ನವದೆಹಲಿ:ಇದು ಡಿಜಿಟಲ್ ಯುಗ ಎಂಬುದನ್ನು ಇಂದಿನ ಯುವ ಜನತೆ ಪದೇ ಪದೇ ತಮ್ಮ ಹುಚ್ಚಾಟಗಳಿಂದ ಸಾಬೀತುಪಡಿಸುತ್ತಿದ್ದಾರೆ. ಫೇಸ್​​ಬುಕ್​, ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಇದೀಗ ರೀಲ್ಸ್​ ಮಾಡಿ ಪೋಸ್ಟ್​ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಇದನ್ನೂ ಓದಿ:ಪ್ರೀತಿಗೆ ವಯಸ್ಸಿನ ಹಂಗಿಲ್ಲ ನೋಡಿ… 76 ವರ್ಷದ ವೃದ್ಧ, 47ರ ಮಹಿಳೆಯನ್ನು ಮದುವೆಯಾದ
ಲೈಕ್ಸ್​, ಕಮೆಂಟ್​​ಗಳನ್ನು ಪಡೆಯುವ ಮೂಲಕ ನೆಟ್ಟಿಗರ ಗಮನ ಸೆಳೆಯುವ ಪ್ರಯತ್ನದಲ್ಲಿ ಇಂದಿನ ಯುವಕ-ಯುವತಿಯರು ಎಲ್ಲೆಂದರಲ್ಲಿ ರೀಲ್ಸ್ ಮಾಡಿ ಪೋಸ್ಟ್​ ಮಾಡುತ್ತಿದ್ದಾರೆ. ಅದರಲ್ಲೂ ಅತೀ ಮುಖ್ಯವಾಗಿ ಸಾರ್ವಜನಿಕರು ದಿನನಿತ್ಯ ಸಂಚರಿಸುವ ಮೆಟ್ರೋ ರೈಲಿನೊಳಗೆ ರೀಲ್ಸ್​ ಮಾಡುವವರ ಹಾವಳಿ ಅಧಿಕವಾಗಿದೆ. ಇದೇ ಸಾಲಿನಲ್ಲಿ ಇಲ್ಲೊಬ್ಬಳು ಯುವತಿ ರೈಲಿನೊಳಗೆ ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ನಡುವೆ ಡ್ಯಾನ್ಸ್​ ಮಾಡುವ ಮೂಲಕ ರೀಲ್ಸ್​ ಮಾಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
A post shared by Seema Kanojiya (@seemakanojiya87)
ವಿಡಿಯೋಗೆ ಕಮೆಂಟ್​ ಮಾಡಿದ ನೆಟ್ಟಿಗರು, ರೈಲಿನ ಅಧಿಕಾರಿಗಳು ಇದೆಕ್ಕೆಲ್ಲಾ ಅನುಮತಿ ಕೊಡಬಾರದು, ಬದಲಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಇದು ನಡೆಯಬಾರದು ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).
ಪೊಲೀಸ್ ಸಿಬ್ಬಂದಿಯನ್ನು ಉತ್ತೇಜಿಸಲು ಬಾಡಿ ವೋರ್ನ್ ಕ್ಯಾಮೆರಾ ಧರಿಸಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 16 =
Remember me
