ವಿಜಯವಾಡ:ಪ್ರೀತಿಸಿ ಕೈಕೊಟ್ಟ ಬಳಿಕ ಮತ್ತೊಬ್ಬಳ ಜತೆ ಮದುವೆಯಾಗುತ್ತಿರುವ ವಿಚಾರ ತಿಳಿದು ನ್ಯಾಯ ಕೇಳಲು ಪ್ರಿಯಕರನ ಮನೆಗೆ ಯುವತಿ ಆಗಮಿಸುತ್ತಿದ್ದಂತೆ ಪ್ರಿಯಕರ ತನ್ನ ಪತ್ನಿಯ ಜತೆ ಮೊದಲ ರಾತ್ರಿಯನ್ನು ಬಿಟ್ಟು ಎಸ್ಕೇಪ್​ ಆಗಿರುವ ಘಟನೆ ಆಂಧ್ರ ಪ್ರದೇಶದ ಗಂಗಾವರಂ ವಲಯದ ಕುರಪಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಪೆದ್ದಪಂಜನಿ ವಲಯದ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್​ ಎಂಬಾತನೊಂದಿಗೆ ಪರಿಚಯವಾಗಿ ಅದು ಪ್ರೇಮಕ್ಕೂ ತಿರುಗಿತ್ತು. ಕಳೆದ ಆರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಪ್ರೀತಿಯ ಬಗ್ಗೆ ಇಬ್ಬರ ಮನೆಯವರಿಗೂ ತಿಳಿದಿತ್ತು. ಮದುವೆ ಮಾಡಿಕೊಳ್ಳಲು ಅನುಮತಿ ಸಹ ಕೇಳಿದ್ದರು.
ಇದನ್ನೂ ಓದಿ:ಮಗಳ ಮದುವೆ ನಿಶ್ಚಿತಾರ್ಥದ ಖುಷಿಯಲ್ಲಿದ್ದ ಡಿಕೆಶಿಗೆ ಮತ್ತೊಂದು ಶಾಕ್​!
ಹೀಗಿರುವಾಗ ಗಣೇಶ್ ನನಗೆ ಕೋವಿಡ್​ ರೋಗ ಲಕ್ಷಣಗಳು ಇವೆ ಎಂದು ಹೇಳಿ​ ಮೂರು ತಿಂಗಳ ಹಿಂದೆ ಗಂಗಾವರಂ ವಲಯದ ಕುರಪಲ್ಲೆಯಲ್ಲಿರುವ ಮನೆಗೆ ಮರಳಿದ್ದ. ಬಳಿಕ ಏನು ನಡೆಯುತ್ತಿದೆ ಎಂಬ ವಿಚಾರ ಯುವತಿಗೆ ತಿಳಿದಿರಲಿಲ್ಲ. ಇದರ ನಡುವೆ ಗಣೇಶ್​ ತನ್ನ ಮಾವನ ಮಗಳನ್ನು ಮದುವೆಯಾಗಲು ಮುಂದಾಗಿ, ಗುರುವಾರ ಬೆಳಗ್ಗೆ ಮದುವೆಯು ನಿಶ್ಚಯವಾಗಿತ್ತು.
ಮದುವೆ ನಡೆಯುವ ಮುನ್ನ ಈ ವಿಚಾರ ಗಣೇಶ್​ ಸ್ನೇಹಿತರಿಂದ ಯುವತಿಗೆ ತಿಳಿದಿತ್ತು. ಬಳಿಕ ಹೇಗಾದರೂ ಮದುವೆ ತಡೆದು ನ್ಯಾಯ ಕೇಳಬೇಕೆಂದು ಯುವತಿ ಬೆಂಗಳೂರಿನಿಂದ ಹೊರಟ್ಟಿದ್ದಳು. ಆದರೆ, ಅಷ್ಟರಲ್ಲಾಗಲೇ ಮದುವೆ ಮುಗಿದು ಹೋಗಿತ್ತು. ಬಳಿಕ ಯುವತಿ ಗಂಗಾವರಂ ಮತ್ತು ಪೆದ್ದಪಂಜನಿಯಲ್ಲಿ ದೂರು ದಾಖಲಿಸಿದ್ದಳು.
ಬಳಿಕ ಠಾಣೆಯಲ್ಲಿ ನಿಲ್ಲದೆ ಪ್ರಿಯಕರ ಮನೆಯಲ್ಲಿ ಆತನ ಮೊದಲ ರಾತ್ರಿಗೆ ಸಿದ್ಧತೆ ನಡೆಯುತ್ತಿದೆ ಎಂಬ ವಿಚಾರ ತಿಳಿದು ಅಲ್ಲಿಗೆ ತೆರಳಿದಳು. ಮನೆಗೆ ತೆರಳುತ್ತಿದ್ದಂತೆ ಪ್ರಿಯಕರನ ಸಂಬಂಧಿ ಆಕೆಯನ್ನು ನಿಂದಿಸಲು ಶುರು ಮಾಡಿದರು. ಆದರೂ ಹೆದರದ ಯುವತಿ ಮತ್ತೆ ಪೊಲೀಸರ ಬಳಿ ಹೋಗಿ ನಡೆದಿದ್ದನ್ನು ಹೇಳಿ, ಅವರ ನೆರವಿನೊಂದಿಗೆ ಪ್ರಿಯಕರನ ಮನೆಗೆ ಬಂದಳು. ಆದರೆ, ಆರೋಪಿ ಗಣೇಶ್​ನನ್ನು ಪೊಲೀಸರು ಬಂಧಿಸುವಲ್ಲಿ ಗಣೇಶ್​ ಮತ್ತು ಆತನ ಪತ್ನಿ ಜತೆ ಮೊದಲ ರಾತ್ರಿಯನ್ನು ಬಿಟ್ಟು ಪರಾರಿಯಾಗಿದ್ದರು.
ಇದನ್ನೂ ಓದಿ:ನೆಪ ಹೇಳಿ ಮನೆಗೆ ನುಗ್ಗಿ ಹಾಡಹಗಲೇ ದಂತ ವೈದ್ಯೆಯ ಬರ್ಬರ ಹತ್ಯೆ: ಬೆಚ್ಚಿಬಿದ್ದ ರಾಜ್ಯದ ಜನತೆ
ಇದೀಗ ತನಗೆ ಮೋಸ ಮಾಡಿದ ಆರೋಪಿಯನ್ನು ಬಂಧಿಸುವಂತೆ ಸಂತ್ರಸ್ತೆ ಯುವತಿ ಪಟ್ಟು ಹಿಡಿದಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಣೇಶ್​ ಪತ್ತೆಗಾಗಿ ಬಲೆ ಬೀಸಿದ್ದರೆ, ಆತ ತನ್ನ ಪತ್ನಿಯೊಂದಿಗೆ ಎಸ್ಕೇಪ್​ ಆಗಿರುವುದು ಪ್ರಕರಣ ಮತ್ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದೇ ಇದೀಗ ಕುತೂಹಲವಾಗಿದೆ.(ಏಜೆನ್ಸೀಸ್​)
ಬಿಕಿನಿಯಲ್ಲಿ ಮಗಳು, ಫೋಟೋ ಕ್ಲಿಕ್ಕಿಸಿದ ಅಪ್ಪ; ವಿಟಮಿನ್-ಡಿಗಾಗಿ ಮೈಯೊಡ್ಡಿದ ನಟಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
