ಭೋಪಾಲ್​:ಯಾವುದೋ ಪ್ರಕರಣದಲ್ಲಿ ಜೈಲು ಸೇರಿದ್ದ ತಂದೆಯನ್ನು ಬಿಡಿಸುವುದಕ್ಕಾಗಿ ಒದ್ದಾಡುತ್ತಿದ್ದ ಮಗಳೊಬ್ಬಳು ರೈಲಿನಲ್ಲೇ ಬರ್ಬವರಾಗಿ ಹತ್ಯೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಅಪರಿಚಿತರು ಯುವತಿಯ ಕೊಲೆ ಮಾಡಿರುವುದಾಗಿ ಹೇಳಲಾಗಿದೆ.
21 ವರ್ಷದ ಆ ಯುವತಿಯ ತಂದೆ ಜೈಲಿನಲ್ಲಿದ್ದಾನೆ. ಆತನಿಗೆ ಬೇಲ್​ ಕೊಡಿಸಲೆಂದು ಆಕೆ ಸಾಹಸ ಮಾಡುತ್ತಿದ್ದಳು. ಜಿಲ್ಲಾ ನ್ಯಾಯಾಲದಯಲ್ಲಿ ಜಾಮೀನು ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಈ ಮಧ್ಯೆ ಬಿಹಾರದಲ್ಲಿ ವಾಸವಿರುವ ಅಣ್ಣನನ್ನು ನೋಡಲೆಂದು ಯುವತಿ ಇಂಡೋರ್​ನಿಂದ ನರ್ಮದಾ ಎಕ್ಸ್​ಪ್ರೆಸ್​ ರೈಲಿನಲ್ಲಿ ಹೊರಟಿದ್ದಾಳೆ. ಸ್ಲೀಪರ್​ ಕೋಚ್​ನಲ್ಲಿ ಸಾಗುತ್ತಿದ್ದ ಯುವತಿ ಸೆಹೋರ್​ ರೈಲ್ವೆ ನಿಲ್ದಾಣ ತಲುಪುವುದರೊಳಗೆ ಹೆಣವಾಗಿದ್ದಾಳೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಂದ ಹಾಗೆ ಯುವತಿ ರೈಲು ಹತ್ತಿದಾಗಿನಿಂದ ಅಣ್ಣನ ಸಂಪರ್ಕದಲ್ಲಿದ್ದಳು. ರೈಲಿನಲ್ಲಿ ಯಾರೋ ತನಗೆ ಹಿಂಸೆ ಕೊಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾಳೆ. ಆ ವಿಚಾರವಾಗಿ ಆಕೆಯ ಅಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅದನ್ನು ಪರಿಶೀಲನೆ ಮಾಡಲು ಬಂದ ಪೊಲೀಸರಿಗೆ ಯುವತಿಯ ಹೆಣ ಸಿಕ್ಕಿದೆ.
ಸೆಹೋರ್​ ರೈಲ್ವೆ ನಿಲ್ದಾಣಕ್ಕೆ ತಲುಪಲು ಕೆಲ ನಿಮಿಷಗಳ ಮೊದಲು ಕೊಲೆ ನಡೆದಿರುವುದಾಗಿ ಹೇಳಲಾಗಿದೆ. ಬೋಗಿಯಲ್ಲಿ ಸೀಟಿನ ವಿಚಾರಕ್ಕೆ ಯಾರೋ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ಅದೇ ಬೋಗಿಯಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ. ಚೂಪಾದ ವಸ್ತುವಿನಿಂದ ಯುವತಿಗೆ ಚುಚ್ಚಿರುವ ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಓರ್ವನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

‘ಅಪ್ಪಾ, ನನ್ನ ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ವೈದ್ಯೆ

ಕರೊನಾ ಗೆದ್ದರೂ ಬಿಡಲೇ ಇಲ್ಲ ವಿಧಿ! ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + 13 =
Remember me
