ಪಾಲ್​​ಗರ್​​ :ಮಕ್ಕಳಿಗೆ ಬರ್ತ್​ಡೇ ಆಚರಿಸಿಕೊಳ್ಳುವುದು, ಉಡುಗೊರೆ ಪಡೆಯುವುದು ಅಂದ್ರೆ ಸಹಜವಾಗಿ ತುಂಬಾ ಖುಷಿಯ ಸಂಗತಿ. ಆದರೆ ಏಪ್ರಿಲ್ 10 ರಂದು 6 ವರ್ಷ ತುಂಬಿದ ಮಹಾರಾಷ್ಟ್ರದ ಬಾಲಕಿಯೊಬ್ಬಳು ಪುಟ್ಟ ವಯಸ್ಸಲ್ಲೇ ದೊಡ್ಡ ಮನಸ್ಸಿನ ಕೆಲಸಕ್ಕೆ ನಾಂದಿ ಹಾಡಿದ್ದಾಳೆ. ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಬಂಧುಬಳಗದವರಿಂದ ರಕ್ತದಾನ ಮಾಡಿಸಿ ಗಮನ ಸೆಳೆದಿದ್ದಾಳೆ.
ರಾಜ್ಯದ ಪಾಲ್​ಗರ್​ ಜಿಲ್ಲೆ ವಾಡಾ ತಾಲ್ಲೂಕಿನ ಗಾಂದ್ರೆ ಗ್ರಾಮದ ನಿವಾಸಿ ಯುಗಾ ಅಮೋಲ್ ಠಾಕ್ರೆ ಟಿವಿಯಲ್ಲಿ ರಕ್ತದಾನ ಮಾಡಲು ಕೋರಿ ಬರುತ್ತಿದ್ದ ಮನವಿಗಳಿಂದ ತುಂಬಾ ಪ್ರೇರಿತಳಾಗಿದ್ದಾಳೆ. ಹಾಗಾಗಿ ತನ್ನ ಹುಟ್ಟಿದ ಹಬ್ಬಕ್ಕೆ ‘ನನಗೆ ಪಾರ್ಟಿ ಬೇಡ, ಉಡುಗೊರೆಗಳನ್ನೂ ನೀಡಬೇಡಿ. ಬದಲಿಗೆ ರಕ್ತದಾನ ಮಾಡಿ ಕೋವಿಡ್​ ಸಮಸ್ಯೆಯ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅಭಾವವುಂಟಾಗುವುದನ್ನು ತಪ್ಪಿಸಿ’ ಎಂದು ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ:ಕರೊನಾ : ಸಕ್ರಿಯ ಪ್ರಕರಣಗಳಲ್ಲಿ ಇವು ಟಾಪ್​ ಟೆನ್ ಜಿಲ್ಲೆಗಳು
ಅವಳ ಕುಟುಂಬಸ್ಥರು, ಸಂಬಂಧಿಕರು ಮತ್ತು ಮಿತ್ರವರ್ಗದವರು ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಒಟ್ಟು 36 ಜನರು ಪಾಲ್​ಗರ್​ನ ಕಲ್ಯಾಣಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ ಎಂದು ಆಸ್ಪತ್ರೆಯ ಮಾಲೀಕರಾದ ಡಾ. ವೈಭವ್​ ಠಾಕ್ರೆ ತಿಳಿಸಿದ್ದಾರೆ.
“ಇಷ್ಟು ಚಿಕ್ಕ ವಯಸ್ಸಲ್ಲಿ ಇಂಥಾ ಆಲೋಚನೆ ಮಾಡಿರುವುದು ನಿಜಕ್ಕೂ ವಿಶೇಷ. ನಮಗೆ ಅವಳ ಬಗ್ಗೆ ಹೆಮ್ಮೆ ಉಂಟಾಗಿದೆ” ಎಂದಿರುವ ಡಾ.ಠಾಕ್ರೆ, ಶೇಖರಿಸಲ್ಪಟ್ಟ ರಕ್ತವನ್ನು ಥಾಣೆ ಜಿಲ್ಲೆಯ ವಾಮನರಾವ್ ಓಕ್ ಬ್ಲಡ್ ಬ್ಯಾಂಕ್​ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
ಕರೊನಾ ರೋಗಿ ಸತ್ತಿದ್ದಕ್ಕೆ ಕೂಗಾಡಿದ ರಾಜಕಾರಣಿಗಳು… ರಾಜೀನಾಮೆ ಸಲ್ಲಿಸಿದ ವೈದ್ಯರು

ಶಾಕಿಂಗ್ : ಯುವಕನ ಮರ್ಮಾಂಗವನ್ನು ಕತ್ತರಿಸಿದ ತೃತೀಯಲಿಂಗಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 3 =
Remember me
