ಮುಂಬೈ:ಉದ್ಯಾನವನದ ಬೆಂಚ್ ಮೈಮೇಲೆ ಬಿದ್ದು ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಇದನ್ನೂ ಓದಿ:ಮಗಳೇ ನೀನಿಲ್ಲದೇ ನಾನಿಲ್ಲ ಎಂದು ಪ್ರಾಣಬಿಟ್ಟ ತಂದೆ..
ಬ್ರೀಜಾ(4) ಮೃತಪಟ್ಟ ಬಾಲಕಿಯಾಗಿದ್ದು, ಸ್ಥಳೀಯ ಗಿರಿರಾಜ್ ಸೊಸೈಟಿ ಪ್ಲಾಟ್ ನಂ.36ರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ವಿಶ್ವಕರ್ಮ ಏಂಬುವರ ಮಗಳಾಗಿದ್ದಾಳೆ. ಆಕೆ ತನ್ನ ತಂದೆಯೊಂದಿಗೆ ಸಮೀಪದ ಪಾರ್ಕ್‌ಗೆ ಆಟವಾಡಲು ಹೋಗಿದ್ದಳು. ಈ ವೇಳೆ ಬಾಲಕಿಯು ಆಯಾಸಗೊಂಡಿದ್ದು, ಅಲ್ಲಿಯೇ ಇದ್ದ ಸಿಮೆಂಟ್​ ಬೆಂಚ್​ ಮೇಲೆ ಕುಳಿತಿದ್ದಾಳೆ.
ಸ್ವಲ್ಪ ಸಮಯದ ನಂತರ ಸಿಮೆಂಟ್​ ಬೆಂಚ್​ ಕುಸಿದು ಆಕೆಯ ಮೇಲೆಯೇ ಬಿದ್ದಿದೆ. ಕೂಡಲೇ ತಂದೆ ಇದನ್ನು ಗಮನಿಸಿದ್ದು, ಮಗಳತ್ತ ಓಡಿ ಬೆಂಚನ್ನು ಎತ್ತಿದ್ದಾರೆ. ಆದರೆ, ಬೆಂಚಿನ ಭಾರದಿಂದಾಗಿ ಬ್ರಿಜಾ ಸ್ಥಳದಲ್ಲೇ ಮೃತಪಟ್ಟಿದ್ದು, ಮಹಾನಗರ ಪಾಲಿಕೆ ಈ ಉದ್ಯಾನವನವನ್ನು ನಿರ್ಲಕ್ಷಿಸಿದ್ದು, ಉದ್ಯಾನವನವು ಪಾಳು ಬಿದ್ದಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ನಾಲ್ಕು ವರ್ಷದ ಮಗುವಿನ ಸಾವು ಕುಟುಂಬದಲ್ಲಿ ತೀವ್ರ ದುಃಖ ತಂದಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 4 =
Remember me
