ಕೊಲ್ಲಂ:ಪುರುಷನೊಬ್ಬ ಮಹಿಳೆಯರಿಬ್ಬರನ್ನು ಏಕಕಾಲದಲ್ಲಿ ಮದುವೆಯಾದರೆ ಅದು ಅಷ್ಟೊಂದು ಸುದ್ದಿಯಾಗುವುದಿಲ್ಲ. ಏಕೆಂದರೆ, ಇಂತಹ ಅನೇಕ ನಿದರ್ಶನಗಳಿವೆ. ಆದರೆ, ಓರ್ವ ಹೆಣ್ಣು ತಾನಾಗಿಯೇ ಮುಂದೆ ಬಂದು ಒಂದೇ ಸಮಯದಲ್ಲಿ ಇಬ್ಬರನ್ನು ಮದುವೆಯಾಗುತ್ತೇನೆ ಎಂದು ಹೇಳಿದರೆ, ಅದನ್ನು ಕೇಳಿದವರು ಹುಬ್ಬೇರಿಸದೇ ಇರಲಾರರು. ಇದೀಗ ಅಂಥದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ.
ಕೊಲ್ಲಂನ ಪಠಾಣಪುರಂ ಮೂಲದ ಯುವತಿಯೊಬ್ಬಳು ತನ್ನ ವಿಚಿತ್ರ ನಿಲುವಿನಿಂದ ಇದೀಗ ಎಲ್ಲರ ಗಮನ ಸೆಳೆದಿದ್ದಾಳೆ. ಏಕಕಾಲದಲ್ಲಿ ಇಬ್ಬರನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ. ಪಠಾಣಪುರಂ ಮತ್ತು ಪುನಲೂರಿನ ಸಬ್​ ರಿಜಿಸ್ಟ್ರಾರ್​ ಕಚೇರಿಗಳಿಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಿರುವ ಯುವತಿ ಎರಡೂ ಊರಿನ ಇಬ್ಬರು ಯುವಕರನ್ನು ಮದುವೆಯಾಗಲು ಮುಂದಾಗಿದ್ದಾಳೆ.
ಇದನ್ನೂ ಓದಿ:ದೇವಸ್ಥಾನದ ಪವಿತ್ರ ಕೊಳದಲ್ಲಿ ಮಾನವ ತಲೆಬುರುಡೆ ಪತ್ತೆ; 45 ದಿನಗಳವರೆಗೆ ಈ ನೀರು ಬಳಸುವಂತಿಲ್ಲ…
ಯುವತಿ ವಿಶೇಷ ವಿವಾಹ ಕಾಯಿದೆ ಅಡಿ ಮೊದಲು ಪಠಾಣಪುರಂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದಳು. ನಂತರ ಅದೇ ಹುಡುಗಿ ಪುನಲೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಪುನಲೂರಿನ ಉರುಕುನ್ನು ಮೂಲದ ಯುವಕನ ಜತೆ ಮದುವೆ ಮಾಡಿಕೊಡುವಂತೆ ಮನವಿ ಮಾಡಿದಳು. ಇದರಿಂದ ಗೊಂದಲಕ್ಕೀಡಾದ ಅಧಿಕಾರಿಗಳು ಯುವತಿ ಹಾಗೂ ಯುವಕರನ್ನು ಕರೆಸಿಕೊಳ್ಳಲು ಯತ್ನಿಸುತ್ತಿದ್ದಾರೆ.(ಏಜೆನ್ಸೀಸ್​)
ರಾಜಧಾನಿಯಲ್ಲಿ ಡೆಂಘಿ ನರ್ತನ; 11 ದಿನಗಳಲ್ಲಿ 178 ಪ್ರಕರಣಗಳು ಪತ್ತೆ!

ರೈತರು, ಜನರ ಬವಣೆ ಮರೆತು ಗ್ಯಾರಂಟಿಗಳ ಬೆನ್ನು ತಟ್ಟಿಕೊಳ್ಳುತ್ತಿರುವ ಸರ್ಕಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಟೀಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + two =
Remember me
