ಮುಂಬೈ:ಮೊದಲ ನೋಟದಲ್ಲೇ ಪ್ರೀತಿ ಹುಟ್ಟುವ ಸಾಧ್ಯತೆ ಇದೆ ಎನ್ನುತ್ತಾರೆ. ಅದನ್ನೇ ಒಂದು ಮಟ್ಟಿಗೆ ಹೆಚ್ಚಾಗೇ ತೆಗೆದುಕೊಂಡ ಯುವಸಮಾಜ ಪ್ರೀತಿಯನ್ನು ಹುಡುಕುವುದಕ್ಕೆಂದೇ ಆ್ಯಪ್​ಗಳನ್ನು ತಯಾರಿಸಿಕೊಂಡುಬಿಟ್ಟಿದೆ. ಆ್ಯಪ್​ಗಳಲ್ಲೇ ಸ್ವೈಪ್​ ಲೆಫ್ಟ್​, ಸ್ವೈಪ್​ ರೈಟ್​ ಎನ್ನುತ್ತಾ ಪ್ರೀತಿಗಾಗು ಹುಡುಕಾಟ ಆರಂಭವಾಗಿದೆ. ಅದೇ ರೀತಿಯ ಸ್ವೈಪಿಂಗ್​ ಪ್ರೀತಿಯ ಬಲೆಗೆ ಬಿದ್ದ ಯುವಕರು ಪಚೀತಿಗೆ ಸಿಲುಕಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪುಣೆಗೆ ಹತ್ತಿರವಿರುವ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದ ನಿವಾಸಿ ಸಯಾಲಿ ಕೇಲ್ (27) ಪದವೀಧರೆಯಾಗಿದ್ದು, ಒಳ್ಳೆ ಉದ್ಯೋಗವನ್ನು ಹೊಂದಿದ್ದಳು. ಆದರೆ ಕರೊನಾ ಹಿನ್ನೆಲೆಯಲ್ಲಿ ಆಕೆ ಕೆಲಸ ಕಳೆದುಕೊಂಡಿದ್ದಾಳೆ. ಮುಂದೇನು ಮಾಡಬೇಕು ಎನ್ನುವ ದಿಕ್ಕು ತೋಚದಂತಾದ ಕಾರಣ ದುಡ್ಡು ಮಾಡಲು ಹೊಸದೊಂದು ದಾರಿ ಹುಡುಕಿದ್ದಾಳೆ.
ಒಂದಿಷ್ಟು ಡೇಟಿಂಗ್​ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಂಡ ಆಕೆ ಹುಡುಗರಿಗಾಗಿ ಹುಡುಕಾಟ ಆರಂಭಿಸಿದ್ದಾಲೆ. ಚೆನ್ನಾಗಿ ದುಡ್ಡಿದೆ ಎನಿಸಿದಂತಹ ಹುಡುಗರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳಲಾರಂಭಿಸಿದ್ದಾಳೆ. ಹುಡುಗರನ್ನು ಹತ್ತಿರದ ಹೋಟೆಲ್​ಗೆ, ರೆಸ್ಟೋರೆಂಟ್​ಗಳಿಗೆ ಕರೆಸಿಕೊಂಡು, ಜ್ಯೂಸ್​, ಟೀ-ಕಾಫಿಯಲ್ಲಿ ಮತ್ತು ಬರುವ ಔಷಧ ಹಾಕಿ, ಎಚ್ಚರ ತಪ್ಪಿಸಿ, ಅವರ ಬಳಿ ಇದ್ದ ದುಡ್ಡು, ಒಡವೆಯನ್ನೆಲ್ಲ ಕದಿಯಲಾರಂಭಿಸಿದ್ದಾಳೆ. ದುಡ್ಡಿನ ಆಸೆ ಇನ್ನೂ ಹೆಚ್ಚಾದಾಗ, ಹುಡುಗರ ಮನೆಗೇ ತೆರಳಲಾರಂಭಿಸಿದ್ದಾಳೆ. ಅಲ್ಲಿ ಅವರಿಗೆ ಮತ್ತು ಬರೆಸಿ, ಮನೆಯಲ್ಲಿದ್ದ ಮೌಲ್ಯಯುತ ವಸ್ತುವನ್ನೆಲ್ಲ ಕದಿಯಲಾರಂಭಿಸಿದ್ದಾಳೆ.
ಇತ್ತೀಚೆಗೆ ಒಬ್ಬ ವ್ಯಕ್ತಿ ಈ ವಿಚಾರವಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ. ದೂರಿನ ಆಧಾರದ ಮೇಲೆ ಸಯಾಲಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈವರೆಗಿನ ಎಲ್ಲ ಪ್ರಕರಣಗಳೂ ಹೊರಬಿದ್ದಿದೆ. ಈವರೆಗೆ 16 ಹುಡುಗರಿಗೆ ಇದೇ ರೀತಿ ಮೋಸ ಮಾಡಿದ್ದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ಬಳಿ ಇದ್ದ 15.25 ಲಕ್ಷ ಮೌಲ್ಯದ ಕದ್ದ ವಸ್ತವನ್ನು ವಶ ಪಡಿಸಿಕೊಳ್ಳಲಾಗಿದೆ. ಸಯಾಲಿಯಿಂದ ಮೋಸ ಹೋದ ಯುವಕರು ಪೊಲೀಸ್​ ದೂರು ನೀಡಬೇಕೆಂದು ಪೊಲೀಸರು ಪ್ರಕಟಣೆ ಹೊರಡಿಸಿದ್ದು, ಈವರೆಗೆ ನಾಲ್ವರು ದೂರು ದಾಖಲಿಸಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)
ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − two =
Remember me
