ಲಖನೌ:ಮಹಿಳೆಯೊಬ್ಬಳು ಓಡಿ ಬಂದು, ನನ್ನ ಹೆಂಡತಿಯನ್ನು ಕೂಡಿ ಹಾಕಿದ್ದಾರೆ, ದಯವಿಟ್ಟು ಆಕೆಯನ್ನು ಕಾಪಾಡಿ ಎಂದು ದೂರು ನೀಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ. ಇದೀಗ ಗಂಡ ಹೆಂಡತಿಯನ್ನು ಒಂದು ಮಾಡಿರುವ ಪೊಲೀಸರು ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಇತ್ತೀಚೆಗೆ ಸೋನಿ (ಹೆಸರು ಬದಲಾಯಿಸಲಾಗಿದೆ) ಓಡಿ ಬಂದು ಪೊಲೀಸರ ಎದುರು ನಿಂತಿದ್ದಾರೆ. ಏದುಸಿರು ಬಿಡುತ್ತಾ, “ಸರ್​… ನನ್ನ ಹೆಂಡತಿಯನ್ನು ಅವರ ಮನೆಯವರು ಕೂಡಿ ಹಾಕಿದ್ದಾರೆ. ನಮ್ಮನ್ನು ಒಟ್ಟಾಗಿ ಇರಲು ಬಿಡುತ್ತಿಲ್ಲ. ದಯವಿಟ್ಟು ನನ್ನ ಹೆಂಡತಿಯನ್ನು ರಕ್ಷಿಸಿ” ಎಂದು ದೂರು ನೀಡಿದ್ದಾಳೆ. ಇದನ್ನು ಕೇಳಿದ ಪೊಲೀಸರು ಒಂದು ಕ್ಷಣ ಕಂಗಾಲಾಗಿದ್ದಾರೆ. ನೀನು ಏನು ಹೇಳುತ್ತಿದ್ದೀಯ ಅರ್ಥವಾಗುತ್ತಿಲ್ಲ, ಬಿಡಿಸಿ ಹೇಳು ಎಂದು ಆಕೆಗೆ ಕೇಳಿದ್ದಾರೆ.
ಆಗ ಮಹಿಳೆ ತನ್ನ ಕಥೆಯನ್ನು ಹೇಳಿದ್ದಾರೆ. ನಾನು ಮತ್ತು ದುಲಾರಿ (ಹೆಸರು ಬದಲಾಯಿಸಲಾಗಿದೆ) ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೆವು. ಆದರೆ ನಾವಿಬ್ಬರೂ ಹೆಣ್ಣು ಮಕ್ಕಳು ಎನ್ನುವ ಕಾರಣಕ್ಕೆ ಇಬ್ಬರ ಮನೆಯಲ್ಲೂ ಪ್ರೀತಿಗೆ ವಿರೋಧವಿತ್ತು. ನಾವು ಮನೆ ಬಿಟ್ಟು, 2020ರ ನವೆಂಬರ್​ನಲ್ಲಿ ಮದುವೆಯಾಗಿದ್ದೇವೆ. ದೇವಸ್ಥಾನದಲ್ಲಿ ನಾನು ಗಂಡನಾಗಿ ಆಕೆಯನ್ನು ಹೆಂಡತಿಯನ್ನಾಗಿ ಸ್ವೀಕರಿಸಿದ್ದೇನೆ. ಆದರೆ ಇದೀಗ ನಮ್ಮ ಇಬ್ಬರ ಕುಟುಂಬವು ನಮ್ಮನ್ನು ಮನೆಯಲ್ಲಿ ಕೂಡಿ ಹಾಕಿದೆ. ನಾನು ಯಾರಿಗೂ ಗೊತ್ತಾಗದಂತೆ ಕಿಟಕಿಯಿಂದ ಹಾರಿ ಬಂದು ಈ ದೂರನ್ನು ಕೊಡುತ್ತಿದ್ದೇನೆ ಎಂದು ಹೇಳಿದ್ದಾಳೆ.
ಸೋನಿಯ ಕಥೆ ಅರ್ಥವಾದ ಮೇಲೆ ಪೊಲೀಸರು ದುಲಾರಿಯ ಮನೆಗೆ ತೆರಳಿ ಆಕೆಯನ್ನು ರಕ್ಷಿಸಿದ್ದಾರೆ. ಇದೀಗ ಇಬ್ಬರನ್ನು ಒಟ್ಟಿಗೆ ಇರಲು ಬಿಡಲಾಗಿದೆ. (ಏಜೆನ್ಸೀಸ್​)
ಹಿಟ್ಲರ್​ ಬಳಸಿದ್ದ ಟಾಯ್ಲೆಟ್​ ಸೀಟು ಹರಾಜು! 65 ವರ್ಷ ಹಳೆಯ ಟಾಯ್ಲೆಟ್​ ಸೀಟಿಗೆ 13 ಲಕ್ಷ ರೂಪಾಯಿ!

ಮಗನಿಲ್ಲವೆಂದು ಇದ್ದ ನಾಲ್ಕು ಹೆಣ್ಣು ಮಕ್ಕಳನ್ನು ಕೊಂದ ತಾಯಿ! ಅಮ್ಮಾ ಎನ್ನುತ್ತಲೇ ಪ್ರಾಣ ಬಿಟ್ಟ ಅಪ್ರಾಪ್ತೆಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 2 =
Remember me
