ಹುಟ್ಟುಹಬ್ಬದಆಚರಣೆ ಎಂದಾಕ್ಷಣ ಮೊದಲು ನೆನಪಾಗುವುದು ಕೇಕ್. ಹುಟ್ಟುಹಬ್ಬ ಮಾತ್ರವಲ್ಲ, ಮದುವೆ, ಇತರೆ ಶುಭ ಸಮಾರಂಭಗಳಲ್ಲೂ ಕೇಕ್ ಇರಲೇಬೇಕು. ವಿವಿಧ ಬಗೆಯ ಕೇಕ್‌ಗಳು ಗ್ರಾಹಕರಿಗೆ ಲಭ್ಯವಿವೆ. ಕೇಕ್ ತಯಾರಿಕಾ ಕಂಪನಿಗಳು ರುಚಿಕರವಾದ ಕೇಕ್ ತಯಾರಿಸಿ ಗ್ರಾಹಕರನ್ನು ಸೆಳೆಯುತ್ತವೆ. ಆದರೆ ಇತ್ತೀಚೆಗೆ ಕಳಪೆ ಗುಣಮಟ್ಟದ ಕೇಕ್​ನಿಂದಾಗಿ ರೋಗ ರುಜಿನಗಳು ಬರುತ್ತಿವೆ. ಕೆಲವೆಡೆ ಜೀವಹಾನಿಯಾಗಿರುವ ಘಟನೆಗಳೂ ನಡೆದಿವೆ. ಅದೇ ರೀತಿ ಹುಡುಗಿಯೊಬ್ಬಳು ತನ್ನ ಹುಟ್ಟುಹಬ್ಬದಂದು ಕೇಕ್ ತಿಂದು ಸಾವಿಗೀಡಾಗಿದ್ದಳು. ಕಳೆದ ತಿಂಗಳು ಪಂಜಾಬ್​ನಲ್ಲಿ ಈ ದಾರುಣ ಘಟನೆ ನಡೆದಿತ್ತು.
ಮಾನ್ವಿ ಹೆಸರಿನ ಬಾಲಕಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಕೇಕ್​ ಆರ್ಡರ್ ಮಾಡಲಾಗಿತ್ತು. ಕೇಕ್​ ಕತ್ತರಿಸಿ ಹುಟ್ಟುಹಬ್ಬ ಸಂಭ್ರಮ ಮಾಡಿದ ಬೆನ್ನಲ್ಲೇ ಕುಟುಂಬದವರೆಲ್ಲರೂ ವಾಂತಿ ಮಾಡಿಕೊಂಡರು. ಇದನ್ನು ಗಮನಿಸಿದ ನೆರೆ ಮನೆಯವರು ತಕ್ಷಣ ಎಲ್ಲರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, 10 ವರ್ಷದ ಬಾಲಕಿ ಮಾನ್ವಿ ಮಾತ್ರ ಬದುಕುಳಿಯಲಿಲ್ಲ.
ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಬೇಕರಿ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡರು. ಕೇಕ್​ ತಿಂದ ತಕ್ಷಣ ಅಸ್ವಸ್ಥರಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಕೇಕ್​ನಲ್ಲಿ ವಿಷ ಸೇರಿಸಲಾಗಿತ್ತೆ ಎಂಬ ಅನುಮಾನದೊಂದಿಗೆ ತನಿಖೆ ಆರಂಭಿಸಿದ್ದರು.
ಆದರೆ ಇದೀಗ ಮಾನ್ವಿ ಸಾವಿಗೆ ಅಸಲಿ ಕಾರಣ ಏನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಅಧಿಕಾರಿಗಳು ಸ್ಫೋಟಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಕೇಕ್‌ನಲ್ಲಿ ಕೃತಕ ಸಿಹಿಕಾರಕ ಸ್ಯಾಕ್ರರಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸಾಮಾನ್ಯವಾಗಿ, ಇದನ್ನು ಆಹಾರ ಮತ್ತು ಪಾನೀಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆದರೆ, ಕೇಕ್​ನಲ್ಲಿ ಅತಿಯಾಗಿ ಬಳಸಿದ್ದರಿಂದ ತಿಂದವರೆಲ್ಲ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಕೇಕ್ ತಯಾರಿಸಿದ ಬೇಕರಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.(ಏಜೆನ್ಸೀಸ್​)
ಒಮ್ಮೆ ಪೊದೆಯಲ್ಲಿ ಬಟ್ಟೆ ಬದಲಾಯಿಸುವಾಗ… ಯುದ್ಧಕಾಂಡ ನಟಿಯ ಬದುಕಿಗೆ ತಿರುವು ನೀಡಿತು ಆ ಒಂದು ಘಟನೆ

ನಾನು ಮೂರು ಮದ್ವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ! ನಟಿ ಲಕ್ಷ್ಮೀ ಓಪನ್ ಟಾಕ್

ಪ್ರೀತಿ ಕೊಂದವಳಿಗೆ ಸುಪ್ರೀಂಕೋರ್ಟ್​ ಶಾಕ್!​ ಸರಸಕ್ಕೆ ಕರೆದು ವಿಷಕಾರಿದಾಕೆಗೆ ಮತ್ತೆ ಎದುರಾಯ್ತು ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − three =
Remember me
