದ ಸ್ಫೋಟಕ ಟ್ವಿಸ್ಟ್​!

ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
