ಥಾಣೆ:ಈ ಹುಡುಗಿ, ಆಕೆಯ ಬಾಯ್​ಫ್ರೆಂಡ್​ನ ಹುಟ್ಟುಹಬ್ಬವನ್ನು ಆಚರಿಸಲು ತನ್ನ ಮನೆಯಿಂದಲೇ ಚಿನ್ನವನ್ನು ಕದ್ದಿದ್ದು ಈಗ ಸಿಕ್ಕಿ ಬಿದ್ದಿದ್ದಾಳೆ. ಈಕೆ ಹಾಗೂ ಈಕೆಯ ಬಾಯ್​ಫ್ರೆಂಡ್​ನ ಹುಟ್ಟುಹಬ್ಬ ಒಂದೇ ದಿನ ಇದ್ದ ಕಾರಣ ಅದನ್ನು ಸ್ಪೆಷಲ್​ ಆಗಿ ಆಚರಿಸಲು ಹೋಗಿ ಈಗ ಕಂಬಿ ಎಣಿಸುತ್ತಿದ್ದಾಳೆ.
ಅಷ್ಟೇ ಅಲ್ಲದೇ, ಈ ಖತರ್ನಾಕ್​ ಹುಡುಗಿ, ಬಾಯ್​ಫ್ರೆಂಡ್​ ಹಾಗೂ ತನ್ನನ್ನು ಪೊಲೀಸರಿಂದ ಕಾಪಾಡಿಕೊಳ್ಳಲು ಆಕೆಯ ಇನ್ನೊಬ್ಬ ಸ್ನೇಹಿತನನ್ನು ಸಿಕ್ಕಿಸಲು ಪ್ರಯತ್ನಿಸಿದ್ದಾಳೆ. ಆ ದುರ್ದೈವಿ ಸ್ನೇಹಿತ ಅಪ್ರಾಪ್ತನಾಗಿದ್ದು ಆತನ ಮೇಲೆ ಬ್ಲಾಕ್​ಮೇಲ್​ನ ಆರೋಪವನ್ನು ಈಕೆ ಹೊರಿಸಿದ್ದಳು. ಈ ಘಟನೆ ಬಗ್ಗೆ ಥಾಣೆಯ ಅಸಿಸ್ಟೆಂಟ್​ ಕಮಿಷನರ್​, ನಿಲೇಷ್​ ಸೋನಾವಣೆ ಮಾಹಿತಿ ನೀಡಿದ್ದಾರೆ.
ಜನವರಿ 7ರಂದು, ಕಪೂರ್​ಬಾವ್ಡಿ ಪೊಲೀಸ್​ ಸ್ಟೇಷನ್​ಗೆ ತೆರಳಿ, ‘ನನ್ನ ಬಾಯ್​ಫ್ರೆಂಡ್​ ನನ್ನ ಅಶ್ಲೀಲ ಚಿತ್ರಗಳನ್ನು ಚಿತ್ರಿಸಿ ಬ್ಲಾಕ್​ಮೇಲ್​ ಮಾಡುತ್ತಿದ್ದಾನೆ. ಇದರಿಂದಾಗಿ ನಾನು ಮನೆಯಿಂದ ಚಿನ್ನವನ್ನು ಕದ್ದು ಆತನಿಗೆ ನೀಡಬೇಕಾಯಿತು’ ಎಂದು ದೂರು ದಾಖಲಿಸಿದ್ದಾಳೆ. ಈ ಹುಡುಗ ಮೊದಲಿಗೆ ಆ ಚಿನ್ನಾಭರಣವನ್ನು ಮಾರಾಟ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಆದರೆ ತನಿಖೆ ನಡೆಸಿದಾಗ ಆ ರೀತಿಯಾಗಿ ಎಲ್ಲೂ ಚಿನ್ನಾಭರಣದ ಮಾರಾಟ ನಡೆದಿಲ್ಲ ಎಂದು ತಿಳಿದುಬಂದಿದೆ. ಹುಡುಗಿ ಹೇಳಿದ್ದ ಚಿನ್ನದ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ದೂರಿಗೆ ಹೋಲಿಕೆ ಆಗುವ ಯಾವ ವಿಡಿಯೋ ಕೂಡ ಕಂಡುಬಂದಿಲ್ಲ.
ಕಡೆಗೆ ಪೊಲೀಸರು, ಈ ಹುಡುಗಿ ಬಚಾವಾಗಲು ಆಕೆಯ ಇನ್ನೊಬ್ಬ ಸ್ನೇಹಿತನಿಗೆ ಚಿನ್ನಾಭರಣ ನೀಡಿ ತನ್ನನ್ನು ಹಾಗೂ ತನ್ನ ಬಾಯ್​ಫ್ರೆಂಡ್​ ಅನ್ನು ಕಾಪಾಡಲು ಬ್ಲಾಕ್​ಮೇಲ್​ ಕಥೆಯನ್ನು ಹೆಣೆದಿದ್ದಳು ಎಂದು ಕಂಡುಕೊಂಡರು.
ಈಕೆಯ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಬಾಯ್​ಫ್ರೆಂಡ್​ಗೆ ಕೇವಲ 18 ವರ್ಷ ಪ್ರಾಯ. ಈತನ ಒಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಚಿನ್ನಾಭರಣವನ್ನು ಇಬ್ಬರೂ ಸೇರಿ ಮನ್​ಪಡಾ ಪ್ರದೇಶದಲ್ಲಿ ಒಬ್ಬ ವ್ಯಾಪಾರಿಗೆ 53,000 ರೂ.ಗೆ ಮಾರಾಟ ಮಾಡಿದ್ದರು.
ಕಡೆಗೆ ಪೂರ್ತಿ ಕಥೆ ತಿಳಿದುಕೊಂಡ ಪೊಲೀಸರು, ಹುಡುಗಿಯನ್ನು,ಆಕೆಯ ಬಾಯ್​ಫ್ರೆಂಡ್​ ಹಾಗೂ ಇವರಿಂದ ಕದ್ದ ಮಾಲು ಎಂದು ತಿಳಿದಿದ್ದರೂ ಚಿನ್ನವನ್ನು ಕದ್ದ ವ್ಯಾಪಾರಿಯನ್ನು ಬಂಧಿಸಿದ್ದಾರೆ. ಈ ಘಟನೆದ್ಯಕ್ಕೆ ಐಪಿಸಿ 380ನೇ ಸೆಕ್ಷನ್​, 411ನೇ ಸೆಕ್ಷನ್​ ಪ್ರಕಾರ ಯುವ ಜೋಡಿ ಹಾಗೂ ವ್ಯಾಪಾರಿಯ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + nineteen =
Remember me
