ಮುಂಬೈ:ಕರೊನಾ ಲಾಕ್​ಡೌನ್​ನಿಂದ ಶಾಲಾ-ಕಾಲೇಜುಗಳು ಅನಿವಾರ್ಯವಾಗಿ ಆನ್​ಲೈನ್​ ಕ್ಲಾಸ್​ ಮೊರೆ ಹೋಗಬೇಕಾಯಿತು. ಆದರೆ, ಆನ್​ಲೈನ್​ ಕ್ಲಾಸ್​ ಭಾಗವಾಗಿ ಮಕ್ಕಳ ಕೈಯಲ್ಲಿ ಇಂದು ಸ್ಮಾರ್ಟ್​ಫೋನ್​ ಇರುವುದು ಸೆರಗಿಗೆ ಕೆಂಡ ಕಟ್ಟಿಕೊಂಡಂತಾಗಿದೆ. ಆನ್​ಲೈನ್​ ಕ್ಲಾಸ್​ ಶುರುವಾದಗಿನಿಂದ ಒಂದಲ್ಲ ಒಂದು ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಂಥದ್ದೇ ಮತ್ತೊಂದು ಘಟನೆ ಮುಂಬೈನಲ್ಲಿ ನಡೆದಿದೆ.
ಪಾಲಕರು ಮಕ್ಕಳ ಮೇಲೆ ಗಮನ ಇಡದಿದ್ದರೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಉತ್ತಮ ಉದಾಹರಣೆಯಾಗಿದೆ. ಸ್ಮಾರ್ಟ್​ಫೋನ್​ ಎಷ್ಟು ಉಪಯುಕ್ತವೂ ಅಷ್ಟೇ ಅಪಾಯಕಾರಿಯು ಹೌದು. ಅದರಲ್ಲೂ ಇಂಟರ್ನೆಟ್​ ಇದ್ದರೆ ಅದರ ಪ್ರಭಾವ ಮತ್ತಷ್ಟು ಹೆಚ್ಚಾಗುತ್ತದೆ. ನಾವು ಹೇಳ ಹೊರಟಿರುವ ವಿಚಾರವೇನೆಂದರೆ, 13 ವರ್ಷದ ಬಾಲಕನೊಬ್ಬ 14 ವರ್ಷದ ಬಾಲಕಿಯನ್ನು ಬೆತ್ತಲೆಯಾಗಿಸಿ, ಅದನ್ನು ರೆಕಾರ್ಡ್​ ಮಾಡಿ ಬ್ಲ್ಯಾಕ್​ಮೇಲ್​ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿರಿ:ಪತಿಯ ಅತಿಯಾದ ಚಟ, ಕಿರುಕುಳಕ್ಕೆ ಬೇಸತ್ತು ಐಪಿಎಸ್​ ಅಧಿಕಾರಿಯಿಂದ ದೂರು ದಾಖಲು!
ವಿವಿರಣೆಗೆ ಬರುವುದಾದರೆ ಮುಂಬೈನ ಪಶ್ಚಿಮ ಉಪನಗರದಲ್ಲಿ ವಾಸವಿರುವ 14 ವರ್ಷದ ಬಾಲಕಿ ಇನ್​​ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದಾಳೆ. ಲಾಕ್​ಡೌನ್​ ಸಮಯದಲ್ಲಿ ಅತಿಹೆಚ್ಚು ಸಮಯ ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತಿದ್ದಳು. ಅದೇ ಸಮಯದಲ್ಲಿ ಅಪರಿಚಿತ ಬಾಲಕನಿಂದ ಫ್ರೆಂಡ್​ ರಿಕ್ವೆಸ್ಟ್​ ಸ್ವೀಕರಿಸಿದಳು. ಹಿಂದು-ಮುಂದು ನೋಡದೇ ರಿಕ್ವೆಸ್ಟ್​ಗೆ ಓಕೆ ಎಂದಳು. ಇದಾದ ಬಳಿಕ ಇಬ್ಬರ ನಡುವೆ ಚಾಟಿಂಗ್​ ಶುರುವಾಯಿತು. ಕೊನೆಗೆ ಇಬ್ಬರು “ಟ್ರೂಥ್​ ಆರ್​ ಡೇರ್​” ಎಂಬ ಆನ್​ಲೈನ್​ ಗೇಮ್​ ಶುರು ಮಾಡಿದರು.
ಒಂದು ದಿನ “ಡೇರ್​ ಚಾಲೆಂಜ್​” ಭಾಗವಾಗಿ ಬಾಲಕ, ಬಾಲಕಿಗೆ ಒಂದು ಮಸೇಜ್​ ಕಳುಹಿಸುತ್ತಾನೆ. ಬಾಲಕನ ಆದೇಶದಂತೆ ಬಾಲಕಿ ತನ್ನ ಬಟ್ಟೆಯನ್ನು ಕಳಚಿ ಬೆತ್ತಲೆಯಾಗಬೇಕು. ಈ ರೀತಿ ಮಾಡಿದರೆ ಮುಂದೆ ಯಾವ ಪರಿಣಾಮ ಬೀರಲಿದೆ ಎಂಬ ಅರಿವಿಲ್ಲದೆ, ಗೇಮ್​ನ ನಿಯಮಾನುಸಾರ ಬಾಲಕಿ ತನ್ನ ಬಟ್ಟೆಗಳನ್ನು ಕಳಚಿ ಬೆತ್ತಲೆಯಾಗಿದ್ದಾಳೆ. ಇದೆಲ್ಲವೂ ಸಹ ಲೈವ್​ ರೆಕಾರ್ಡ್​ ಆಗುತ್ತಿರುತ್ತದೆ. ಆದರೆ, ಬಾಲಕಿಗೆ ಇದರ ಅರಿವೇ ಇರುವುದಿಲ್ಲ. ಇದಾದ ಬಳಿಕ ಮತ್ತೊಮ್ಮೆ ಬೆತ್ತಲಾಗುವಂತೆ ಬಾಲಕ ಹೇಳುತ್ತಾನೆ. ಆದರೆ, ಬಾಲಕಿ ನಿರಾಕರಿಸಿದಾಗ ಬ್ಲ್ಯಾಕ್​ಮೇಲ್​ ಮಾಡಲು ಆರಂಭಿಸುತ್ತಾನೆ. ರೆಕಾರ್ಡ್​ ಮಾಡಿರುವ ವಿಡಿಯೋವನ್ನು ವೈರಲ್​ ಮಾಡುವುದಾಗಿ ಬೆದರಿಸುತ್ತಾನೆ ಮತ್ತು ವಿಡಿಯೋವನ್ನು ಬಾಲಕಿಗೆ ಕಳುಹಿಸುತ್ತಾನೆ.
ಇದನ್ನೂ ಓದಿರಿ:ಲವ್ವರ್​ ಜತೆ ರಾತ್ರಿ ಹೋಟೆಲ್​ನಲ್ಲಿದ್ದ ಯುವತಿ ಬೆಳಗ್ಗೆ ದುರಂತ ಸಾವು: ಕೊನೆಗೂ ತಪ್ಪೊಪ್ಪಿಕೊಂಡ ಪ್ರಿಯಕರ!
ಇದಾದ ಬಳಿಕ ಬಾಲಕಿ ಬೇಸರದಲ್ಲಿರುವುದನ್ನು ಗಮನಿಸುವ ಪಾಲಕರು ಏನಾಯಿತು ಎಂದು ಕೇಳಿದಾಗ ಎಲ್ಲವನ್ನು ವಿವರಿಸುತ್ತಾಳೆ. ಬಳಿಕ ಪಾಲಕರು ಪೊಲೀಸರಿಗೆ ದೂರು ನೀಡುತ್ತಾರೆ. ಬಳಿ ಐಪಿ ಅಡ್ರೆಸ್​ ಸಹಾಯದಿಂದ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಬಾಲಕನನ್ನು ಪತ್ತೆಹಚ್ಚುತ್ತಾರೆ. ಆದರೆ, ಆಗಲೇ ಅವರಿಗೆಲ್ಲ ಗೊತ್ತಾಗುವುದು ಇಷ್ಟೆಲ್ಲಾ ಮಾಡಿದ್ದು 13 ವರ್ಷದ ಬಾಲಕನೆಂದು. ಗೊತ್ತಾದ ಬಳಿಕ ಆಘಾತಕ್ಕೆ ಒಳಗಾಗುತ್ತಾರೆ. ಇನ್ನು ಬಾಲಕನು ಸಹ ಬಾಲಕಿ ವಾಸವಿರುವ ಏರಿಯಾದವನೆ. ಅಲ್ಲದೆ, ಆತನ ಬಾಲಕಿಯ ಕ್ಲಾಸ್​ಮೇಟ್​ ಸಹ ಹೌದು. ಇದೆವಲ್ಲನೂ ತಿಳಿದ ಬಾಲಕನ ಪಾಲಕರಿಗೆ ಒಮ್ಮೆ ಆಘಾತವಾಗುತ್ತದೆ. ಆನ್​ಲೈನ್​ ಕ್ಲಾಸ್​ ನೆಪದಲ್ಲಿ ಮಕ್ಕಳು ಮಾಡುತ್ತಿರುವ ಕೆಲಸವನ್ನು ನೋಡಿ ಎಲ್ಲರೂ ದಿಗ್ಭ್ರಾಂತಗೊಳ್ಳುತ್ತಾರೆ.
ಕೊನೆಗೆ ಪೊಲೀಸರು ಮಕ್ಕಳಿಬ್ಬರ ಪಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಮಕ್ಕಳು ಏನು ಮಾಡುತ್ತಿದ್ದಾರೆ? ಮೊಬೈಲ್​ನಲ್ಲಿ ಏನು ನೋಡುತ್ತಿದ್ದಾರೆ ಎಂದು ಆಗಾಗ ನೋಡಿಕೊಳ್ಳಬೇಕು. ಇದು ಪಾಲಕರ ಜವಾಬ್ದಾರಿಯೂ ಹೌದು ಎಂದು ಪೊಲೀಸರು ಪಾಲಕರಿಗೆ ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ.(ಏಜೆನ್ಸೀಸ್​)
ವೇಶ್ಯೆ ಸೋಗಲ್ಲಿ ಯುವಕರ ಕೋಣೆಗೆ ಆಂಟಿ ಎಂಟ್ರಿ! ಸಲ್ಲಾಪದ ವೇಳೆ ವರಸೆ ಬದಲು, ಬೆಸ್ತುಬಿದ್ದವ ಮಾಡಿದ್ದೇನು?

ಕುಡಿದ ಅಮಲಿನಲ್ಲಿ ಒಂಟಿ ಮಹಿಳೆ ಇದ್ದ ಮನೆಗೆ ನಡುರಾತ್ರಿ ನುಗ್ಗಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

ಕಾಮದಾಸೆಗೆ ಕಡಿವಾಣ ಹಾಕುವ ಆತಂಕ: ಮದ್ವೆಯಾದ ಎರಡೇ ತಿಂಗಳಿಗೆ ಪತ್ನಿ ಕೊಂದ ಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
