ಚೆನ್ನೈ:ಮದುವೆಯಾದ ವ್ಯಕ್ತಿಯನ್ನು ಹುಡುಗಿಯೊಬ್ಬಳು ಅಪಹರಿಸಿ ಆತನ ಜತೆಗೆ ವಿವಾಹವಾಗಿರುವ ವಿಚಿತ್ರ ಘಟನೆ ತಮಿಳುನಾಡಿನ ಚೆನ್ನೈ ಬಳಿ ನಡೆದಿದೆ.ಇದನ್ನೂ ಓದಿ:ಕ್ರಿಕೆಟ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದ ಯುವಕ: ಮುಂದೆ ನಡೆದಿದ್ದಿಷ್ಟು..ಚೆನ್ನೈನ ವೆಲಚೇರಿಯ ಐಟಿ ಉದ್ಯೋಗಿ ಪಾರ್ಥಿಬನ್ ಮತ್ತು ರಾಣಿಪೇಟ್‌ನ ಸೌಂದರ್ಯ ಎಂಬಾಕೆ ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದರು. ಏಳು ವರ್ಷಗಳ ಪ್ರೀತಿ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಆ ಬಳಿಕ ಇಬ್ಬರು ತಮ್ಮ ಪ್ರೀತಿಯನ್ನು ಮುರಿದುಕೊಂಡು ದೂರವಾಗಿದ್ದರು.ಇತ್ತ, ಪ್ರೀತಿ ಮುರಿದು ಬೀಳುತ್ತಿದ್ದಂತೆ ಪಾರ್ಥಿಬನ್ ಮದುವೆಯಾಗಲು ಸಿದ್ಧರಾನಾಗಿದ್ದು, ಆತ ಜುಲೈ 5ರಂದು ಹಿರಿಯರ ಒಪ್ಪಿಗೆ ಮೇರೆಗೆ ಮತ್ತೊಬ್ಬ ಐಟಿ ಉದ್ಯೋಗಿಯೊಂದಿಗೆ ವಿವಾಹವಾಗಿದ್ದನು. ಮದುವೆಯ ವಿಷಯ ತಿಳಿದ ಸೌಂದರ್ಯಾಗೆ ತೀವ್ರ ಕಸಿವಿಸಿ ಉಂಟಾಗಿದ್ದು, ಆಕೆ ಆತನನ್ನು ಮರೆಯಲಾಗಲಿಲ್ಲ. ಕೊನೆಗೆ ಆತನನ್ನು ಮದುವೆಯಾಗುವುದಾಗಿ ತಾಯಿ ಹಾಗೂ ಸಂಬಂಧಿಕರಿಗೆ ತಿಳಿಸಿದ್ದಳು. ಮಗಳ ನೋವನ್ನು ಅರ್ಥ ಮಾಡಿಕೊಂಡ ಆಕೆಯ ತಾಯಿ ಉಮಾ, ತನ್ನ ಸಂಬಂಧಿಕರಾದ ರಮೇಶ್ ಮತ್ತು ಶಿವಕುಮಾರ್ ಎಂಬುವರ ಸಹಾಯದಿಂದ ಯುವಕನ ಅಪಹರಣಕ್ಕೆ ಸ್ಕೆಚ್ ಹಾಕಿದ್ದರು.ಇದನ್ನೂ ಓದಿ:ಅಂಗಡಿಗೆ ಹೋಗಿದ್ದ ಬಾಲಕನ ಮೇಲೆ ಬೀದಿನಾಯಿಗಳಿಂದ ಭಯಾನಕ ದಾಳಿ: ರಕ್ಷಣೆಗೆ ಧಾವಿಸಿದ ನೆರೆಹೊರೆಯವರುಕಳೆದ ಶುಕ್ರವಾರದಂದು ಎಂದಿನಂತೆ ಕಚೇರಿಗೆ ತೆರಳಿದ್ದ ಯುವಕನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ, ಆ ಬಳಿಕ ನೇರವಾಗಿ ಕಾಂಚೀಪುರಂನ ದೇವಸ್ಥಾನಕ್ಕೆ ಕರೆದೊಯ್ದು ಸೌಂದರ್ಯಳ ಕೊರಳಿಗೆ ಬಲವಂತವಾಗಿ ತಾಳಿ ಕಟ್ಟಿಸಿದ್ದರು. ಇತ್ತ ತನ್ನ ಪತಿ ಕಿಡ್ನಾಪ್ ಆಗಿರುವ ವಿಚಾರ ಪತ್ನಿಗೆ ತಿಳಿದಿದ್ದು, ಕೂಡಲೇ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದು, ಸೌಂದರ್ಯಾ ಜತೆಗೆ ಯುವಕನ ಅಪಹರಣಕ್ಕೆ ಸಹಕರಿಸಿದ ಸಂಬಂಧಿಕರನ್ನು ಸಹ ಬಂಧಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 15 =
Remember me
