ಎರ್ನಾಕುಲಂ:ಬಾಯ್​​ಫ್ರೆಂಡ್​ಗೆ ಸ್ಮಾರ್ಟ್​ಫೋನ್​ ಕೊಡಿಸಲು 59 ವರ್ಷದ ಮಹಿಳೆಯೊಬ್ಬಳ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿ ಚಿನ್ನದ ಸರ ಮತ್ತು ಕಿವಿಯೋಲೆ ಎಗರಿಸಿದ ಪಿಯು ವಿದ್ಯಾರ್ಥಿನಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಜಲಜಾ (59) ಹಲ್ಲೆಗೊಳಗಾದ ಮಹಿಳೆ. ಈಕೆ ಎರ್ನಾಕುಲಂನ ಮುವತ್ತುಪುಳದ ಸೌಥ್​ ಪೈಪ್ರಾ ಕಾಲನಿಯ ನಿವಾಸಿ. ಈ ಘಟನೆ ನಿನ್ನೆ (ಫೆ.7) ಮಧ್ಯಾಹ್ನ ನಡೆದಿದೆ.
ಜಲಜಾ ಅವರು ಮನೆಯಲ್ಲಿ ಒಂಟಿಯಾಗಿದ್ದಾಗ ಸುತ್ತಿಗೆ ಸಮೇತ ಒಳಗಡೆ ನುಗ್ಗಿದ ಹುಡುಗಿ, ತಲೆಗೆ ಸುತ್ತಿಗೆಯಿಂದ ಹೊಡೆದು, ಚಿನ್ನದ ಸರ ಮತ್ತು ಕಿವಿಯೋಲೆ ಕಸಿದು ಪರಾರಿಯಾಗಿದ್ದಾಲೆ. ಗಾಯಗೊಂಡಿದ್ದ ಜಲಜಾ, ಘಟನೆಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.
ಜಲಜಾ ನೀಡಿದ ಮಾಹಿತಿ ಆಧಾರದ ಮೇಲೆ ಹುಡುಗಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ತನ್​ ಬಾಯ್​ಫ್ರೆಂಡ್​ಗೆ ಸ್ಮಾರ್ಟ್​ಫೋನ್​ ಉಡುಗೊರೆ ನೀಡುವುದಕ್ಕಾಗಿ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಆಕೆಯನ್ನು ಬಂಧಿಸಲಾಗಿದೆ. ಗಾಯಗೊಂಡಿರುವ ಜಲಜಾಗೆ ಕೊಟ್ಟಾಯಂ ಮೆಡಿಕಲ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.(ಏಜೆನ್ಸೀಸ್​)
ಸತತ 6ನೇ ಬಾರಿ ರೆಪೋ ದರ ಏರಿಸಿದ RBI: ಬ್ಯಾಂಕ್​ ಸಾಲಗಾರರಿಗೆ ಇಎಂಐ ಮತ್ತಷ್ಟು ದುಬಾರಿ

ಸೈಡ್​ ಕೊಡುವ ವಿಚಾರಕ್ಕೆ ಅಡ್ಡ ಹಾಕಿ ಹಲ್ಲೆ ಮಾಡಿದ ರಿಕ್ಷಾ ಚಾಲಕ!

ಚುನಾವಣಾ ತಯಾರಿ ಚುರುಕುಗೊಳಿಸಿದ ಬಿಜೆಪಿ; ಉಪಾಧ್ಯಕ್ಷ ವಿಜಯೇಂದ್ರಗೆ ಮಹತ್ವದ ಜವಾಬ್ದಾರಿ ನೀಡಿದ ಪಕ್ಷ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + one =
Remember me
