ಆಂಧ್ರಪ್ರದೇಶ:ಲೈಂಗಿಕ ಕಿರುಕುಳ ತಾಳಲಾರದೆ ಬಾಲಕಿಯೊಬ್ಬಳು ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣದ ಸಂಬಂಧ ವಿನೋದ್ ಜೈನ್ ಎಂಬಾತನ ವಿರುದ್ಧ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶದ ವಿಜಯವಾಡ ಅಪಾರ್ಟ್​ಮೆಂಟ್​ವೊಂದರಲ್ಲಿ ಶನಿವಾರ ಈ ಪ್ರಕರಣ ನಡೆದಿದೆ. ಐದನೇ ಮಹಡಿಯಿಂದ ಹಾರಿ ಸತ್ತ ಬಾಲಕಿಯ ಡೆತ್​ನೋಟ್​ನಲ್ಲಿ ಅದೇ ಕಟ್ಟಡದಲ್ಲಿ ವಾಸವಿದ್ದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದ ಕುರಿತ ಉಲ್ಲೇಖವಿತ್ತು ಎಂದು ಎಸಿಪಿ ಕೆ. ಹನುಮಂತರಾವ್ ತಿಳಿಸಿದ್ದಾರೆ.
ಆರೋಪಿಯು ವಿಜಯವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 37ನೇ ವಾರ್ಡ್​ನ ಟಿಡಿಪಿ ಮುಖಂಡ. 14 ವರ್ಷದ ಹೆಣ್ಣಿನ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪದ ಮೇಲೆ ಆತನನ್ನು ಪಕ್ಷದ ಅಧಿಕಾರದಿಂದ ಅಮಾನತು ಮಾಡಲಾಗಿದೆ ಎಂದು ಟಿಡಿಪಿ ತಿಳಿಸಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.-ಏಜೆನ್ಸೀಸ್
ಪ್ರಧಾನಿಗೇ ನೇರ ತಲುಪಿತು ಧರ್ಮಸ್ಥಳದ ಪ್ರಸಾದ; ಶಾಸಕರು ಮೋದಿಗೆ ನೀಡಿದರು ಸ್ವರ್ಣಖಚಿತ ಸ್ಫಟಿಕ ರುದ್ರಾಕ್ಷಿ ಹಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + five =
Remember me
