ಬರೇಲಿ:ಪ್ರಿಯತಮೆಯೊಬ್ಬಳು ಫೋನ್​ನಲ್ಲಿ ಬ್ಲಾಕ್​ ಮಾಡಿದ್ದಕ್ಕೆ ಪಾಗಲ್​ ಪ್ರೇಮಿಯೊಬ್ಬ ನೂರಾರು ಕಿ.ಮೀ. ಬಂದು ಸಾವಿಗೆ ಯತ್ನಿಸಿದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.9ನೇ ತರಗತಿಯಿಂದ ಪರಸ್ಪರ ಪ್ರೀತಿಸುತ್ತಿದ್ದ ಯೋಗೇಶ್​ ಹಾಗೂ ಆತನ ಪ್ರಿಯತಮೆ ಕಾನ್ಪುರದ ನಿವಾಸಿಗಳಾಗಿದ್ದು, ಯೋಗೇಶ್​ 10ನೇ ತರಗತಿ ನಂತರ ಶಾಲೆಯನ್ನು ತೊರೆದು ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ. ಏತನ್ಮಧ್ಯೆ, ಅವನ ಗೆಳತಿ ಬರೇಲಿಯ ಫರೀದ್‌ಪುರದ ಫಾರ್ಮಸಿ ಕಾಲೇಜಿಗೆ ಪ್ರವೇಶ ಪಡೆದಿದ್ದಳು.ಇದನ್ನೂ ಓದಿ:ಸೋನಾ ಮಸೂರಿ ತಿಂದು ಬಡವರ ಅಕ್ಕಿ ಬಗ್ಗೆ ಮಾತನಾಡುತ್ತಾರೆ: ಸಚಿವ ರಾಮಲಿಂಗಾ ರೆಡ್ಡಿಎಂದಿನಂತೆ ಫೋನ್​ನಲ್ಲಿ ಮಾತನಾಡುತ್ತಿದ್ದ ವೇಳೆ, ಯೋಗೇಶ್​ ಯುವತಿಗೆ ಯಾವುದೋ ವಿಷಯದ ಸಲುವಾಗಿ ಬೈದಿದ್ದಾನೆ. ಇದರಿಂದ ಅಸಮಾಧಾನಗೊಂಡ ಯುವತಿಯು ತನ್ನ ಫೋನ್‌ನಲ್ಲಿ ಆತನ ಕರೆಗಳನ್ನು ನಿರ್ಬಂಧಿಸಿದ್ದಳು. ಇತ್ತ, ಯುವಕ ಹಲವಾರು ಬಾರಿ ಕರೆ ಮಾಡಲು ಯತ್ನಿಸಿ ಕೊನೆಗೆ ಕಾನ್ಪುರದಿಂದ ಬರೇಲಿಯ ಫರೀದ್‌ಪುರದ ಕಾಲೇಜಿಗೆ ಹೋಗಿದ್ದಾನೆ.ಕಾಲೇಜಿಗೆ ತಲುಪಿದ ಬಳಿಕ ಪೆಟ್ರೋಲ್ ಬಾಟಲಿ ಹಿಡಿದುಕೊಂಡು ಕಾಲೇಜು ಕಟ್ಟಡದ 4ನೇ ಮಹಡಿಗೆ ಹತ್ತಿದಾಗ ಹೈವೋಲ್ಟೇಜ್ ನಾಟಕ ನಡೆದಿದೆ. ನಂತರ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೆಳತಿಗೆ ಬೆದರಿಕೆ ಹಾಕಿದ್ದಾನೆ. ಕೂಡಲೇ ಆತನನ್ನು ಚಾಣಾಕ್ಷತನದಿಂದ ಕಾಲೇಜು ಸಿಬ್ಬಂದಿ ಮತ್ತು ಸಹ ವಿದ್ಯಾರ್ಥಿಗಳು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
