ನವದೆಹಲಿ:ಯುವತಿಯೊಬ್ಬಳು ತನ್ನ ಬಾಯ್​ಫ್ರೆಂಡ್​ಗೆ ಸರ್ಪ್ರೈಸ್​ ಆಗಿ ಐಫೋನ್​ ಉಡುಗೊರೆ ನೀಡುವ ಮನಮುಟ್ಟವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಸೆಳೆದಿದೆ.
ದುಬಾರಿ ಉಡುಗೊರೆಯನ್ನು ನಿರೀಕ್ಷಿಸದ ಬಾಯ್​ಫ್ರೆಂಡ್​ ಐಫೋನ್​ ನೋಡುತ್ತಿದ್ದಂತೆ ಒಂದು ಕ್ಷಣ ನಂಬಲಾಗದೇ ಬಾಯಿ ಮೇಲೆ ತನ್ನ ಕೈಯಿಟ್ಟು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಈ ವೇಳೆ ಆತನ ಪ್ರತಿಕ್ರಿಯೆಯು ನೆಟ್ಟಿಗರ ಮೆಚ್ಚುಗೆ ಪಡೆದಿದೆ. ಖುಷಿಯಿಂದ ಐಪೋನ್ ತೆಗೆದು ಪ್ರದರ್ಶಿಸುತ್ತಾನೆ. ಅಲ್ಲದೆ, ಪ್ರೀತಿಯ ಉಡುಗೊರೆ ನೀಡಿ ತನ್ನ ಪ್ರೇಯಸಿಯನ್ನು ತಬ್ಬಿಕೊಳ್ಳುತ್ತಾನೆ.
ಇದನ್ನೂ ಓದಿ:ವಿರೋಧದ ನಡುವೆಯೂ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಯುವಕನ ಮೇಲೆ ಯುವತಿಯ ಸೋದರ ಮಾವನಿಂದ ಹಲ್ಲೆ
ಕಾರೊಂದರಲ್ಲಿ ಯುವತಿ ಮನೆಯಿಂದ ಹೊರಡುತ್ತಿರುವ ದೃಶ್ಯದೊಂದಿಗೆ ವಿಡಿಯೋ ಆರಂಭವಾಗುತ್ತದೆ. ಬಳಿಕ ಆಕೆ ಐಫೋನ್​ ಸ್ಟೋರ್​ಗೆ ತೆರಳಿ, ಉತ್ತಮವಾದ ಐಫೋನ್​ ಖರೀದಿ ಮಾಡಿ, ಅದನ್ನು ಪ್ಯಾಕ್​ ಮಾಡಿಸಿಕೊಂಡು, ನಿನಗೊಂದು ಸರ್ಪ್ರೈಸ್​ ಇದೆ ಎಂದು ಬಾಯ್​ಫ್ರೆಂಡ್​ಗೆ ಮಸೇಜ್​ ಮಾಡಿ, ಸ್ಟಾರ್​ಬಕ್ಸ್​ಗೆ ತೆರಳುತ್ತಾಳೆ. ಪ್ರೇಯಸಿಯ ಮೆಸೇಜ್​ ನೋಡಿ ಬಾಯ್​ಫ್ರೆಂಡ್​ ಕೂಡ ಅಲ್ಲಿಗೆ ಬರುತ್ತಾನೆ.
ಬಾಯ್​ಫ್ರೆಂಡ್​ ಬರುವ ಮುನ್ನವೇ ತನ್ನ ಬ್ಯಾಗ್​ನ ಹಿಂದೆ ಕ್ಯಾಮೆರಾ ಇಟ್ಟು ಬಾಯ್​ಫ್ರೆಂಡ್​ ಪ್ರತಿಕ್ರಿಯೆಯನ್ನು ರೆಕಾರ್ಡ್​ ಮಾಡಿಕೊಳ್ಳುತ್ತಾಳೆ. ಸ್ಟಾರ್​ಬಕ್ಸ್​ ಒಳಗೆ ಬರುತ್ತಿದ್ದಂತೆ ಗರ್ಲ್​ಫ್ರೆಂಡ್​ ಇರುವ ಕಡೆ ಬರುವ ಪ್ರಿಯಕರ, ಆಕೆಯನ್ನು ತಬ್ಬಿಕೊಂಡು, ನಗು ಬೀರಿ ಮುತ್ತಿಗಾಗಿ ಬೇಡಿಕೆ ಇಡುತ್ತಾನೆ. ಬಳಿಕ ಪ್ರೇಯಿಸಿ ಆತನ ಕೆನ್ನಗೆ ಚುಂಬಿಸುತ್ತಾಳೆ. ಬಳಿಕ ಪ್ರೇಯಸಿ ಬಾಯ್​ಫ್ರೆಂಡ್​ ಬ್ಯಾಗ್​ ಇಟ್ಟು ಸರ್ಪ್ರೈಸ್​ ನೀಡುತ್ತಾಳೆ. ಅದರಲ್ಲಿದ್ದ ಐಫೋನ್​ ನೋಡಿ ಪ್ರಿಯಕರ ಒಂದು ಕ್ಷಣ ಶಾಕ್​ ಆಗುತ್ತಾನೆ. ಕೊನೆಗೂ ತುಂಬಾ ಸಂತೋಷದಿಂದ ಫೋನ್​ ಬಾಕ್ಸ್​ ಓಪನ್​ ಮಾಡಿ ಐಫೋನ್​ ಅನ್ನು ಪ್ರೇಯಸಿಯ ಮೊಬೈಲ್​ ಕ್ಯಾಮೆರಾ ಮುಂದೆ ಪ್ರದರ್ಶನ ಮಾಡುತ್ತಾನೆ.
A post shared by Sach Kadwa Hai (@sachkadwahai)

ಈ ವಿಡಿಯೋ ನೋಡಿದ ನೆಟ್ಟಿಗರು ಬಗೆಯ ಬಗೆಯ ಕಾಮೆಂಟ್​ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಎಲ್ಲ ಹುಡುಗರಿಗೆ ಇಂತಹ ಹುಡುಗಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ನೆಟ್ಟಿಗರೊಬ್ಬರು ಕಮೆಂಟಿಸಿದ್ದಾರೆ.(ಏಜೆನ್ಸೀಸ್​)
ಗನ್​ ತೋರಿಸಿ ಕಾರು ಕದ್ದೊಯ್ದ 8 ವರ್ಷದ ಬಾಲಕ…

ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದ ಶಾಸಕನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ! ವಿಡಿಯೋ ವೈರಲ್​

ಹುಬ್ಬಳ್ಳಿಯಲ್ಲಿ ಸಾವಿಗೆ ಶರಣಾದ ಯುವ ಪೊಲೀಸ್​ ಕಾನ್ಸ್​ಟೆಬಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 4 =
Remember me
