ಕೊಲ್ಲಂ:ಕೇರಳದ ಕೊಲ್ಲಂ ತಾಲೂಕಿನ ಪಠಾಣಪುರಂ ಮೂಲದ ಯುವತಿಯೊಬ್ಬಳು ಏಕಕಾಲದಲ್ಲಿ ಇಬ್ಬರು ಯುವಕರನ್ನು ಮದುವೆಯಾಗುವ ಬಯಕೆ ವ್ಯಕ್ತಪಡಿಸಿ, ಪಠಾಣಪುರಂ ಮತ್ತು ಪುನಲೂರಿನ ಸಬ್​ ರಿಜಿಸ್ಟ್ರಾರ್​ ಕಚೇರಿಗಳಿಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಿದ್ದಳು. ಇದನ್ನು ನೋಡಿ ಕಚೇರಿ ಸಿಬ್ಬಂದಿ ಗೊಂದಲಕ್ಕೀಡಾಗಿದ್ದರು. ಇದೀಗ ಎರಡು ವಾರಗಳ ಸಮಯದಲ್ಲಿ ಯುವತಿ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಹಳೆಯ ಬಾಯ್​ಫ್ರೆಂಡ್​ ಅನ್ನು ಆಯ್ದುಕೊಂಡಿದ್ದಾಳೆ. ಆದಾಗ್ಯೂ ಸಬ್ ರಿಜಿಸ್ಟ್ರಾರ್ ಸಲ್ಲಿಕೆಯಾಗಿರುವ ಎರಡೂ ಅರ್ಜಿಗಳ ಸಂಬಂಧ ಯುವತಿ ಮತ್ತು ಇಬ್ಬರು ಯುವಕರನ್ನು ವಿಚಾರಣೆಗೆ ಕರೆಯುವ ಮೂಲಕ ಯುವತಿಗೆ ಸಬ್​ ರಿಜಿಸ್ಟ್ರಾರ್​ ಕಚೇರಿ ಶಾಕ್​ ನೀಡಿದೆ.
ಅರ್ಜಿ ಸಲ್ಲಿಸಿದ ಯುವತಿ ಪಠಾಣಪುರಂನಲ್ಲಿ ಲ್ಯಾಬ್​ ಟೆಕ್ನಿಶಿಯನ್​ ಆಗಿದ್ದಾಳೆ. ಪುನ್ನಲಾ ಮೂಲದ ಯುವಕನನ್ನು ಮದುವೆ ಆಗುತ್ತೇನೆಂದು ಜೂನ್​ 30ರಂದು ಪಠಾಣಪುರಂ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಳು. ಬಳಿಕ ಜುಲೈ 13ರಂದು ಇದೇ ಯುವತಿ ಪುನಲೂರು ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದು, ಪುನಲೂರು ಮೂಲದ ಯುವಕನನ್ನು ಮದುವೆ ಆಗುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ.
ಇದನ್ನೂ ಓದಿ:ವೃದ್ಧ ದಂಪತಿಯ ಹೊಸ ಮನೆ ಧ್ವಂಸ; ಜಾಗ ಕಬಳಿಸಲು ಜಿ.ಪಂ. ಮಾಜಿ ಸದಸ್ಯೆಯ ಪತಿಯ ಕೃತ್ಯ?
ಯುವತಿ ಮೂಲತಃ ಪಠಾಣಪುಂನವಳು. ಹೀಗಾಗಿ ಪುನಲೂರು ಸಬ್​ ರಿಜಿಸ್ಟ್ರಾರ್​ ಕಚೇರಿ ಅರ್ಜಿಯ ಸಂಬಂಧ ನೋಟಿಫಿಕೇಶನ್​ ಅನ್ನು ಪಠಾಣಪುಂ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಕಳುಹಿಸಲು ನಿರ್ಧರಿಸಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೊನ್ನೆ (ಜು.13) ಪುನಲೂರು ಮೂಲದ ಯುವಕನ ಜತೆ ತೆರಳಿ ತನ್ನ ಹೇಳಿಕೆಯನ್ನು ದಾಖಲಿಸಿ ಬಂದಿದ್ದಾಳೆ.
ಯುವತಿಯ ಪ್ರಕಾರ ಆಕೆ ಪುನಲೂರು ಮೂಲದ ಯುವಕನ ಜತೆ ಲಿವಿಂಗ್​ ಟುಗೆದರ್​ನಲ್ಲಿದ್ದಳು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗ ಹಿನ್ನೆಲೆಯಲ್ಲಿ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದಳು. ಇದೇ ಸಮಯದಲ್ಲಿ ಆಕೆಗೆ ಪಠಾಣಪುರಂ ಮೂಲದ ಯುವಕನ ಪರಿಚಯವಾಗಿತ್ತು. ಆಕೆ ಹೇಳುವ ಪ್ರಕಾರ ಆತ ನನಗೆ ಗೊತ್ತಿಲ್ಲದೆ ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದಾನೆ. ಆದರೆ, ಅದು ಮದುವೆಗೆ ಸಂಬಂಧಿಸಿದ ಅರ್ಜಿ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾಳೆ.
ಇದನ್ನೂ ಓದಿ:ವಯಸ್ಸಾದ್ರೂ ನಟಿ ಸದಾ ಯಾಕಿನ್ನೂ ಮದುವೆ ಆಗಿಲ್ಲ? ಮೊನಾಲಿಸಾ ಬೆಡಗಿ ಕೊಟ್ಟ ಉತ್ತರ ಹೀಗಿದೆ ನೋಡಿ….
ಆದರೆ, ಪಠಾಣಪುರಂ ಸಬ್​ ರಿಜಿಸ್ಟ್ರಾರ್​ ಕಚೇರಿಯು ಆಕೆಯ ಒಂದು ಬದಿಯ ಕತೆಯನ್ನು ನಂಬಲು ತಯಾರಿಲ್ಲ. ಏನೋ ಮುಚ್ಚಿಡುತ್ತಿದ್ದಾಳೆ ಎಂಬ ಸಂದೇಹ ಬಂದಿದ್ದು, ಜುಲೈ 21ಕ್ಕೆ ಪುನ್ನಲಾ ಮೂಲದ ಯುವಕನೊಂದಿಗೆ ವಿಚಾರಣೆಗೆ ಬರುವಂತೆ ಯುವತಿಗೆ ತಾಕೀತು ಮಾಡುವ ಮೂಲಕ ಆಕೆಗೆ ಶಾಕ್​ ನೀಡಿದೆ. ಇದೇ ವೇಳೆ ಪುನಲೂರು ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ಜುಲೈ 22ರಂದು ಮಹಿಳೆಯರು ಹಾಗೂ ಪುನಲೂರು ಮೂಲದವರ ನಡುವೆ ಸಭೆಗೆ ಕರೆ ನೀಡಲಾಗಿದೆ.(ಏಜೆನ್ಸೀಸ್​)
ರಾಜ್​ಘಾಟ್​ನ ಗಾಂಧಿ ಸಮಾಧಿಯೇ ಜಲಾವೃತ: ಜಲಚರಗಳಿಂದ ಸ್ಥಳೀಯರಿಗೆ ಆತಂಕ, ಪ್ರವಾಸಿ ತಾಣಗಳ ಮೂಲಸೌಕರ್ಯಗಳು ನಾಶ

13 ಸಾವಿರ ಸಾರಿಗೆ ಸಿಬ್ಬಂದಿ ನೇಮಕ; ಚಾಲಕ-ನಿರ್ವಾಹಕ ಮೆಕ್ಯಾನಿಕ್​ಗಳ ಭರ್ತಿ ಶೀಘ್ರ

ಚಂದ್ರಯಾನ-3: ಪ್ರಯಾಣ ಪೂರ್ಣಗೊಳಿಸಿ ಯಶಸ್ಸು ಸಾಧಿಸುವತ್ತ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 6 =
Remember me
