ಕೊಚ್ಚಿ:ಗಾಯಕರಲ್ಲದವರೂ ಸ್ನಾನದ ಕೋಣೆಯಲ್ಲಿರುವಾಗ ತಮ್ಮ ಮನಸಿಗೆ ತೋಚಿದ ಹಾಡನ್ನು ಗುನುಗುತ್ತಿರುತ್ತಾರೆ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿಯ ಪಾಲಿಗೆ ಬಾತ್​ರೂಮ್​ನಲ್ಲಿ ಹಾಡು ಕೇಳಿದ್ದೇ ಮುಳುವಾಗಿ ಪರಿಣಮಿಸಿದೆ. ಇಂಥದ್ದೊಂದು ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಅಮಲ್​ ಜ್ಯೋತಿ ಕಾಲೇಜ್ ಆಫ್ ಇಂಜಿನಿಯರಿಂಗ್​ನ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್​ ಬಾತ್​ರೂಮ್​ನಲ್ಲಿ ಹಾಡು ಕೇಳುತ್ತ ಸ್ನಾನ ಮಾಡಿದ್ದಕ್ಕೆ ತನ್ನ ಸ್ಮಾರ್ಟ್​ಫೋನ್ ಕಳೆದುಕೊಳ್ಳುವಂತಾಗಿದೆ. ಮಾತ್ರವಲ್ಲ ಕ್ಷಮಾಪಣಾ ಪತ್ರವನ್ನೂ ಬರೆಯುವಂತಾಗಿದೆ. ಇಂಥದ್ದೊಂದು ವಿಷಯ ಕುರಿತ ವಿಡಿಯೋ ರೆಡ್ಡಿಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ರಾಜ್ಯದ ಕರಾವಳಿಗೆ ಮುಂಗಾರು ಪ್ರವೇಶ; ರಾಜ್ಯಾದ್ಯಂತ ವ್ಯಾಪಿಸುವುದು ಯಾವಾಗ?
ಹಾಸ್ಟೆಲ್​ನಲ್ಲಿ ಸ್ಮಾರ್ಟ್​ಫೋನ್​ನಿಂದ ಸಂಗೀತ ಕೇಳುತ್ತ ಸ್ನಾನ ಮಾಡಿದ್ದಕ್ಕೆ ಅಲ್ಲಿನ ಆಡಳಿತ ಮಂಡಳಿ ಆಕೆಯ ಫೋನ್ ಕಿತ್ತುಕೊಂಡಿದೆ. ‘ನಾನು ಹಾಡು ಕೇಳುತ್ತ ಸ್ನಾನ ಮಾಡಿದ್ದಕ್ಕೆ ಕ್ಷಮೆ ಕೇಳುತ್ತಿದ್ದೇನೆ. ಇನ್ನು ಮುಂದೆ ಅಂಥ ತಪ್ಪು ಮಾಡಲ್ಲ. ದಯವಿಟ್ಟು ನನ್ನ ಸ್ಮಾರ್ಟ್​ಫೋನ್ ಹಿಂದಿರುಗಿಸಿ, ನನಗೆ ಬಹುಮುಖ್ಯವಾದ ಕೆಲಸ ಇದೆ, ಪ್ರಾಜೆಕ್ಟ್ ವರ್ಕ್​ ಪೂರ್ಣಗೊಳಿಸಬೇಕು’ ಎಂದು ಕ್ಷಮಾಪಣಾ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾಳೆ. ಅಂದಹಾಗೆ ಇದು ಕೆಲವು ತಿಂಗಳ ಹಿಂದೆ ನಡೆದ ಹಳೆಯ ಘಟನೆಯಾದರೂ ಈಗ ವೈರಲ್ ಆಗಿದೆ. –ಏಜೆನ್ಸೀಸ್

ನೋವುನಿವಾರಕದ ಡಬ್ಬಿ​ ನುಂಗಿ 9 ತಿಂಗಳ ಮಗು ಸಾವು; ಮದ್ವೆಯಾಗಿ 10 ವರ್ಷದ ಬಳಿಕ ಜನಿಸಿದ್ದ ಪುತ್ರಿ!

14 ನ್ಯಾಯಮೂರ್ತಿಗಳು ಸೇರಿದಂತೆ 270 ನಿವೃತ್ತ ಹಿರಿಯ ಅಧಿಕಾರಿಗಳಿಂದ ಪ್ರಧಾನಿ ಮೋದಿಗೆ ಪತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
