ಅಹಮದಾಬಾದ್​:ಬ್ರೈನ್ ಟ್ಯೂಮರ್​ನಿಂದ ಬಳಲುತ್ತಿರುವ 11 ವರ್ಷದ ಬಾಲಕಿಯ ಐಎಎಸ್​ ಅಧಿಕಾರಿಯಾಗುವ ಆಸೆಯನ್ನು ಗುಜರಾತಿನ ಅಹಮದಾಬಾದ್​ನ ಜಿಲ್ಲಾಧಿಕಾರಿ ಸಂದೀಪ್ ಸಗಳೆ ಈಡೇರಿಸಿದ್ದಾರೆ. ಗಾಂಧಿನಗರದ ನಿವಾಸಿ ಫ್ಲೋರಾ ಅಸೋಡಿಯ, ಒಂದು ದಿನದ ಮಟ್ಟಿಗೆ ಅಹಮದಾಬಾದ್​​ನ ಕಲೆಕ್ಟರ್​ ಆಗಿ ಉನ್ನತ ಹುದ್ದೆಯ ಕುರ್ಚಿಯ ಮೇಲೆ ಕೂತು ಸಂತೋಷ ಪಟ್ಟಿದ್ದಾಳೆ.
ಗಾಂಧಿನಗರದ ನಿವಾಸಿಯಾದ ಫ್ಲೋರಾ, ಓದಿನಲ್ಲಿ ಮುಂದಿದ್ದು, ಬೆಳೆದು ಐಎಎಸ್​ ಅಧಿಕಾರಿ ಅಥವಾ ಕಲೆಕ್ಟರ್​ ಆಗುವ ಹೆಬ್ಬಯಕೆ ಹೊಂದಿದ್ದಾಳೆ. ಈಗ್ಗೆ 7 ತಿಂಗಳ ಹಿಂದೆ ಆಕೆಗೆ ಬ್ರೈನ್ ಟ್ಯೂಮರ್​ ಇರುವುದು ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಅವಳ ಶುಶ್ರೂಷೆ ನಡೆಸುತ್ತಿದ್ದಾರೆ. ಈ ನಡುವೆ ಮೇಕ್​ ಎ ವಿಶ್​ ಫೌಂಡೇಶನ್​ನವರು ಮಾಡಿದ ಮನವಿಯ ಮೇರೆಗೆ ಆಕೆಗೆ ಶನಿವಾರ(ಸೆ.18)ದಂದು ಕಲೆಕ್ಟರ್​ ಆಗುವ ಅವಕಾಶ ನೀಡಲಾಯಿತು ಎನ್ನಲಾಗಿದೆ.
ಇದನ್ನೂ ಓದಿ:ಡ್ರೋನ್​ಗಳಲ್ಲಿ ಔಷಧಿ-ಲಸಿಕೆಗಳನ್ನು ‘ಡನ್ಜೋ’ ಮಾಡುವ ಪ್ರಯೋಗ!
ಸೆಪ್ಟೆಂಬರ್ 25 ಕ್ಕೆ ಫ್ಲೋರಾಳ ಹುಟ್ಟಿದಹಬ್ಬ ಬರುತ್ತಿದ್ದು, ಈ ಸಂದರ್ಭಕ್ಕೆ ಅವಳ ಬಯಕೆಯನ್ನು ಈಡೇರಿಸಲಾಯಿತು. ಜೊತೆಗೆ, ಜಿಲ್ಲಾಧಿಕಾರಿಗಳು ಮತ್ತು ಕಛೇರಿಯ ಸಿಬ್ಬಂದಿ ಅವಳಿಗೆ ಹಲವು ಉಡುಗೊರೆಗಳನ್ನು ನೀಡಿ, ಮುಂಚಿತವಾಗಿಯೇ ಬರ್ತ್​ಡೇ ಆಚರಣೆ ಮಾಡಿದರು ಎನ್ನಲಾಗಿದೆ.(ಏಜೆನ್ಸೀಸ್)
ಅಪಾಯಕಾರಿ ಸೆರೋಟೈಪ್​-2 ಡೆಂಘೆ ಜ್ವರ: 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

VIDEO| ಬಾಲಿವುಡ್​ ಹೀರೋ ಇಮ್ರಾನ್​ ಹಶ್ಮಿ ಜಿಮ್​ ವರ್ಕೌಟ್​ ನೋಡಿ!

“ನನ್ನ ಬರ್ತ್​ಡೇಗೆ ದಾಖಲೆ ಲಸಿಕೆ ನೀಡಿದ್ದಕ್ಕೆ ಒಂದು ರಾಜಕೀಯ ಪಕ್ಷಕ್ಕೆ ಜ್ವರ ಬಂತು”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
