ನವದೆಹಲಿ:ಒಳ್ಳೆಯ ಶಿಕ್ಷಣದಿಂದ ಮಾತ್ರ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆದರೆ, ಆ ಒಳ್ಳೆಯ ಶಿಕ್ಷಣ ಪಡೆಯುವುದು ಸುಲಭವಲ್ಲ. ಅದು ಎಲ್ಲರಿಗೂ ಲಭಿಸುವುದಿಲ್ಲ. ಒಳ್ಳೆಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯಬೇಕೆಂದರೆ, ಹಣ ತುಂಬಾ ಮುಖ್ಯ. ಬಡ ಮಕ್ಕಳಿಗಂತೂ ಪ್ರತಿಷ್ಠಿತ ಶಾಲಾ-ಕಾಲೇಜುಗಳು ಗಗನಕುಸುಮ ಎಂದರೆ ತಪ್ಪಾಗಲಾರದು. ಶಾಲೆಯಿಂದ ವಂಚಿತರಾಗುತ್ತಿರುವವರಲ್ಲಿಯೂ ಬಡ ಮಕ್ಕಳೇ ಹೆಚ್ಚಿದ್ದಾರೆ. ಆದರೆ ಎಷ್ಟೇ ಅಡೆತಡೆಯಿದ್ದರೂ ಕೆಲವರು ಅವುಗಳನೆಲ್ಲ ಮೆಟ್ಟಿನಿಂತು ಶಿಕ್ಷಿತರಾಗಿ ಹೊರಬರುತ್ತಾರೆ. ಇದೀಗ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿರುವ ವಿಡಿಯೋವೊಂದು ಇದನ್ನು ನೆನಪು ಮಾಡುವಂತಿದೆ.
ಹುಡುಗಿಯೊಬ್ಬಳ ಮನೆಯ ಮುಂದಿರುವ ಫುಟ್​ಪಾತ್​ ಮೇಲೆ ಕುಳಿತು ಬೀದಿ ದೀಪದ ಸಹಾಯದಿಂದ ಓದುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ. stutes_zone_987 ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಲಾಗಿದೆ.
ವಾಹನದಲ್ಲಿ ಹೋಗುತ್ತಿದ್ದವರು ವಿಡಿಯೋ ಮಾಡಿ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ವಿಡಿಯೋ ಮಾಡುತ್ತಿದ್ದಾರೆ ಎಂಬ ಅರಿವೇ ಇಲ್ಲದೆ ಓದಿನಲ್ಲಿ ವಿದ್ಯಾರ್ಥಿನಿ ಮಗ್ನರಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಆನ್‌ಲೈನ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಸುಮಾರು 1 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಕೆಲವರು ಹುಡುಗಿಯ ಕಠಿಣ ಪರಿಶ್ರಮದಿಂದ ಸ್ಫೂರ್ತಿ ಪಡೆದರೆ, ಇತರರು ಅವಳ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳುವ ಮೂಲಕ ಅವಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಕಠಿಣ ಪರಿಶ್ರಮ ಮತ್ತು ಕಠಿಣ ಸಮಯಗಳು ಖಂಡಿತವಾಗಿಯೂ ನಿಮಗೆ ಉತ್ತಮ ಬೆಲೆಯನ್ನು ನೀಡುತ್ತವೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್​)

A post shared by Stutes Zone 987 (@stutes_zone_987)

VIDEO| ರೇಪ್​ ಕೇಸ್​ನಲ್ಲಿ ಜಾಮೀನು ಪಡೆದು ಜೈಲಿಂದ ಹೊರ ಬಂದರೂ ಈ ರೀಲ್ಸ್ ಸ್ಟಾರ್​ಗೆ ಕಡಿಮೆಯಾಗಿಲ್ಲ ಸೊಕ್ಕು!

ಬಾನಯಾನದಲ್ಲೂ ಮೊಳಗಿದ ಕನ್ನಡ ಗಾನ: ಕೋಟಿ ಕಂಠ ಗಾಯನ ಅಭಿಯಾನಕ್ಕೆ ಸ್ಪೈಸ್​ ಜೆಟ್​ ಬೆಂಬಲ

ಒಂದೇ ದಿನದಲ್ಲಿ 200 ಕೋಟಿಗೂ ಅಧಿಕ ಮಂದಿಯಿಂದ ರಿಷಿ ಸುನಕ್​, ಅಕ್ಷತಾರ ಹುಡುಕಾಟ! ಹೀಗೊಂದು ದಾಖಲೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × 3 =
Remember me
