ಝಾನ್ಸಿ:ಉತ್ತರ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಇತ್ತೀಚೆಗೆ ನಡೆದ ವೃದ್ಧೆ ಮುಮ್ತಾಜ್​ ಕೊಲೆ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಏಕೆಂದರೆ ಕೊಲೆ ಮಾಡಿದವರ ಯಾವುದೇ ಸುಳಿವು ಬಿಟ್ಟಿರಲಿಲ್ಲ.
ವೃದ್ಧೆಯ ಸರ ದೋಚಿಕೊಂಡು ಹೋಗಿದ್ದರಿಂದ ಇದೊಂದು ದರೋಡೆ ಪ್ರಕರಣವೆಂದೇ ಪೊಲೀಸರು ತಿಳಿದಿದ್ದರು. ಸಾಲದು ಎಂಬುದಕ್ಕೆ ಅಜ್ಜಿಯನ್ನು ಕಳೆದುಕೊಂಡಿದ್ದ ಅಪ್ರಾಪ್ತ ವಯಸ್ಸಿನ ಮೊಮ್ಮಗಳ ದುಃಖ ಮುಗಿಲುಮುಟ್ಟಿತ್ತು.
ನಂತರ ವೃದ್ಧೆಯ ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರು ಅಂತೂ ಈ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾದರು. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಕಂಡ ಪೊಲೀಸರೇ ಕೆಲ ಕ್ಷಣ ಅಚ್ಚರಿಗೊಂಡರು. ಹೌದು. ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ವೃದ್ಧೆಯ ಮೊಮ್ಮಗಳು ಅಪ್ರಾಪ್ತ ಬಾಲಕಿ! ಅಷ್ಟಕ್ಕೂ ಆಗಿದ್ದೇನೆಂದರೆ ಅದೊಂದು ದಿನ ಅಜ್ಜಿ ನೋಡಬಾರದ್ದು ನೋಡಿಯೇ ಬಿಟ್ಟಳು. ಅದೇ ಅವರ ಕೊಲೆಗೆ ಕಾರಣವಾಗಿತ್ತು.
63 ವರ್ಷದ ಮುಮ್ತಾಜ್ ಮಗ ಅಂದರೆ ಬಾಲಕಿಯ ಅಪ್ಪ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಆಕೆಯ ಅಮ್ಮ ಇನ್ಯಾರದೋ ಜತೆ ಓಡಿಹೋಗಿರುವ ಕಾರಣ, ಬಾಲಕಿ ಅಜ್ಜಿಯ ಜತೆ ವಾಸವಾಗಿದ್ದಳು. ಆಕೆಗೆ ಯುವಕನೊಬ್ಬನ ಜತೆ ಪ್ರೀತಿ ಹುಟ್ಟಿತು.
ಇದನ್ನೂ ಓದಿ:ಅಜ್ಜನ ಸಹಾಯಕ್ಕೆ ಇದ್ದ ಹಗ್ಗ ಮೊಮ್ಮಗನ ಜೀವ ಪಡೆಯಿತು!
ದಿನವೂ ರಾತ್ರಿ ಆ ಯುವಕ ಈ ಬಾಲಕಿ ಜತೆ ರಾತ್ರಿ ಕಳೆಯುತ್ತಿದ್ದ. ತನ್ನ ಈ ರಹಸ್ಯ ಅಜ್ಜಿಗೆ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ದಿನವೂ ಬಾಲಕಿ ಅಜ್ಜಿಗೆ ನಿದ್ದೆ ಮಾತ್ರೆ ನೀಡುತ್ತಿದ್ದಳು. ಅದು ನಿದ್ದೆ ಮಾತ್ರೆ ಎಂದು ತಿಳಿಯದೇ ಅಜ್ಜಿ ಅದನ್ನು ತೆಗೆದುಕೊಂಡು ನಿದ್ದೆಗೆ ಜಾರುತ್ತಿದ್ದಳು.ಅದೊಂದು ದಿನ ಗ್ರಹಚಾರ ಕೆಟ್ಟಿತ್ತು. ಅಜ್ಜಿ ಮಾತ್ರೆ ನುಂಗಿರಲಿಲ್ಲ. ಅದು ಬಾಲಕಿಗೆ ಗೊತ್ತಿರಲಿಲ್ಲ. ಎಂದಿನಂತೆ ಯುವಕ ಬಂದ, ರೂಮಿನೊಳಗೆ ಯುವಕ ಮತ್ತು ಬಾಲಕಿ ತಮ್ಮ ಕೆಲಸ ಮುಂದುವರೆಸಿದ್ದರು. ಮೊಮ್ಮಗಳ ರೂಮಿನಿಂದ ಬಂದ ಶಬ್ದ ಕೇಳಿ ಅಜ್ಜಿ ಮೊಮ್ಮಳಿಗೆ ಏನೋ ಆಗಿದೆ ಎಂದುಕೊಂಡು ಕಿಟಕಿಯಿಂದ ನೋಡಿದರು. ಆಗ ಯುವಕನ ಜತೆ ತನ್ನ ಮೊಮ್ಮಗಳನ್ನುನೋಡಿದ ಅಜ್ಜಿಗೆ ಶಾಕ್​ ಆಗಿ ಕಿರುಚಿಕೊಂಡರು.
ಬಾಲಕಿ ಹಾಗೂ ಯುವಕ ಅಜ್ಜಿಯನ್ನು ನೋಡಿದರು. ತಮ್ಮ ರಹಸ್ಯ ಬಯಲಾಯಿತು ಎಂದುಕೊಂಡು ಇಬ್ಬರೂ ಸೇರಿ ಅಜ್ಜಿಯ ಕತ್ತುಹಿಸುಕಿ ಕೊಲೆ ಮಾಡಿದರು. ಕೊಲೆ ಮಾಡಿರುವುದು ತಿಳಿಯಬಾರದು ಎಂದು ಅವರ ಕುತ್ತಿಗೆಯಲ್ಲಿದ್ದ ಸರವನ್ನು ಕದ್ದಂತೆ ನಟಿಸಿದ್ದಾರೆ.
ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಸಂದೇಹಗೊಂಡು ಬಾಲಕಿಯ ಮೊಬೈಲ್​ ಚೆಕ್​ ಮಾಡಿದಾಗ, ದಿನವೂ ಮಧ್ಯರಾತ್ರಿ ಆಕೆ ಒಂದೇ ನಂಬರ್​ಗೆ ಕರೆ ಮಾಡುವುದು ಕಂಡುಬಂದಿದೆ. ಇದರಿಂದ ಸಂಶಯಗೊಂಡು ಬಾಲಕಿಯ ಬಾಯಿ ಬಿಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾಳೆ.ಸದ್ಯ ಬಾಲಕಿ ಹಾಗೂ ಆಕೆಯ ಪ್ರಿಯಕರ ಪೊಲೀಸರ ವಶದಲ್ಲಿದ್ದಾರೆ.(ಏಜೆನ್ಸೀಸ್​)
ಬಂಧಿಸುವ ಮುನ್ನ ಆರೋಪಿಗಳ ಸ್ನಾನ ಕಡ್ಡಾಯ: ಪೊಲೀಸರಿಗೆ ಕಮಿಷನರ್ ಕಟ್ಟಪ್ಪಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − two =
Remember me
