ನವದೆಹಲಿ:ಮೆಹಂದಿ ಹಚ್ಚಿಕೊಂಡ ಕೆಲವೇ ಕ್ಷಣಗಳಲ್ಲಿ 9 ವರ್ಷದ ಬಾಲಕಿಯೊಬ್ಬಳು ಮೂರ್ಛೆ ಹೋದ ಪ್ರಕರಣವೊಂದು ನಡೆದಿದೆ. ಇದೊಂದು ವಿಚಿತ್ರ ಪ್ರಕರಣವೆಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ದೆಹಲಿಯ ಸರ್​ ಗಂಗಾರಾಮ್​ ಆಸ್ಪತ್ರೆಯ ಕ್ಲಿನಿಕಲ್ ನ್ಯೂರೋಫಿಸಿಯಾಲಜಿ 2023ರ ಜನವರಿ ಆವೃತ್ತಿಯಲ್ಲಿ ಈ ವಿಚಿತ್ರ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಒಂಬತ್ತು ವರ್ಷದ ಬಾಲಕಿಯೊಬ್ಬಳು ಮೆಹಂದಿ ಹಚ್ಚಿಕೊಂಡ ಬೆನ್ನಿಗೇ ಎಪಿಲೆಪ್ಟಿಕ್ ಸೀಜರ್​ಗೆ ತುತ್ತಾಗಿದ್ದನ್ನು ಇಲ್ಲಿನ ವೈದ್ಯರು ಹೇಳಿಕೊಂಡಿದ್ದಾರೆ.
ಈ ಬಾಲಕಿ ಮೆಹಂದಿಯ ಪರಿಮಳದಿಂದ ಮೂರ್ಛೆಗೆ ಒಳಗಾಗಿ ಬಳಲುವುದು ನಡೆಯುತ್ತಿದೆ. ಮೆಹಂದಿ ಹಚ್ಚಿಕೊಂಡಾಗ ಈಕೆ ಮೊದಲ ಸಲ ಮೂರ್ಛೆ ಹೋಗಿ ಬಿದ್ದಿದ್ದು, 20 ಸೆಕೆಂಡುಗಳವರೆಗೆ ಸೆಳೆತವಿತ್ತು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ಆಕೆಯನ್ನು ಪುನಃ ಆಸ್ಪತ್ರೆಗೆ ಪರೀಕ್ಷೆಗೆ ಕರೆತರಲಾಗಿತ್ತು. ಆಸ್ಪತ್ರೆಯ ವ್ಯವಸ್ಥೆಯಡಿ ಆಕೆಯ ಕೈಗೆ ಮೆಹಂದಿ ಹಚ್ಚಿ ಕೈಯನ್ನು ಎದೆಯ ಬಳಿ ತರುತ್ತಿರುವಂತೆ ಆಕೆ ಮೂರ್ಛೆಗೆ ಒಳಗಾಗುವುದು ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಾತ್ರವಲ್ಲ, ಇದೊಂದು ವಿಚಿತ್ರ ಪ್ರಕರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಆಕೆಗೆ ಚಿಕಿತ್ಸೆ ನೀಡಲಾಗಿದ್ದು, ಅವಳು ಸ್ಥಿರವಾಗಿದ್ದಾಳೆ ಮತ್ತು ಆಕೆಗೆ ಮೆಹಂದಿಯಿಂದ ದೂರ ಇರುವಂತೆ ಸಲಹೆ ನೀಡಲಾಗಿದೆ ಎಂದಿದ್ದಾರೆ.
ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

ಗರ್ಲ್​​ಫ್ರೆಂಡ್​ ತಾಯಿಗೆ ಹೆದರಿ ಸತ್ತೇ ಹೋದ; ಆಗಿದ್ದಾದರೂ ಏನು?

ಪೊಲೀಸರೆದುರೇ ಮಾರಕಾಸ್ತ್ರ ಝಳಪಿಸಿ ದಾದಾಗಿರಿ; ಒಳ್ಳೇ ಮಾತಲ್ಲಿ ಹೇಳಿದ್ರೂ ಕೇಳದವನಿಗೆ ಶೂಟ್ ಮಾಡಿ ಬೆಂಡೆತ್ತಿದ ಪೊಲೀಸರು!

ಮೊಮ್ಮಗಳ ಮೇಲೇ ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ 20 ವರ್ಷ ಶಿಕ್ಷೆ; ಅಜ್ಜ ಹಾಕಿದ್ದ ಬೆದರಿಕೆಯಾದರೂ ಎಂಥದ್ದು!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − twelve =
Remember me
