ನವದೆಹಲಿ:ಅಣ್ಣಂದಿರಿಗೆ ತಂಗಿಯ ಬಗ್ಗೆ ರಕ್ಷಣಾ ಭಾವ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದೇ ರಕ್ಷಣಾ ಭಾವ ಹೆಚ್ಚಾದರೆ ದೊಡ್ಡ ಅನಾಹುತಗಳೂ ನಡೆದುಬಿಡಬಹುದು. ಇದೀಗ ಅಂತದ್ದೇ ಒಂದು ಅವಘಡ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಇದನ್ನೂ ಓದಿ:26/11 ಮುಂಬೈ ದಾಳಿ ದಿನವೇ ಮತ್ತೊಂದು ದಾಳಿಗೆ ಯೋಜನೆ !
ದೆಹಲಿಯ ವೆಲ್​ಕಮ್​ ಸಮುದಾಯದ ಒಂದು ಕುಟುಂಬದಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಬಾಲಕಿ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಮನೆಯಲ್ಲೇ ಇರುತ್ತಿದ್ದಳು. ಆಕೆಯ ಅಣ್ಣ 17 ವರ್ಷದವನಾಗಿದ್ದು ಆತ ಸೆಲೂನ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅದರ ಜತೆಯಲ್ಲಿ ದೂರ ಶಿಕ್ಷಣವನ್ನೂ ಪಡೆಯುತ್ತಿದ್ದ. ಇತ್ತೀಚೆಗೆ ಬಾಲಕಿಗೆ ಯಾವುದೋ ಹುಡುಗನೊಂದಿಗೆ ಸ್ನೇಹ ಬೆಳೆದಿದೆ. ಆಕೆ ಆಗಾಗ ಹುಡುಗನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಿದ್ದಳು. ವಾಟ್ಸ್ಯಾಪ್​ ಚಾಟಿಂಗ್​ ಕೂಡ ಮಾಡುತ್ತಿದ್ದಳು.
ತಂಗಿ ಯಾವುದೋ ಹುಡುಗನೊಂದಿಗೆ ಚಾಟಿಂಗ್​ ಮಾಡುತ್ತಿದ್ದದ್ದನ್ನು ಗಮನಿಸಿದ ಅಣ್ಣ ಆಕೆಯ ಮೇಲೆ ಗದರಿದ್ದಾನೆ. ಅದಕ್ಕೆ ಬೆಲೆ ಕೊಡದೆ ಚಾಟಿಂಗ್​ ಮುಂದುವರಿಸಿದ ತಂಗಿಯ ಮೇಲೆ ಇನ್ನಷ್ಟು ಕೋಪಗೊಂಡ ಅಣ್ಣ, ತನ್ನ ಸ್ನೇಹಿತನ ಮನೆಯಿಂದ ಪಿಸ್ತೂಲು ತಂದು ತಂಗಿಯ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ.
ಇದನ್ನೂ ಓದಿ:ಲವ್​ನಲ್ಲಿ ಜಿಹಾದ್​ಗೆ ಜಾಗವೇ ಇಲ್ಲ – ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ‘ಪ್ರೇಮ’ ಪಾಠ !
ಮನೆಯಲ್ಲಿ ನಡೆದ ಅವಘಡ ತಿಳಿದು ಓಡಿ ಬಂದ ಪೋಷಕರು, ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಣ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಸ್ನೇಹಿತನೊಬ್ಬ ತಿಂಗಳ ಹಿಂದೆ ಸಾವನ್ನಪ್ಪಿದ್ದು, ಆತನ ಮನೆಯಿಂದಲೇ ಪಿಸ್ತೂಲು ತಂದಿದ್ದಾಗಿ ಯುವಕ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್​)
ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

ಮರದಲ್ಲಿ ನೇತಾಡುತ್ತಿತ್ತು 16 ವರ್ಷದ ಬಾಲಕಿ ದೇಹ; ಬೆಚ್ಚಿ ಬೀಳಿಸುತ್ತೆ ಈ ಹೈ ಸ್ಕೂಲ್​ ಲವ್​ ಸ್ಟೋರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 7 =
Remember me
