ಮುಜಾಫರ್ನಗರ:ಚಿಕ್ಕ ಮಕ್ಕಳ ಹಠ ಕೆಲವೊಮ್ಮೆ ದೊಡ್ಡ ಅನಾಹುತಗಳಿಗೆ ಕಾರಣವಾಗಿಬಿಡುತ್ತದೆ. ದೂರದ ಸಂಬಂಧಿಯೊಬ್ಬರ ಮದುವೆಗೆ ಬರುತ್ತೇನೆಂದು ಹಠ ಹಿಡಿದ ಎಂಟು ವರ್ಷದ ಮಗಳು ಮಾಡಿಕೊಂಡ ಕೆಲಸ ಇದೀಗ ಪೂರ್ತಿ ಗ್ರಾಮವೇ ಬೆಚ್ಚಿಬೀಳುವಂತೆ ಮಾಡಿದೆ.
ಇದನ್ನೂ ಓದಿ:50 ಕೆಜಿ ಚೀಲ 7 ಸಾವಿರ ರೂ.ವರೆಗೂ ಅಲೂಗಡ್ಡೆ ಬಿತ್ತನೆ ಬೀಜ ಮಾರಾಟ, ಭೂಮಿ ಹದ ಮಾಡಿಕೊಂಡಿದ್ದ ರೈತರಲ್ಲಿ ದುಗುಡ
ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆ ನಿರ್ಧಾನ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಇತ್ತೀಚೆಗೆ ಸಂಬಂಧಿಯೊಬ್ಬರ ಮದುವೆಗೆಂದು ಅಮ್ಮ ಹೊರಟಿದ್ದರು. ಎಂಟು ವರ್ಷದ ಮಗಳನ್ನು ಮನೆಯಲ್ಲೇ ಬಿಟ್ಟು ಆಕೆಯ ತಮ್ಮನನ್ನು ಮದುವೆಗೆ ಕರೆದುಕೊಂಡು ಹೋಗು ನಿರ್ಧಾರವನ್ನು ತಾಯಿ ಮಾಡಿದ್ದಾಳೆ. ಮಗಳು ಅದೆಷ್ಟೇ ಗೋಗರೆದರೂ ಕೇಳದೆ, ಅವಳನ್ನು ಮನೆಯಲ್ಲೇ ಬಿಟ್ಟು ಮದುವೆಗೆ ಹೋಗಿದ್ದಾಳೆ.
ಅಮ್ಮ ಮದುವೆಗೆ ನನ್ನ ಬಿಟ್ಟು ಹೋದಳು ಎನ್ನುವ ಕೋಪಕ್ಕೆ ಬಿದ್ದ ಬಾಲಕಿ ಮಾಡಬಾರದ ತಪ್ಪು ಮಾಡಿಬಿಟ್ಟಿದ್ದಾಳೆ. ಮನೆಯ ಬಾಗಿಲನ್ನು ಒಳಗಿನಿಂದ ಹಾಕಿಕೊಂಡು ಕೋಣೆಯ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮದುವೆ ಮುಗಿಸಿಕೊಂಡು ಮನೆಗೆ ಬಂದ ಅಮ್ಮ, ಅದೆಷ್ಟೇ ಬಾಗಿಲು ತಟ್ಟಿದರೂ ಮಗಳು ಬಾಗಿಲು ತೆಗೆದಿಲ್ಲ. ಊರವರ ಸಹಾಯದಿಂದ ಬಾಗಿಲನ್ನು ಒಡೆದು ಒಳಗೆ ಹೋಗಲಾಗಿದೆ. ಆಗ ಮಗಳು ಶವವಾಗಿ ನೇಣಿನಲ್ಲಿ ನೇತಾಡುತ್ತಿರುವ ದೃಶ್ಯ ತಾಯಿಯ ಕಣ್ಣಿಗೆ ಕಂಡಿದೆ.
ಇದನ್ನೂ ಓದಿ:ತಪ್ಪಾಗುತ್ತಿದೆ ಅಂತ ಗೊತ್ತಿದ್ದರೂ ವಿಜಯ್​ ಯಾಕೆ ತಪ್ಪು ಮಾಡಿದ್ರು?
ಪೊಲೀಸರು ಸ್ಥಳಕ್ಕೆ ತಲುಪುವದರೊಳಗೆ ಬಾಲಕಿಯ ಅಂತ್ಯಸಂಸ್ಕಾರವನ್ನು ಮಾಡಿ ಮುಗಿಸಲಾಗಿತ್ತು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ವಯಸ್ಕ ಯುವತಿಯರಿಗೆ ಅವರಿಷ್ಟದಂತೆ ಬದುಕುವ ಹಕ್ಕಿದೆ; ಲವ್​ ಸ್ಟೋರಿಗೆ ಹೈ ಕೋರ್ಟ್​ ಸಪೋರ್ಟ್​

ಆರು ತಿಂಗಳ ಕಾಲ ಮುಷ್ಕರಕ್ಕಿಲ್ಲ ಅನುಮತಿ​! ಪ್ರತಿಭಟಿಸಿದರೆ ಸಾವಿರ ರೂ ದಂಡ, ಒಂದು ವರ್ಷ ಜೈಲು ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
