ಪಂಜಾಬ್:ಒಂದೂವರೆ ವರ್ಷದ ಬಾಲಕಿಯೊಬ್ಬಳು ಕಿರಾಣಿ ಅಂಗಡಿಯಿಂದ ಖರೀದಿಸಿದ ಚಾಕಲೇಟ್ ತಿಂದಿದ್ದು, ಬಳಿಕ ತೀವ್ರ ರಕ್ತ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ಘಟನೆ ಪಂಜಾಬ್​ನ ಲೂಧಿಯಾನದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಅಂಡಾಶಯ ಕ್ಯಾನ್ಸರ್​ಗೆ ಖ್ಯಾತ ಫ್ಯಾಷನ್ ಪ್ರಭಾವಿ ಸುರಭಿ ಜೈನ್ ಮೃತ್ಯು: 30 ನೇ ವಯಸ್ಸಿಗೇ ಕೊನೆಗೊಂಡಿತು ಬದುಕು…
ಹುಡುಗಿಯ ಸಂಬಂಧಿಕರೊಬ್ಬರು ನೀಡಿದ ಹೇಳಿಕೆಯ ಪ್ರಕಾರ, ಬಾಲಕಿ ಪಟಿಯಾಲಾದಲ್ಲಿರುವ ತನ್ನ ಕುಟುಂಬಸ್ಥರ ಮನೆಗೆ ಭೇಟಿ ನೀಡಿದಾಗ ಆಕೆಯ ಸಂಬಂಧಿಕರು ಅವಳಿಗೆ ತಿಂಡಿಗಳ ಪೆಟ್ಟಿಗೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆಗ ಅದರೊಳಗೆ ಚಾಕೊಲೇಟ್‌ ಇರುವುದು ಕಂಡುಬಂದಿದೆ. ಅದನ್ನು ತಿಂದ ಕೆಲವು ನಿಮಿಷಗಳಲ್ಲೇ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದಾಳೆ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು, ಹೆಚ್ಚಿನ ಮಾಹಿತಿ ಪಡೆಯಲು ವೈದ್ಯರನ್ನು ಸಂಪರ್ಕಿಸಿದ್ದಾರೆ. ಆಗ ಬಾಲಕಿ ಅವಧಿ ಮೀರಿದ ಚಾಕೊಲೇಟ್ ತಿಂದ ಕಾರಣ ಅಸ್ವಸ್ಥಳಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಘಟನೆಯ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ:24/7-2047… ನರೇಂದ್ರ ಮೋದಿ ಹೊಸ ಘೋಷಣೆ
ಸ್ನ್ಯಾಕ್ ಬಾಕ್ಸ್ ಖರೀದಿಸಿದ ಅಂಗಡಿಯನ್ನು ತಲುಪಿದ ಪೊಲೀಸರು ಮತ್ತು ಆರೋಗ್ಯ ಇಲಾಖೆಯು ಅಂಗಡಿಯಲ್ಲಿ ಅವಧಿ ಮೀರಿದ ತಿನಿಸುಗಳನ್ನು ಮಾರಾಟ ಮಾಡಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ತದನಂತರ ಅಂಗಡಿಯಿಂದ ಎಕ್ಸ್ಪೈರಿ ಡೇಟ್ ಮೀರಿದ ಇತರೆ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ,(ಏಜೆನ್ಸೀಸ್).
ನೀನೆಂದಿಗೂ ನನ್ನ ಜತೆಯಲ್ಲೇ ಇರ್ತೀಯಾ ಮಗನೇ; ಭಾವುಕರಾದ ಶಿಖರ್ ಧವನ್​ಗೆ ಫ್ಯಾನ್ಸ್​ ಆಸರೆ

4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
