ಗಾಜಿಯಾಬಾದ್‌(ಉತ್ತರ ಪ್ರದೇಶ):ಇಲ್ಲಿನ ನಿರ್ಜನ ರಸ್ತೆಯಲ್ಲಿ ತನ್ನ ಸ್ನೇಹಿತೆಯೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ 20ರ ಹರೆಯದ ಯುವತಿಯನ್ನು ಅಡ್ಡಗಟ್ಟಿದ ಐವರು ಯುವಕರ ಗುಂಪೊಂದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಇದನ್ನೂ ಓದಿ:VIDEO| ಹಾಡಹಗಲೇ ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಅಧ್ಯಕ್ಷನ ಗುಂಡಿಕ್ಕಿ ಹತ್ಯೆ
ರಸ್ತೆಯಲ್ಲಿ ಅದೇ ಸಮಯಕ್ಕೆ ವಾಹನವೊಂದು ಬಂದಿದ್ದು, ಅದರಲ್ಲಿದ್ದವರು ಮತ್ತೊಬ್ಬ ಯುವತಿಯನ್ನು ರಕ್ಷಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಮುಖ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾನೆ. ಆತನ ಕಾಲಿಗೆ ಗುಂಡೇಟು ತಗುಲಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆ ವಿವರ:ನ.30 ರಂದು ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಸ್ಕೂಟಿ ಓಡಿಸುವುದನ್ನು ಕಲಿಯುವುದಕ್ಕೆಂದು ರಸ್ತೆಗೆ ಬಂದಿದ್ದಾರೆ. ಇದನ್ನು ಜುನೈದ್ ಮತ್ತು ಅವನ ಸ್ನೇಹಿತ ಇಮ್ರಾನ್ ನೋಡಿದ್ದಾರೆ. ಬಳಿಕ ಅವರಿಬ್ಬರು ಮೂವರು ಸಹಚರರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ನಂತರ ಸ್ಕೂಟರ್​ ಅಡ್ಡಗಟ್ಟಿ ಬಾಲಕಿಯನ್ನು ಪೊದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಸಂತ್ರಸ್ತೆಯ ಸ್ನೇಹಿತೆಯನ್ನೂ ಎಳೆದೊಯ್ಯಲು ಯತ್ನಿಸಿದಾಗ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆಗ ಅದೇ ಸಮಯಕ್ಕೆ ವಾಹನವೊಂದು ಆ ಪ್ರದೇಶದ ಮೂಲಕ ಹಾದು ಹೋಗಿದ್ದರಿಂದ ಆಕೆಯನ್ನು ರಕ್ಷಿಸಲಾಗಿದೆ.
ಘಟನೆ ಬಳಿಕ ಆರೋಪಿಗಳನ್ನು ಹಿಡಿಯಲು ಶೋಧ ನಡೆಸುತ್ತಿದ್ದಾಗ ಭಾನುವಾರ ಪೊಲೀಸರು ಪ್ರಮುಖ ಆರೋಪಿ ಜುನೈದ್‌ನನ್ನು ಪತ್ತೆ ಮಾಡಿದ್ದು, ಹಿಡಿಯಲು ಯತ್ನಿಸಿದ್ದಾರೆ. ಆದರೆ ಆತ ಪೊಲೀಸರನ್ನು ಕಂಡೊಡನೆ ಓಡಿಹೋಗಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ ಪಿಸ್ತೂಲ್​ನಿಂದ ಗುಂಡು ಹಾರಿಸಿದ್ದಾನೆ.
ಕಡೆಗೆ ಪೊಲೀಸರ ಎನ್‌ಕೌಂಟರ್‌ನಲ್ಲಿ ಆತನ ಎರಡೂ ಕಾಲುಗಳಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಪೊಲೀಸರು ಜುನೈದ್‌ನನ್ನು ಆಸ್ಪತ್ರೆಯಲ್ಲಿ ವಿಚಾರಣೆಗೊಳಪಡಿಸಿದ್ದು, ಆತನ ಹೇಳಿಕೆ ಆಧರಿಸಿ ಉಳಿದ ಆರೋಪಿಗಳಾದ ಇಮ್ರಾನ್ ಮತ್ತು ಆತನ ಮೂವರು ಸಹಚರರನ್ನು ಬಂಧಿಸಲಾಗಿದೆ. ಇಮ್ರಾನ್ ಮತ್ತು ಅವರ ಮೂವರು ಸಹಾಯಕರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಸ್ಥಳದಿಂದ ಪಿಸ್ತೂಲ್ ಮತ್ತು ಕಾಟ್ರಿಡ್ಜ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳ ಕ್ರಿಮಿನಲ್ ಇತಿಹಾಸದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಜೇಬಿನಲ್ಲಿ ಲಕ್ಷಗಟ್ಟಲೆ ಹಣವಿದ್ದರೂ ಹಸಿವಿನಿಂದ ಪ್ರಾಣ ಬಿಟ್ಟ ಭಿಕ್ಷುಕ; ಕಾರಣ ನಿಗೂಢ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 2 =
Remember me
