ಮುಂಬೈ:ವರ ಮುಂಬೈ ನಿವಾಸಿ, ವಧು ದೆಹಲಿ ನಿವಾಸಿ… ಆರು ತಿಂಗಳಿನಿಂದ ತಮ್ಮ ಮದುವೆಯ ದಿನಕ್ಕಾಗಿ ಇಬ್ಬರೂ ಕಾದು ಕುಳಿತಿದ್ದರು. ಮದುವೆ ದಿನವೇನೋ ಬಂದೇ ಬಿಟ್ಟಿತು. ಆದರೆ ಆಗಲೇ ಶುರುವಾಗಿತ್ತು ಲಾಕ್‌ಡೌನ್‌! ಲಾಕ್‌ಡೌನ್‌ನಿಂದಾಗಿ ಈಗಾಗಲೇ ಜಗತ್ತಿನಾದ್ಯಂತ ಸಹಸ್ರಾರು ಮದುವೆಗಳು ಮುಂದೂಡಲ್ಪಟ್ಟಿವೆ. ಆದರೆ ಈ ಜೋಡಿ ನಿಗದಿಯಾದ ಮುಹೂರ್ತದಲ್ಲಿಯೇ ಮದುವೆಯಾಗುವ ನಿರ್ಧಾರ ಮಾಡಿದರು.
ಆದರೇನು ಮಾಡುವುದು? ಆತ ಇಲ್ಲಿ ಬರುವಂತಿಲ್ಲ, ಈಕೆ ಅಲ್ಲಿಗೆ ಹೋಗುವಂತಿಲ್ಲ! ಅಷ್ಟೇ ಅಲ್ಲ… ಇವರ ಬಹುತೇಕ ಸಂಬಂಧಿಕರು ಇದ್ದುದು ದುಬೈ, ಕೆನಡಾ, ಆಸ್ಟ್ರೇಲಿಯಾದಲ್ಲಿ! ಅವರಂತೂ ಈಗ ಬರುವುದು ಅಸಾಧ್ಯವೇ ಸರಿ. ಆದ್ದರಿಂದ ಕೊನೆಗೆ ಎರಡೂ ಮನೆಯವರು ಫೋನ್‌ ಮೂಲಕವೇ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದೇ ಬಿಟ್ಟರು. ಅದೇ ವೀಡಿಯೋ ಮದುವೆ. ವೀಡಿಯೋ ಕಾಲಿಂಗ್‌ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡ ವಧು-ವರರು ಮದುವೆಯಾದರು. ಕುತೂಹಲದ ಸಂಗತಿಯೆಂದರೆ ಇದೇ ಆ್ಯಪ್‌ ಮೂಲಕವೇ ವಿದೇಶಿ ಬಂಧುಗಳೂ ಮದುವೆಗೆ ಸಾಕ್ಷಿಯಾಗಿ ಶುಭ ಹಾರೈಸಿದರು. ಮದುವೆಯ ನಂತರ ಬಂಧುಗಳೆಲ್ಲಾ ತಮ್‌ತಮ್ಮ ಜಾಗದಿಂದಲೇ ನೃತ್ಯವನ್ನೂ ಮಾಡಿದರು. ಒಟ್ಟಿನಲ್ಲಿ ಮದುವೆಯು ಶಾಸ್ತ್ರೋಕ್ತವಾಗಿ ನಡೆಯಿತು!
ಇಂಥದ್ದೊಂದು ಇಂಟರೆಸ್ಟಿಂಗ್‌ ವಿವಾಹ ಮಾಡಿಕೊಂಡವರು 29 ವರ್ಷದ ನೌಕಾದಳ ಅಧಿಕಾರಿ ಮುಂಬೈನ ಪ್ರೀತ್‌ ಸಿಂಗ್‌ ಹಾಗೂ ದೆಹಲಿಯ ನೀತ್‌ ಕೌರ್‌. ಒಂದು ವರ್ಷದ ಹಿಂದೆ ಆನ್‌ಲೈನ್‌ ಮೂಲಕ ಇವರಿಬ್ಬರ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ, ಮದುವೆಗೆ ಮನೆಯವರೂ ಒಪ್ಪಿ ಆರು ತಿಂಗಳ ಹಿಂದೆ ಮದುವೆ ಫಿಕ್ಸ್‌ ಆಗಿತ್ತು. ಮುಂಬೈನಲ್ಲಿ ಮದುವೆ ನಡೆಯಬೇಕಿತ್ತು. ಈ ತಿಂಗಳ ನಾಲ್ಕನೆಯ ತಾರೀಖು ಮದುವೆಯ ದಿನಾಂಕ ನಿಗದಿಯಾಗಿತ್ತು. ಆದರೆ ಈ ನಡುವೆಯೇ ಲಾಕ್‌ಡೌನ್‌ ಘೋಷಣೆಯಾಯಿತು.
‘ಮದುವೆ ಮುಂದೂಡುವುದು ನಮಗೆ ಇಷ್ಟ ಇರಲಿಲ್ಲ. ನಾವಿಬ್ಬರೂ ಮೊದಲು ಈ ಬಗ್ಗೆ ಚರ್ಚಿಸಿ, ವೀಡಿಯೋ ಕಾಲ್‌ ಮೂಲಕ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದೆವು. ನಮ್ಮಿಬ್ಬರ ಮನೆಯವರಿಗೂ ಇದನ್ನು ಒಪ್ಪಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ವಿದೇಶದಲ್ಲಿ ಇರುವ ನಮ್ಮ ಸಂಬಂಧಿಕರಿಗೂ ವಿಷಯ ತಿಳಿಸಿದೆವು. ಅವರೂ ಒಪ್ಪಿದರು. ಆದ್ದರಿಂದ ಹೀಗೆ ವಿಶೇಷವಾಗಿ ಮದುವೆಯಾಗಿದ್ದೇವೆ’ ಎನ್ನುತ್ತಾರೆ ಪ್ರೀತ್‌.
ನಮ್ಮ ಮದುವೆ ಸಂಪೂರ್ಣವಾಗಬೇಕಾದರೆ ವಾಹೆಗುರೂಜಿಯ ಆಶೀರ್ವಾದ ಕಡ್ಡಾಯವಾಗಿ ಬೇಕು. ಆದ್ದರಿಂದ ಲಾಕ್‌ಡೌನ್‌ ಅವಧಿ ಮುಗಿದ ತಕ್ಷಣ ಅವರ ಆಶೀರ್ವಾದ ಪಡೆಯುತ್ತೇವೆ ಎಂದಿದ್ದಾರೆ ಈ ನೂತನ ವಧು-ವರರು. ಹನಿಮೂನ್‌ಗೆ ಶ್ರೀಲಂಕಾಕ್ಕೆ ಹೋಗಲು ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದ ಮದುಕ್ಕಳು ಸದ್ಯ ಆ ಪ್ಲ್ಯಾನ್ ಕೈಬಿಟ್ಟಿದ್ದಾರಂತೆ.(ಏಜೆನ್ಸೀಸ್‌)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
