ಆಲಪ್ಪುಳ:ವಿಷಕಾರಿ ಹಣ್ಣನ್ನು ತಿಂದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹುಡುಗಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ದುರಂತ ಸಾವಿಗೀಡಾಗಿರುವ ಘಟನೆ ಕೇರಳ ಆಲಪ್ಪುಳದಲ್ಲಿ ನಡೆದಿದೆ.
ವೀಣಾ (14) ಮೃತ ಬಾಲಕಿ. ಈಕೆ ಆಲಪ್ಪುಳದ ಕನ್ನಂಚೇರಿಯ ಕರುವಟ್ಟ ಮೂಲದವಳು. 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಮೊದಲು ಹರಿಪ್ಪಾದ್​ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಆಕೆ ವಿಷಕಾರಿ ಹಣ್ಣನ್ನು ತಿಂದಿರುವ ಬಗ್ಗೆ ಯಾವುದೇ ಸುಳಿವನ್ನು ನೀಡಲಿಲ್ಲ.
ಹಣ್ಣು ತಿಂದಿದ್ದರ ಬಗ್ಗೆ ಹೇಳಿದ್ದರೆ ಸೂಕ್ತ ಚಿಕಿತ್ಸೆಯನ್ನು ನೀಡಿ ಹುಡುಗಿ ಉಳಿಸಬಹುದಾಗಿತ್ತು. ಆದರೆ, ವೀಣಾ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಆಕೆ ಸಾಮಾನ್ಯ ಚಿಕಿತ್ಸೆ ನೀಡಿ ವಾಪಸ್​ ಕಳುಹಿಸಲಾಯಿತು.
ಇದನ್ನೂ ಓದಿ:ಜಲಾಶಯ ಭರ್ತಿ, ಆತಂಕ ಮಾಯ: ರಾಜ್ಯಾದ್ಯಂತ ಇನ್ನಷ್ಟು ಬಿರುಸು ಪಡೆದ ಮಳೆ; ಉಕ್ಕಿ ಹರಿದ ನದಿಗಳು, ಮತ್ತೆ ನಾಲ್ವರು ಬಲಿ
ಇದಾದ ಮಾರನೇ ದಿನ ವೀಣಾಳ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಮತ್ತೆ ಆಕೆಯನ್ನು ವಂದಾನಂ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ವೀಣಾ ತಾನು ವಿಷಯುಕ್ತ ಹಣ್ಣನ್ನು ಸೇವಿಸಿದ್ದಾಗಿ ಬಹಿರಂಗಪಡಿಸಿದ್ದಾಳೆ. ಆದರೆ, ಅಷ್ಟರಲ್ಲಾಗಲೇ ತಡವಾಗಿತ್ತು. ಚಿಕಿತ್ಸೆ ನೀಡಿದರೂ ವೀಣಾ ಬದುಕುಳಿಯಲಿಲ್ಲ.
ವೈದ್ಯರ ಬಳಿ ಏನನ್ನು ಮುಚ್ಚಿಡಬಾರದು ಎಂದು ಹೇಳುವುದು ಇದೇ ಕಾರಣಕ್ಕೆ. ವೀಣಾ ಮೊದಲೇ ತಾನು ವಿಷಯುಕ್ತ ಹಣ್ಣನ್ನು ಸೇವಿಸಿದ್ದೇನೆ ಎಂದು ಹೇಳಿದ್ದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತು ಆಕೆಯ ಪ್ರಾಣ ಉಳಿಯುತ್ತಿತ್ತು. ಆದರೆ, ಆಕೆ ಮಾಡಿದ ಒಂದು ಸಣ್ಣ ಪ್ರಮಾದ ಇದೀಗ ಆಕೆಯ ಪ್ರಾಣವನ್ನು ಕಸಿದುಕೊಂಡಿದೆ. ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.(ಏಜೆನ್ಸೀಸ್​)
ಭಾರತದ ಕ್ಷಾತ್ರತೇಜ ಪರಂಪರೆಯ ಕದನ ಕಥನವಿದು

ಪತ್ರ ಸಮರವೇನಿಲ್ಲ, ಎಲ್ಲವೂ ಊಹಾಪೋಹ: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥನೆ; ಲೆಟರ್ ಬರೆದಿದ್ದು ನಿಜ ಎಂದ ಶಾಸಕ ರಾಯರಡ್ಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 5 =
Remember me
