ಬಿಹಾರ:ವಿರೋಧದ ನಡುವೆಯೂ ಪ್ರೀತಿಸಿ ಅಂತರ್ಜಾತಿ ವಿವಾಹವಾದ ಹಿನ್ನೆಲೆ, ಯುವತಿಯ ಮನೆಯವರು ಆಕೆಯನ್ನು ಬೈಕ್​ನಲ್ಲಿ ಎತ್ತಿಕೊಂಡು ಓಡಿ ಹೋಗಿದ್ದಾರೆ. ಈ ಘಟನೆ ಜಿಲ್ಲೆಯ ಬತ್ನಾಹಾ ಒಪಿ ಪ್ರದೇಶದ ಗ್ರಾಮವೊಂದರಲ್ಲಿ ಜೂನ್ 3ರಂದು ನಡೆದಿದೆ. ಸದ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಯುವತಿಯನ್ನು ರಕ್ಷಿಸಿದ್ದು, ತಪ್ಪಿತಸ್ಥರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರೇಮ ವಿವಾಹವಾದ ವಿಚಾರ ತಿಳಿದು ಕೋಪಗೊಂಡ ಯುವತಿ ಕುಟುಂಬಸ್ಥರು ಆಕೆಯನ್ನು ಬೈಕ್‌ನಲ್ಲಿ ಎತ್ತಿಕೊಂಡು ಓಡಿ ಹೋಗುತ್ತಿರುವ ವಿಡಿಯೋ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಕ್ಷಣ ಈ ವಿಡಿಯೋ ಯಾವುದೋ ಸಿನಿಮಾ ದೃಶ್ಯದಂತೆ ಭಾಸವಾದರೂ ಅಚ್ಚರಿಯೇನಿಲ್ಲ!
ಇದನ್ನೂ ಓದಿ:ಹಾವನ್ನೇ ಜಗಿದು ಕೊಂದ ಮೂರು ವರ್ಷದ ಬಾಲಕ! ಗಾಬರಿಗೊಂಡ ಪಾಲಕರು
ಟೆಂಟ್ ವ್ಯಾಪಾರ ಮಾಡುತ್ತಿರುವ 22 ವರ್ಷದ ಯುವಕ ಮತ್ತು ಯುವತಿ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದು ಯುವತಿಯ ಮನೆಯವರಿಗೆ ತಿಳಿದು, ಎರಡೂ ಕುಟುಂಬಗಳ ನಡುವೆ ಹಿರಿಯರ ಸಮ್ಮುಖದಲ್ಲಿ ಈ ಹಿಂದೆ ಪಂಚಾಯತಿ ನಡೆದಿದೆ. ಇದೆಲ್ಲದರ ಹೊರತಾಗಿ ಯುವಕ ಹಾಗೂ ಯುವತಿ ಸುಪೌಲ್ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ.
फिल्मी टाइप… फुल एक्शन! बिहार के अररिया के इस वीडियो को देखिए. अंतरजातीय विवाह के बाद लड़की के घरवाले नहीं माने और शादी के बाद सीधा बाइक पर उठाया और लेकर भाग गए. पुलिस एक्शन में आई और फिर युवती को बरामद कर लिया.pic.twitter.com/yCIBLuxufS
— Prakash Kumar (@kumarprakash4u)June 5, 2023
ಯುವಕನ ತಂದೆಯನ್ನು ಶ್ಯಾಮ್‌ನಗರ ಚೌಕ್‌ನಲ್ಲಿರುವ ಪಂಚಾಯತ್ ಮುಖ್ಯಸ್ಥ ಮನೋರಂಜನ್ ಕುಮಾರ್ ಮಂಡಲ್ ಕಚೇರಿಗೆ ಕರೆಸಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯುವತಿಯ ಕಡೆಯವರು ನನಗೆ ದೊಣ್ಣೆಯಿಂದ ಹೊಡೆದು ಎಡಗೈ ಮುರಿದಿದ್ದಾರೆ. ಬಾಯಿಯಿಂದ ರಕ್ತ ಬಂದಿದೆ. ಕೊನೆಯಲ್ಲಿ ಪ್ರಾಣ ಹೋಗಿದೆ ಎಂದು ಭಾವಿಸಿ ನನ್ನನ್ನು ರಸ್ತೆ ಬದಿ ಎಸೆದಿದ್ದಾರೆ. ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ನನ್ನ ಬಗ್ಗೆ ಅಪರಿಚಿತರು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಫರ್ಬಿಸ್‌ಗಂಜ್ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾದೆ ಎಂದು ಯುವಕನ ತಂದೆ ಹೇಳಿಕೊಂಡಿರುವುದು ವರದಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 1 =
Remember me
