ನವದೆಹಲಿ:ಪ್ರತಿಯೊಬ್ಬರೂ ತಮ್ಮ ಮಗ ಹಾಗೂ ಮಗಳಿಗೆ ಮದುವೆ ಮಾಡಬೇಕು. ಮೊಮ್ಮಕ್ಕಳ ಜತೆ ನಾವು ಕಾಲ ಕಳೆಯಬೇಕು ಎಂದು ಆಸೆ ಪಡುತ್ತಾರೆ. ಒಳ್ಳೆಯ ಮನೆಗೆ ಮಗಳನ್ನು ಮದುವೆ ಮಾಡಿಕೊಡಬೇಕೆಂದು ಬಯಸುತ್ತಾರೆ. ಇಲ್ಲೊಬ್ಬ ವ್ಯಕ್ತಿ ತನ್ನ ಮಗಳನ್ನು ಮದುವೆ ಆಗಲು ಮುಂದೆ ಬರುವ ವರನಿಗೆ ಆಫರ್​ ಮೇಲೆ ಆಫರ್​ ಘೋಷಣೆ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ.
ಅಂಕಿತಾ ಪಾಟೇಲ್‌ ಎಂಬವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಡಾಕ್ಟರ್‌ ವೃತ್ತಿಯಲ್ಲಿರುವ ತಂದೆ ತನ್ನ ಮಗಳನ್ನು ಯಾರು ಮದುವೆಯಾಗುತ್ತಾನೋ ಆತನಿಗೆ 2 ಕೋಟಿ ಬೆಲೆಯ ಬಂಗಲೆ, ನಮ್ಮ ಕ್ಲಿನಿಕ್‌ ಮತ್ತು 50 ಲಕ್ಷ ಎಫ್.ಡಿ ಇದೆ ಅದನ್ನು ಆತನ ಹೆಸರಿಗೆ ಬರೆಯುತ್ತೇವೆ ಎಂದು ಹೇಳುವ ದೃಶ್ಯವನ್ನು ಕಾಣಬಹುದು.
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ವೈರಲ್​ ಆಗಿದ್ದು, ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ನಿಮ್ಮ ಮಗಳನ್ನು ನಾನು ಮದುವೆಯಾಗಲು ರೆಡಿ ಇದ್ದೇನೆ ಎಂದು ಕಾಮೆಂಟ್‌ ಮಾಡಿದ್ದಾರೆ.
A post shared by Ankita Patel (@ankita.patel__143)

ಶ್ರೀಮಂತ ವರನನ್ನು ಹುಡುಗಿಯ ಮನೆಯವರು ಆಯ್ಕೆ ಮಾಡುವ ಈ ಕಾಲದಲ್ಲಿ ಈತ ತನ್ನ ಮಗಳನ್ನು ಕೈ ಹಿಡುವ ಹುಡುಗ ಹೇಗಿದ್ರೂ ಪರವಾಗಿಲ್ಲ, ಆತ ನನ್ನ ಮಗಳನ್ನು ಮದುವೆಯಾದ್ರೆ ಸಾಕು.  ಆತನಿಗೆ 2 ಕೋಟಿಯ ಬಂಗಲೆಯ ಜೊತೆಗೆ 50 ಲಕ್ಷ ಎಫ್.ಡಿ ಕೂಡಾ ನೀಡುತ್ತೇನೆ ಎಂದು ಗಂಡ್‌ ಮಕ್ಳಿಗೆ ಬಿಗ್‌ ಆಫರ್‌ ಒಂದನ್ನು ನೀಡಿ ಸುದ್ದಿಯಾಗಿದ್ದಾನೆ.
ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬುವುದಕ್ಕೆ ಚಹಾ ಕಾರಣ! ಪದೇ ಪದೇ ಬಿಸಿ ಮಾಡಿ ಟೀ ಕುಡಿಯುವ ಅಭ್ಯಾಸ ಇದ್ರೆ ಇವತ್ತೇ ಬಿಟ್ಟುಬಿಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
