ಉದಯಪುರ:ಮಕ್ಕಳು ದೇವರ ಸಮಾನ ಎನ್ನುತ್ತಾರೆ. ಆದರೆ ಕೆಲವು ಪಾಪಿಗಳು ಆ ಮಕ್ಕಳ ಮೇಲೇ ಹಲ್ಲೆ ನಡೆಸಿ, ಅತ್ಯಾಚಾರ ಮಾಡಿಬಿಡುತ್ತಾರೆ. ಅಮ್ಮನ ಮಡಿಲಲ್ಲಿ ಮಲಗಿದ್ದ ಎಂಟು ವರ್ಷದ ಪುಟ್ಟ ಬಾಲಕಿಯೊಬ್ಬಳು ಇದೇ ರೀತಿಯ ದುಷ್ಕೃತ್ಯದಿಂದಾಗಿ ಶವವಾಗಿರುವ ಘಟನೆ ರಾಜಸ್ಥಾನದ ಪ್ರತಾಪ್​ಗಢ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಕಾಫಿಗೆಂದು ಕರೆದ, ಸ್ನೇಹಿತರ ಜತೆ ಸೇರಿ ಗ್ಯಾಂಗ್​ ರೇಪ್​ ಮಾಡಿದ; ಅಣ್ಣನ ಸ್ನೇಹಿತನಿಂದಲೇ ಮೋಸ ಹೋದ ಬಾಲಕಿ
ಜಿಲ್ಲೆಯ ಮೇಘಾಪುರ ಹಳ್ಳಿಯಲ್ಲಿ ಅಪ್ಪ, ಅಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳ ಮುದ್ದಾದ ಕುಟುಂಬ. ಶುಕ್ರವಾರ ಅಪ್ಪ ಯಾವುದೋ ಕೆಲಸದ ಮೇರೆಗೆ ಬೇರೆ ಊರಿಗೆ ಹೋಗಿದ್ದ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ಕ ಪಕ್ಕ ಮಲಗಿಸಿಕೊಂಡು ತಾಯಿ ನಿದ್ರೆಗೆ ಜಾರಿದ್ದಾಳೆ. ಮಕ್ಕಳೊಂದಿಗೆ ನಿದ್ರೆ ಮಾಡಿದ ತಾಯಿ ಬೆಳಗ್ಗೆ ಎದ್ದು ನೋಡಿದಾಗ ತನ್ನ ಪಕ್ಕ ಮಲಗಿದ್ದ ಎಂಟು ವರ್ಷದ ಮಗಳು ಕಾಣೆಯಾಗಿದ್ದಾಳೆ. ಮನೆಯೆಲ್ಲ ಹುಡುಕಿದರೂ ಮಗಳು ಕಾಣಿಸದಿದ್ದಾಗ, ಮಗಳಿಗೆ ಏನೋ ಅಪಾಯವಾಗಿರುವ ಮುನ್ಸೂಚನೆ ತಾಯಿಗೆ ಸಿಕ್ಕಿದೆ. ತಕ್ಷಣ ಗಂಡನಿಗೆ ವಿಚಾರ ತಿಳಿಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಅಪ್ಪ ಅಮ್ಮನ ಮೃತದೇಹದೊಂದಿಗೇ ಬದುಕಿದ ಮಗಳು! ಕಣ್ಣೀರು ತರಿಸುತ್ತೆ ಈ ಕಥೆ
ರಾತ್ರೋರಾತ್ರಿ ನಾಪತ್ತೆಯಾದ ಮಗಳು ಗ್ರಾಮದ ಬತ್ತಿದ್ದ ಬಾವಿಯಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿ ದೇಹವನ್ನು ಹೊರತಗೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಯ ಮೇಲೆ ಅತ್ಯಾಚಾರವಾಗಿರುವುದು ದೃಢವಾಗಿದೆ. ಅಮ್ಮ ಮಕ್ಕಳು ಮಲಗಿದ್ದ ಸಮಯದಲ್ಲಿ ಮನೆಗೆ ಬಂದ ಪಾಪಿಗಳು ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಕಾಮದಾಸೆ ತೀರಿದ ನಂತರ ಆಕೆಯನ್ನು ಕೊಂದು ಬಾವಿಗೆ ಎಸೆದಿದ್ದಾರೆ. ಪ್ರಕರಣ ದಾಖಲಾಗಿ ಎರಡು ದಿನದಲ್ಲಿ 50 ಜನ ಶಂಕಿತರನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಲಾಕ್​ಡೌನ್​ನಲ್ಲಿ ಅತ್ತೆ ಮನೆಯಲ್ಲಿದ್ದ ಅಳಿಯನಿಗೆ ನಾದಿನಿ ಮೇಲೆ ಪ್ರೀತಿ; ತಂಗಿಯೊಡನೆ ಕಾಲ್ಕಿತ್ತ ಪತಿರಾಯ

ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 12 =
Remember me
