ಮುಂಬೈ:ಮನೆ ಮುಂದೆ ಕಸ ಹಾಕಿದ ಬಗ್ಗೆ ಉಂಟಾದ ಜಗಳದ ಹಿನ್ನೆಲೆಯಲ್ಲಿ 11 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಿಂದ ವರದಿಯಾಗಿದೆ. ಈ ಸಂಬಂಧವಾಗಿ ಜಗಳವಾಡಿದ ಮಹಿಳೆಯ ಮೇಲೆ ಆತ್ಮಹತ್ಯೆಯನ್ನು ಪ್ರಚೋದಿಸಿದ ಆರೋಪದ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಮನೆಯ ಮುಂದೆ ಕಸ ಎಸೆದಿದ್ದನ್ನು ವಿರೋಧಿಸಿದ ತಮ್ಮ 11 ವರ್ಷದ ಮಗಳಿಗೂ ಪಕ್ಕದ ಮನೆಯಾಕೆಗೂ ಮಾರ್ಚ್​ 6 ರ ಬೆಳಿಗ್ಗೆ ಜಗಳವಾಯಿತು. ಅವಾಚ್ಯ ಶಬ್ದಗಳಿಂದ ನಿಂದಿಸಿದ ಪಕ್ಕದ ಮನೆಯಾಕೆ ಬಾಲಕಿಯನ್ನು ಸಾಯಿಸಿಬಿಡುವುದಾಗಿ ಬೆದರಿಕೆ ಸಹ ಹಾಕಿದ್ದಳು. ಅದೇ ಮಧ್ಯಾಹ್ನ ತಮ್ಮ ಮಗಳು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ತಾಯಿಯೊಬ್ಬರು ಟ್ರಾಂಬೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಬಂಗಾಳ : ಎಬಿವಿಪಿ ಸದಸ್ಯರ ಮೇಲೆರಗಿದರೇ… ಟಿಎಂಸಿ ರೌಡಿಗಳು?!
ಮುಂಬೈನ ಮಾನ್‌ಖುರ್ದ್ ಪ್ರದೇಶದ ಭೀಮ ನಗರದ ನಿವಾಸಿ ನೀಡಿರುವ ದೂರಿನಲ್ಲಿ, “ತೀವ್ರವಾದ ವಾದವಿವಾದದ ಸಮಯದಲ್ಲಿ, ಆರೋಪಿ ಮಹಿಳೆಯು ಮೃತ ಬಾಲಕಿಯನ್ನು ನಿಂದಿಸಿ, ಕೊಂದುಬಿಡುವುದಾಗಿ ಬೆದರಿಕೆ ಹಾಕಿದ್ದರು. ಆಗ ಬಾಲಕಿಯು ಹೆದರಿ ಅಳಲು ಪ್ರಾರಂಭಿಸಿದ್ದು, ನೆರೆಹೊರೆಯ ಮತ್ತೊಬ್ಬ ವ್ಯಕ್ತಿಯು ಮಧ್ಯಪ್ರವೇಶಿಸಿದ ನಂತರ ಜಗಳ ಕೊನೆಗೊಂಡಿತ್ತು” ಎಂದು ಹೇಳಿದ್ದಾರೆ.
ನಂತರ, ಹುಡುಗಿಯ ತಾಯಿ ಸಂಬಂಧಿಕರ ಮನೆಗೆ ಊಟಕ್ಕೆಂದು ಹೋಗಿದ್ದು, ಹುಡುಗಿ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಅರ್ಧ ಘಂಟೆಯ ನಂತರ ಅಕ್ಕಪಕ್ಕದವರು ಮಗಳು ನೇಣು ಹಾಕಿಕೊಂಡಿದ್ದಾಳೆ ಎಂದು ಕರೆ ಮಾಡಿದರು. ತಾಯಿತಂದೆ ತಕ್ಷಣ ಶತಾಬ್ದಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದರು ಎನ್ನಲಾಗಿದೆ.
ಇದನ್ನೂ ಓದಿ:ನಂಗೆ ಬೇಕು… ನಂಗೆ ಬೇಕು… ಮುಗಿಬಿದ್ದು ಮದ್ಯದಂಗಡಿ ಹರಾಜಿಗೆ ಬಂದ ಜನ- 510 ಕೋಟಿ ರೂ.ಗೆ ಸೇಲ್​!
ತಾಯಿಯ ದೂರಿನ ಮೇಲೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 305 ರಡಿ, ಜೊತೆಗೆ ನಿಂದನೆ ಮತ್ತು ಬೆದರಿಕೆ ನೀಡಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಾಂಬೆ ಪೊಲೀಸ್ ಇನ್ಸ್​ಪೆಕ್ಟರ್ ಸಿದ್ದೇಶ್ವರ ಗೋವೆ ತಿಳಿಸಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕೆಂಪು ಕೋಟೆ ಹಿಂಸಾಚಾರ : ಪರಾರಿ ಆಗುತ್ತಿದ್ದ ಡಚ್​ ಪ್ರಜೆ ಪೊಲೀಸರ ವಶಕ್ಕೆ
ಅಭಿಮಾನಿಗೆ ಎಸಿ ಸರ್ವೀಸ್​ ಫ್ರೀ ! ಇದು ಹೃತಿಕ್ ರೋಶನ್​ ಜಾದೂ !



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 16 =
Remember me
