ಪಾಟನಾ:ದಿಘಾ-ಗೈಘಾಟ್ ಜೆಪಿ ಗಂಗಾ ಪಾತ್‍ವೇನಲ್ಲಿ ಥ್ರಿಲ್‍ಗಾಗಿ ಸಾಹಸಮಯ ಸ್ಟಂಟ್‍ಗಳನ್ನು ಮಾಡಲು ಇಲ್ಲೊಬ್ಬ ಯುವತಿ, ಗನ್‍ ಹಿಡಿದುಕೊಂಡು ಓಡಾಡಿದ್ದಾಳೆ. ಪ್ರಸ್ತುತ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಧಿಕಾರಿಗಳಿಗೆ ಚಿಂತೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಬೈಕ್‍ನ ಹಿಂಬದಿ ಕುಳಿತುಕೊಂಡಿದ್ದ ಹುಡುಗಿಯೊಬ್ಬಳು ಎರಡೂ ಕೈಗಳಲ್ಲಿ ಬಂದೂಕುಗಳನ್ನು ಹಿಡಿದಿರುವುದು ಕಾಣಬಹುದು.
ಇದನ್ನೂ ಓದಿ:ಕಾಡುಹಂದಿಗಳನ್ನು ಬೇಟೆಯಾಡಲು ಗನ್ ಲೋಡ್​​ ಮಾಡುತ್ತಿದ್ದ ವೇಳೆ ಮಿಸ್‌ಫೈರ್; ಪ್ರಾಣ ಬಿಟ್ಟ 4 ವರ್ಷದ ಬಾಲಕಿ
ಮುಂಬೈನ ‘ಮರೀನ್ ಡ್ರೈವ್’ಗೆ ಸಮನೆಂದು ಕರೆಯಲ್ಪಡುವ ಪಾಟನಾದ ಪ್ರಸಿದ್ಧ ಜೆಪಿ ಗಂಗಾ ಪಾತ್‍ವೇಯಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ, ಯುವಕನೊಬ್ಬ ಬೈಕ್ ಸವಾರಿ ಮಾಡುತ್ತಿದ್ದು ಆತನ ಹಿಂಬದಿ ಹುಡುಗಿಯೊಬ್ಬಳು ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಮರೀನ್ ಡ್ರೈವ್ ಉದ್ದಕ್ಕೂ ಬೈಕ್ ವೇಗವಾಗಿ ತೆರಳುತ್ತಿರುವಾಗ ಆಕೆ ಎರಡೂ ಕೈಗಳಲ್ಲಿ ಗನ್‍ ಹಿಡಿದಿರುವುದನ್ನು ಕಾಣಬಹುದು.
ಇದನ್ನೂ ಓದಿ:ಅಜಯ್​ ದೇವಗನ್​ ಸಾಹಸವನ್ನು ಮರುಸೃಷ್ಟಿಸಿದ ಶ್ವಾನ: ವಿಡಿಯೋ ವೈರಲ್, ನಗೆಗಡಲಲ್ಲಿ ತೇಲಿದ ನೆಟ್ಟಿಗರು​
ಟಾಪ್ ಮತ್ತು ಶಾರ್ಟ್ಸ್ ಧರಿಸಿದ ಹುಡುಗಿ, ಚಲಿಸುವ ಬೈಕಿನ ಮೇಲೆ ನಿಂತು, ಗಾಳಿಯಲ್ಲಿ ಗನ್ಸ್ ಬೀಸುತ್ತಾ ಪ್ರದರ್ಶನ ಮಾಡುತ್ತಿರುವುದನ್ನು ಕಾಣಬಹುದು. ಇಬ್ಬರ ಪಕ್ಕದಲ್ಲಿ ಸವಾರಿ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ ಎಂದು ತೋರುತ್ತದೆ. ಈ ಸ್ಟಂಟ್, ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಪ್ರಸ್ತುತ ವಿಡಿಯೋವನ್ನು ತನಿಖೆ ಮಾಡಲಾಗುತ್ತಿದೆ.
ಇದನ್ನೂ ಓದಿ:ಮರದಿಂದ ಕೆಳಗೆ ಬಿದ್ದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಗನ್​ಮ್ಯಾನ್​ ದುರಂತ ಸಾವು
ಪಾಟನಾದ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಶರ್ಮಾ ಅವರು ವಿಡಿಯೋವನ್ನು ತಕ್ಷಣ ಗಮನಿಸಿದ್ದು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಪೊಲೀಸರು ವಾಹನದ ನೋಂದಣಿ ಸಂಖ್ಯೆಯನ್ನು ಗುರುತಿಸಿದ್ದು ಶೀಘ್ರದಲ್ಲೇ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ವೈಭವ್ ಶರ್ಮಾ ಸುದ್ದಿಗಾರರಿಗೆ ಹೇಳಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 11 =
Remember me
