ನವದೆಹಲಿ:ತಾನು ಮದುವೆಯಾಗಬೇಕಿದ್ದ ಹುಡುಗಿಯ ಮನೆಯವರಿಗೆ ಹಿಂದು ಅಂತ ಸುಳ್ಳು ಹೇಳಿದ್ದ ಯುವಕನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಮುಸ್ಲಿಂ ಯುವಕನನ್ನು ಮದುವೆಗೆ ಕೇವಲ ಒಂದು ದಿನ ಇರುವಾಗ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಹಸೀನ್ ಸೈಫಿ ಎಂಬಾತನೇ ಬಂಧಿತ. ತನ್ನ ಹೆಸರನ್ನು ಅಶಿಶ್ ಠಾಕೂರ್ ಎಂದು ಹೇಳಿಕೊಂಡಿದ್ದ. ಗ್ರೇಟರ್ ನೋಯ್ಡದಲ್ಲಿ ವಾಸ ಮಾಡುತ್ತಿದ್ದ ಹಿಂದು ಯುವತಿ ಜತೆ ಆತನಿಗೆ ಪರಿಚಯವಾಗಿತ್ತು. ಆ ಯುವತಿ ಇತ್ತೀಚೆಗೆ ಯಾವುದೋ ಕಾರಣಕ್ಕೆ ಕೆಲಸ ಕಳೆದುಕೊಂಡ ನಂತರ ಆತ ಆಕೆಗೆ ಮತ್ತಷ್ಟು ಹತ್ತಿರವಾಗಿದ್ದ. ಬಾಡಿಗೆ ಮನೆಯೊಂದನ್ನು ಪಡೆದು ಇಬ್ಬರೂ ಜತೆಗೆ ವಾಸಿಸಲು ಆರಂಭಿಸಿದ್ದರು. ದೈಹಿಕ ಸಂಪರ್ಕವನ್ನೂ ಹೊಂದಿದ್ದರು. ಕೊನೆಗೆ ಮನೆಯಲ್ಲಿ ತಿಳಿಸಿ, ಇಬ್ಬರೂ ವಿವಾಹವಾಗಲು ಮುಂದಾಗಿದ್ದರು. ಹಸೀನ್ ಶೈಫಿಯ ತಂದೆ ಶಕೀಲ್ ಸೈಫಿ ಮೊನ್ನೆ ಒಂದು ದಿನ ಆತನನ್ನು ಹುಡುಕಿಕೊಂಡು ಇವರಿಬ್ಬರಿದ್ದ ಬಾಡಿಗೆ ಮನೆಗೆ ಬಂದಿದ್ದಾರೆ. ಆಗ ಇವರಿಬ್ಬರೂ ಮನೆಯಲ್ಲಿ ಇರಲಿಲ್ಲ. ಆದರೆ ನೆರೆ ಮನೆಯವರಿಗೆ ಫೋಟೋ ತೋರಿಸಿದಾಗ ವ್ಯಕ್ತಿ ಅವನೇ ಆದರೆ ಅವನ ಹೆಸರು ಹಸೀನ್ ಶೈಫಿ ಅಲ್ಲ ಆಶೀಶ್ ಅಂತ ನೆರೆಮನೆಯವರು ಆತನ ತಂದೆಗೆ ಹೇಳಿದರು. ಆದರೆ ಅವರು ಆತನ ನಿಜವಾದ ವಿಷಯ ತಿಳಿಸಿ ಅಲ್ಲಿಂದ ತೆರಳಿದರು. ನಂತರ ಈ ಜೋಡಿ ಮನೆಗೆ ಬಂದಾಗ ನೆರೆಮನೆಯವರು ಆ ಯುವತಿಗೆ ಆತನ ನಿಜವಾದ ಪೂರ್ವಾಪರ ತಿಳಿಸಿದ್ದಾರೆ. ಕೂಡಲೇ ಕುಟುಂಬದವರಿಗೆ ವಿಷಯ ತಿಳಿಸಿ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಬಾಡಿಗೆ ಮನೆಯಲ್ಲಿ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿರುವಾಗ ಈತ ಆಕೆ ಜತೆ ಅಶ್ಲೀಲ ವಿಡಿಯೋಗಳನ್ನು ಕೂಡ ಮಾಡಿದ್ದ. ಆ ವಿಡಿಯೋಗಳನ್ನೇ ಆಕೆಗೆ ತೋರಿಸಿ ಮದುವೆಯಾಗುವಂತೆ ಬ್ಲಾಕ್‌ಮೇಲ್ ಮಾಡಿದ್ದ. ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಆತನನ್ನು ಬಂಧಿಸಲಾಗಿದೆ ಎಂದು ಗ್ರೇಟರ್ ನೋಯ್ಡದ ಹಿರಿಯ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ಸುದ್ದಿಗಾರರಿಗೆ ಹೇಳಿದ್ದಾರೆ. ಆತನ ವಿರುದ್ಧ ವಿರುದ್ಧ ಈಗ ಪೊಲೀಸರು ಅತ್ಯಾಚಾರ, ಒತ್ತಾಯಪೂರ್ವಕ ಮತಾಂತರ, ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen + 8 =
Remember me
