ಅಮೃತಸರ:ಮುಖದ ಮೇಲೆ ಭಾರತದ ಧ್ವಜವನ್ನು ಪೇಂಟಿಂಗ್​ ಮಾಡಿಸಿಕೊಂಡಿದ್ದ ಮಹಿಳೆಗೆ ಅಮೃತಸರದಲ್ಲಿರುವ ಸಿಖ್​ ಸಮುದಾಯದ ಪವಿತ್ರ ಕ್ಷೇತ್ರ ಗೋಲ್ಡನ್​ ಟೆಂಪಲ್​​ನಲ್ಲಿ ಪ್ರವೇಶ ನಿರಾಕರಿಸಲಾಗಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ದೇವಸ್ಥಾನದ ಕಾವಲುಗಾರ ಹಾಗೂ ಮಹಿಳೆ ನಡುವಿನ ಮಾತಿನ ಚಕಮಕಿಯನ್ನು ನೋಡಬಹುದು. ಘಟನೆಗೆ ಸಾಕಷ್ಟು ಖಂಡನೆ ವ್ಯಕ್ತವಾಗಿದೆ.
ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆ ಮುಖದ ಮೇಲೆ ತ್ರಿವರ್ಣ ಧ್ವಜವನ್ನು ಪೇಂಟಿಂಗ್​ ಮಾಡಿಸಿರುವುದು ಕಂಡು ಬರುತ್ತದೆ. ಮಹಿಳೆ ಗೋಲ್ಡನ್​ ಟೆಂಪಲ್​ ಪ್ರವೇಶಿಸುತ್ತಿರುವುದು ಕಂಡು ಬರುತ್ತದೆ. ಈ ವೇಳೆ ಅಲ್ಲಿದ್ದ ಕಾವಲುಗಾರ ಒಬ್ಬ ಮಹಿಳೆಗೆ ಪ್ರವೇಶ ನಿರಾಕರಿಸುತ್ತಾನೆ.
ಪ್ರವೇಶ ನಿರಾಕರಿಸಿದರ ಕುರಿತು ಪ್ರಶ್ನಿಸಿದ ಮಹಿಳೆಗೆ ಅಲ್ಲಿದ್ದ ಕಾವಲುಗಾರ ಇದು ಪಂಜಾಬ್​ ಎಂದು ಹೇಳುತ್ತಾನೆ. ಅದಕ್ಕೆ ಪ್ರತಿಯಾಗಿ ಮಹಿಳೆ ಇದು ಭಾರತ ಅಲ್ಲವೇ ಎಂದು ಪ್ರಶ್ನಿಸುತ್ತಿರುವುದು ಕಂಡು ಬರುತ್ತದೆ.
ಈ ವೇಳೆ ಮಹಿಳೆ ಹಾಗೂ ಕಾವಲುಗಾರನ ನಡುವೆ ಮಾತಿಗೆ ಮಾತು ಬೆಳೆದು ದೇಗುಲದ ಒಳಗೆ ಯಾಕೆ ಪ್ರವೇಶವನ್ನು ನಿರಾಕರಿಸಲಾಯಿತು ಎಂದು ಕೇಳಿದ್ದಕ್ಕೆ ಆತ ಮುಖದ ಮೇಲೆ ಪೇಂಟಿಂಗ್​ ಮಾಡಿಸಿದ್ದ ತ್ರಿವರ್ಣ ಧ್ವಜವನ್ನು ತೋರಿಸಿದ್ದಾನೆ.
Woman denied entry to Golden Temple because she had a India 🇮🇳 flag painted on her face!The man who denied her entry into Golden Temple said this is Punjab, not India@AmitShah@PMOIndia@narendramodi@GoldenTempleInd@ArvindKejriwalIs bande ko Pakistan ke Punjab bhejopic.twitter.com/nSgbOxVkoN
ಇದನ್ನೂ ಓದಿ:ವಾಟ್ಸ್​​ಆ್ಯಪ್​ ಸರ್ವರ್​​ ಡೌನ್​; ವಿಡಿಯೋ ಡೌನ್​ಲೋಡ್​ ಮಾಡಲಾಗದೆ ಪರದಾಡಿದ ನೆಟ್ಟಿಗರು
ಈ ವೇಳೆ ಮಾತಿಗೆ ಮಾತು ಬೆಳೆದಾಗ ಕಾವಲುಗಾರ ಇದು ಪಂಜಾಬ್​ ಭಾರತ ಅಲ್ಲ ಎಂದು ಹೇಳುತ್ತಾನೆ. ಇದಕ್ಕೆ ಆಕ್ಷೇಪಿಸಿದ ಮಹಿಳೆ ಗೋಲ್ಡನ್ ಟೆಂಪಲ್​ ಭಾರತದಲ್ಲಿ ಇರಲಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸುತ್ತಿರುವುದು ಕಂಡು ಬರುತ್ತದೆ. ಈ ವೇಳೆ ಮಹಿಳೆ ಹಾಗೂ ಅವರ ಜೊತೆಗಿದ್ದವರು ಪೋನಿನಲ್ಲಿ ವಿಡಿಯೋ ಸೆರೆ ಹಿಡಿಯದಂತೆ ಕಾವಲುಗಾರ ತಡೆಯವುದು ಕಂಡು ಬರುತ್ತದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಿರೋಮಣಿ ಗುರುದ್ವಾರ ಪರ್ಬಂಧಕ್​ ಸಮಿತಿ ಪ್ರಧಾನ ಕಾರ್ಯದರ್ಶಿ ಗುರುಚರಣ್​ ಸಿಂಗ್​ ಗ್ರೇವಾಲ್ ಕಾಲವುಗಾರನ ದುರ್ವತನೆಗೆ ಕ್ಷಮೆಯಾಚಿಸಿದ್ಧಾರೆ ಮತ್ತು ಮಹಿಳೆಯ ಮುಖದ ಮೇಲೆ ಪೇಂಟಿಂಗ್ ಮಾಡಿಸಿದ್ದು ತ್ರಿವರ್ಣ ಧ್ವಜ ಅಲ್ಲ ಎಂದು ಆರೋಪಿಸಿದ್ದಾರೆ.
ಇದು ಸಿಖ್ಖರ ಪವಿತ್ರ ಯಾತ್ರ ಸ್ಥಳವಾಗಿದ್ದು ಅದಕ್ಕೆ ಅದರದ್ದೆ ಆದ ಸ್ಥಾನಮಾನ ಇದೆ. ಮಹಿಳೆ ಮುಖದ ಮೇಲೆ ಇದಿದ್ದು ರಾಷ್ಟ್ರ ಧ್ವಜ ಅಲ್ಲ ಬದಲಾಗಿ ಅದು ಒಂದು ಪಕ್ಷದ ಧ್ವಜ . ಅದರಲ್ಲಿ ಅಶೋಕ ಚಕ್ರವನ್ನು ಬಿಡಿಸಿರಲಿಲ್ಲ ಎಂದು ಹೇಳಿದ್ಧಾರೆ.
ಭಾರತದ ಸ್ವಾತಂತ್ರ್ಯದಲ್ಲಿ ಸಿಖ್ಖರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಪ್ರತಿ ಬಾರಿಯೂ ನಮ್ಮನ್ನೇ ಗುರಿಯಾಗಿಸಲಾಗುತ್ತಿದೆ ಮತ್ತು ಜನರು ಘಟನೆಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ಧಾರೆ ಎಂದು ಬೇಸರಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 5 =
Remember me
