ಮುಂಬೈ:ಮುಂಬೈನ ವಿರಾರ್ ಎಂಬಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದ್ದು ಬಾಲಕಿಯೊಬ್ಬಳು 4ನೇ ಮಹಡಿಯಿಂದ ಜಾರಿ ಬಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅದೃಷ್ಟವಶಾತ್ ಆ ಬಾಲಕಿ ಕೆಳಗೆ ಕುಳಿತಿದ್ದ ವ್ಯಕ್ತಿಯೊಬ್ಬರ ಮಡಿಲಿಗೆ ನೇರವಾಗಿ ಬಿದ್ದಿದ್ದಳು.
ಜೀವದಾನಿ ದರ್ಶನ್ ಎಂಬ ಹೆಸರಿನ ಕಟ್ಟಡದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ಕಾರ್ಯಕ್ಕಾಗಿ ಕಟ್ಟಡದ ಒಳಗೆ ನಡೆದಾಡುವ ದಾರಿಗೆ ಅಳವಡಿಸಿದ್ದ ಲೋಹದ ರೇಲಿಂಗ್ ಅನ್ನು ತೆಗೆದುಹಾಕಿ ಅದರ ಸುತ್ತಲೂ ಹಸಿರು ಹೊದಿಕೆಯನ್ನು ಹಾಕಲಾಗಿತ್ತು. ರಾತ್ರಿ 9 ಗಂಟೆ ಸುಮಾರಿಗೆ ದೇವಶಿ ಸಹಾನಿ ಎಂಬ ಬಾಲಕಿ ಅದೇ ಕಟ್ಟಡದಲ್ಲಿದ್ದ ತನ್ನ ಮನೆಯಿಂದ ಹೊರಗೆ ಬಂದಿದ್ದಾಳೆ. ಹಾದಿಯ ಮೂಲಕ ನಡೆದುಕೊಂಡು ಹೋಗುವಾಗ, ರೇಲಿಂಗ್ಸ್ ಇರದ ಕಾರಣ ಹಸಿರು ಹೊದಿಕೆಗಳ ನಡುವೆ ಇದ್ದ ಅಂತರದ ಮೂಲಕ ಜಾರಿ ಹೊರಗೆ ಕುಳಿತಿದ್ದ 28 ವರ್ಷದ ಶಿವಕುಮಾರ್ ಜೈಸ್ವಾಲ್ ಎಂಬ ವ್ಯಕ್ತಿಯ ತೊಡೆಯ ಮೇಲೆ ಬಿದ್ದಿದ್ದಾಳೆ.
ಆರಂಭದಲ್ಲಿ ಕೆಳಗಿನ ಮಹಡಿಗಳಲ್ಲಿ ವಾಸವಿದ್ದ ಜನರು, ನಿರ್ಮಾಣ ಸಾಮಗ್ರಿಗಳು ಬಿದ್ದಿರಬಹುದು ಎಂದು ತಪ್ಪಾಗಿ ಗ್ರಹಿಸಿದ್ದರು. ಆದರೆ ಜೈಸ್ವಾಲ್ ಮೂಲಕ ಘಟನೆಯ ಮಾಹಿತಿ ಪಡೆದ ಕಟ್ಟಡದ ನಿವಾಸಿಗಳು ತಕ್ಷಣ ಮಗುವಿನ ಪೋಷಕರನ್ನು ಎಚ್ಚರಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ, ಅವಳ ಹಣೆಯ ಮೇಲೆ ಎಂಟು ಹೊಲಿಗೆಗಳನ್ನು ಹಾಕಲಾಗಿದೆ. ಆ ಬಾಲಕಿಯೊಂದಿಗೆ ಜೈಸ್ವಾಲ್ ಗೂ ಪೆಟ್ಟಾಗಿದ್ದು ಅವನ ತೊಡೆಗೆ ಸಣ್ಣ ಪ್ರಮಾಣದ ಪೆಟ್ಟಾಗಿದೆ. ಇದೀಗ ಬಿಲ್ಡರ್ ಮತ್ತು ಗುತ್ತಿಗೆದಾರನ ವಿರುದ್ಧ ವಿರಾರ್ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್)
ವಿಮಾನ ದುರಂತದಲ್ಲಿ ಬದುಕುಳಿದ 4 ಮಕ್ಕಳು 40 ದಿನಗಳ ಬಳಿಕ ಕಾಡಿನಲ್ಲಿ ಪತ್ತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
