ಭೋಪಾಲ್​:ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು, ವಿಶೇಷ ಯೋಜನೆಗಳನ್ನು ರೂಪಿಸುವ ಸರ್ಕಾರವನ್ನು ನೋಡಿರುತ್ತೇವೆ. ಆದರೆ ಈ ಒಂದು ಜಿಲ್ಲೆ ಮಾತ್ರ ತುಂಬಾ ವಿಶೇಷ. ಇಲ್ಲಿ ಪ್ರಧಾನ ಮಂತ್ರಿ ಆವಾಸ್​ ಯೋಜನೆಯಲ್ಲಿ ಮನೆ ನಿರ್ಮಿಸಲಾಗುತ್ತದೆ. ಆ ಮನೆಗಳಿಗೆ ಅದೇ ಮನೆಯ ಹೆಣ್ಣು ಮಕ್ಕಳ ಹೆಸರನ್ನೇ ಇಡಲಾಗುತ್ತಿದೆ.
ಇಂತದ್ದೊಂದು ಅದ್ಭುತ ಪ್ರಯತ್ನಕ್ಕೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಮಿಶಾ ಸಿಂಗ್​ ಕೈ ಹಾಕಿದ್ದಾರೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಆವಾಸ್​ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಲಾಗಿದೆ. ಎಲ್ಲ ಗ್ರಾಮಗಳ ಹೆಣ್ಣು ಮಕ್ಕಳ ಗುರುತಿಸಿಕೊಳ್ಳುವಿಕೆಯನ್ನು ಹೆಚ್ಚಿಸಬೇಕೆಂಬ ಕಾರಣದಿಂದ ಆ ಮನೆಗಳಿಗೆ ಅದೇ ಮನೆಯ ಹೆಣ್ಣು ಮಕ್ಕಳ ಹೆಸರಿಡುವ ಉಪಾಯ ಮಾಡಲಾಗಿದೆ. ಈ ಕುರಿತಾಗಿ ಮನೆ ಪಡೆದವರಿಗೆ ಹೇಳಲಾಗಿದೆ. ಪ್ರತಿಯೊಬ್ಬ ಫಲಾನುಭವಿಯೂ ಖುಷಿಯಿಂದ ಒಪ್ಪಿದ್ದು, ತಮ್ಮ ಮನೆಯ ಮುಂದಿನ ಗೋಡೆಯ ಮೇಲೆ ಹೆಣ್ಣು ಮಗಳ ಹೆಸರನ್ನು ಬರೆದು ಭವನ ಎಂದು ಸೇರಿಸಿದ್ದಾರೆ. ಈಗ ಕಲಾಪಿಪಾಲ್, ಮೋಹನ್ ಬರೋಡಿಯಾ ಮತ್ತು ಶುಜಲ್ಪುರ ಗ್ರಾಮ ಪಂಚಾಯಿತಿಗಳ ಹಲವಾರು ಮನೆಗಳು ರೋಷಿನಿ ಭವನ, ಆಯುಷಿ ಭವನ, ರೇಖಾ ಭವನ ಹೀಗೆ ಹಲವಾರು ಹೆಸರನ್ನು ಪಡೆದುಕೊಂಡಿವೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಚಿನ್ನದ ಬೆಟ್ಟ ಪತ್ತೆ! ಬಂಗಾರಕ್ಕಾಗಿ ಮುಗಿಬಿದ್ದ ಜನರು

ನಟಿ ಪ್ರಿಯಾಂಕಾರ ಇತ್ತೀಚಿನ ಸಾಹಸ ಏನು ಗೊತ್ತೆ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
