ಪಟನಾ:ಕರೊನಾ ಬಂದಾಗಿನಿಂದ ಬೇರೆ ಕಾಯಿಲೆಗಳ ಚಿಕಿತ್ಸೆಯೂ ಕಷ್ಟಸಾಧ್ಯವಾಗಿಬಿಟ್ಟಿದೆ. ಅದೇ ರೀತಿ ತನ್ನ ಎಂಟು ವರ್ಷದ ಮಗಳ ಗಂಟಲಲ್ಲಿ ಲಿಚ್ಚಿ ಹಣ್ಣು ಸಿಕ್ಕಿಹಾಕಿಕೊಂಡಿದೆ ಎಂದು ಆಸ್ಪತ್ರೆಗೆ ಕರೆದುಕೊಂಡ ಹೋದ ತಂದೆಗೆ ಆಸ್ಪತ್ರೆ ಕರೊನಾ ರಿಪೋರ್ಟ್​ ತರಲು ಹೇಳಿದ್ದು, ಬಾಲಕಿ ತಂದೆಯ ತೋಳಿನಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬಿಹಾರದ ಮುಜಾಫರ್​ಪುರದಲ್ಲಿ ನಡೆದಿದೆ.
ಮುಸಾಹಾರಿ ಬ್ಲಾಕ್‌ನಲ್ಲಿರುವ ರಘುನಾಥಪುರದ ನಿವಾಸಿ ಸಂಜಯ್​ ರಾಮ್​ನ ಎಂಟು ವರ್ಷದ ಮಗಳು ಜೂನ್​ 1ರಂದು ಮನೆಯಲ್ಲಿ ಲಿಚ್ಚಿ ಹಣ್ಣು ತಿನ್ನುತ್ತಾ ಕುಳಿತಿದ್ದಾಗ ಆಕಸ್ಮಿಕವಾಗಿ ಅದರ ಬೀಜವನ್ನೂ ನುಂಗಿಬಿಟ್ಟಿದ್ದಾಳೆ. ಗಂಟಲಲ್ಲಿ ಬೀಜ ಸಿಕ್ಕಿಹಾಕಿಕೊಂಡು ಒದ್ದಾಡಲಾರಂಭಿಸಿದ್ದಾಳೆ. ತಕ್ಷಣ ಸಂಜಯ್​ ಮಗಳನ್ನು ಹೆಗಲ ಮೇಲೆ ಹೊತ್ತಿಕೊಂಡು ಹತ್ತಿರವಿದ್ದ ಸದಾರ್​ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ನನ್ನ ಮಗಳಿಗೆ ಚಿಕಿತ್ಸೆ ಕೊಡಿ ಎಂದು ವೈದ್ಯರಲ್ಲಿ ಬೇಡಿಕೊಂಡಿದ್ದಾನೆ.
ಆದರೆ ಯಾವುದೇ ಚಿಕಿತ್ಸೆ ಕೊಡುವುದಕ್ಕೂ ಮುನ್ನ ರೋಗಿಯ ಕರೊನಾ ವರದಿ ನೀಡುವುದು ಅವಶ್ಯಕ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ. ಕರೊನಾ ಟೆಸ್ಟ್​, ಅದರ ರಿಪೋರ್ಟ್​ ಎಂದು ನಾಲ್ಕು ಗಂಟೆಗಳ ಕಾಲ ಆತನನ್ನು ಕಾಯಿಸಲಾಗಿದೆ. ಅಷ್ಟರಲ್ಲಾಗಲೇ ಸಾಕಷ್ಟು ಒದ್ದಾಡಿದ್ದ ಬಾಲಕಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ.
ಪ್ರಾಣ ಬಿಟ್ಟ ಮಗಳನ್ನು ತೋಳಿನಲ್ಲಿ ಎತ್ತಿಕೊಂಡಿದ್ದ ಸಂಜಯ್​ ಆಸ್ಪತ್ರೆಯ ಎದುರೇ ಜೋರಾಗಿ ಅಳಲಾರಂಭಿಸಿದ್ದಾನೆ. ಅದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದಾದ ನಂತರ ಎಚ್ಚೆತ್ತುಕೊಂಡು ವೈದ್ಯಾಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡುವುದಾಗಿಯೂ ಅವರು ಹೇಳಿದ್ದಾರೆ. (ಏಜೆನ್ಸೀಸ್)
‘ಅಪ್ಪಾ, ನನ್ನ ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ವೈದ್ಯೆ

ಕರೊನಾ ಗೆದ್ದರೂ ಬಿಡಲೇ ಇಲ್ಲ ವಿಧಿ! ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 11 =
Remember me
