ನವದೆಹಲಿ:ಇತ್ತೀಚಿನ ದಿನಗಳಲ್ಲಿ ಸಂಬಂಧಗಳಲ್ಲಿನ ಬಿರುಕು ಮತ್ತು ಮೋಸ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಈ ಡಿಜಿಟಲ್ ಯುಗದಲ್ಲಂತೂ ನಿಷ್ಠಾವಂತ, ಕಾಳಜಿಯುಳ್ಳ ಮತ್ತು ಸಂಪೂರ್ಣ ಪ್ರೀತಿಸುವ ಸೂಕ್ತ ಪಾಲುದಾರನನ್ನು ಹುಡುಕುವುದೇ ತುಂಬಾ ಕಷ್ಟಕರವಾಗಿರುತ್ತದೆ.
ನಿಜವಾದ ಪ್ರೀತಿ ಮತ್ತು ಬದ್ಧತೆಗಳು ಸಿನಿಮಾ, ನಾಟಕ ಮತ್ತು ಟಿವಿ ಸೀರಿಯಲ್​ಗಳಿಗೆ ಸೀಮಿತವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಯುವತಿಯೊಬ್ಬಳು ಪ್ರತಿಷ್ಠಿತ ಮೈಕ್ರೋಸಾಫ್ಟ್​ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ ಬಳಿಕ ಬಾಯ್​ಫ್ರೆಂಡ್​ಗೆ ಕೈಕೊಟ್ಟಿರುವ ಪ್ರಸಂಗ ಇದೀಗ ವರದಿಯಾಗಿದೆ. ಗಮನಾರ್ಹ ಸಂಗತಿ ಏನೆಂದರೆ, ಯುವತಿಯನ್ನು ಸಂದರ್ಶನಕ್ಕೆ ತಯಾರು ಮಾಡಿದ್ದು, ಪ್ರಾಜೆಕ್ಟ್​, ಡಿಎಸ್​ಎ ಮತ್ತು ಆಕೆಯ ರೆಸ್ಯೂಮ್ ವಿನ್ಯಾಸ ಮಾಡಲು ಯುವಕ ನೆರವು ನೀಡಿದ್ದ.​
ಸಂತ್ರಸ್ತ ಯುವಕ ತನ್ನ ಫ್ರೆಂಡ್​ ಜತೆ ಮಾಡಿರುವ ವಾಟ್ಸ್​ಆ್ಯಪ್​ ಚಾಟ್ ಸ್ಕ್ರೀನ್​ಶಾಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಪ್ರೇಮಿಗಳ ದಿನದ ಪ್ಲ್ಯಾನ್​ ಏನು ಎಂದು ಫ್ರೆಂಡ್​ ಕೇಳಿದಾಗ ಸಂತ್ರಸ್ತ ಯುವಕ ತನ್ನ ನೋವನ್ನು ಬಿಚ್ಚಿಟ್ಟಿದ್ದಾನೆ.
ಪ್ಲ್ಯಾನ್​ ಏನು ಇಲ್ಲ ಬ್ರೋ…ಆಕೆ ಮುಂದುವರಿಯಲು ಬಯಸಿಲ್ಲ. ಆಕೆಯನ್ನು ನಾನು ಸಂದರ್ಶನಗಳಿಗೆ, ಡಿಎಸ್​ಎ ಮತ್ತು ಪ್ರಾಜೆಕ್ಟ್​ಗಳಿಗೆ ತಯಾರು ಮಾಡಿದೆ. ಅಷ್ಟೇ ಏಕೆ ಆಕೆಯ ರೆಸ್ಯೂಮ್​ ಸಹ ನಾನೇ ರೆಡಿ ಮಾಡಿದೆ. ನನ್ನ ನೆರವಿನಿಂದ ಆಕೆ ಮೈಕ್ರೋಸಾಫ್ಟ್​ನಲ್ಲಿ ಉದ್ಯೋಗ ಸಹ ಪಡೆದುಕೊಂಡಳು. ಆದರೆ, ಇಂದು ಮೈಕ್ರೋಸಾಫ್ಟ್​ನ ಉದ್ಯೋಗಿ ಜತೆ ಡೇಟಿಂಗ್​ಗೆ ಹೋಗಿದ್ದಾಳೆ. ನಾನು ಮಾತ್ರ ಇನ್ನೂ ನಿರುದ್ಯೋಗಿಯಾಗಿದ್ದೇನೆ ಎಂದು ಯುವಕ ಹೇಳಿದ್ದಾನೆ. ಅಲ್ಲದೆ, ಕೊನೆಯಲ್ಲಿ ಏಕಾಂಗಿಯಾಗೇ ಉಳಿಯಿರಿ ಬ್ರೋ ಎಂದು ಚಾಟ್​ ಕೊನೆಗೊಳಿಸಿದ್ದಾರೆ.

ಚಾಟ್​ನ ಸ್ಕ್ರೀನ್​ಶಾಟ್​ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ಸಾಕಷ್ಟು ಕಾಮೆಂಟ್​ಗಳ ಮೂಲಕ ಸಂತ್ರಸ್ತ ಯುವಕನಿಗೆ ಧೈರ್ಯ ತುಂಬುತ್ತಿದ್ದಾರೆ.(ಏಜೆನ್ಸೀಸ್​)
ಹಗಲು-ರಾತ್ರಿ ದುಡಿದು ಪತ್ನಿಯ ಓದಿಗೆ ನೆರವು: ಸರ್ಕಾರಿ ಕೆಲಸ ಸಿಗುತ್ತಿದ್ದಂತೆ ಗಂಡನಿಗೆ ಬಿಗ್ ಶಾಕ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − twelve =
Remember me
