ಬೆಂಗಳೂರು:ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಶನ್‌ ಆಗಿದೆ. ಆದ್ರೆ ಇಲ್ಲೊಬ್ಬ ಪ್ರೇಯಸಿಯ ಹೆಸರನ್ನು ಒಳ ತುಟಿಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.
ಜನರು ಕೈ, ಕಾಲು ಮತ್ತು ದೇಹದ ಇತರ ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಪ್ರೇಮಿಗಳಂತೂ ತಮ್ಮ ಪ್ರಿಯಕರ ಅಥವಾ ಪ್ರಿಯತಮನ ಹೆಸರನ್ನು ಹೆಚ್ಚಾಗಿ ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ತನ್ನ ಪ್ರೇಯಸಿಯ ಹೆಸರನ್ನು ತುಟಿಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಒಳತುಟಿಯ ಮೇಲೆ ತನ್ನ ಪ್ರೇಯಸಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು ಟ್ಯಾಟೂ ಕಲಾವಿದ ಅಭಿಶೇಕ್ ಸಪ್ಕಲ್ (@tatto_abhishek_sapkal_4949_) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಲವ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

A post shared by Abhishek Sapkal (@tattoo_abhishek_sapkal_4949)

ವೈರಲ್ ವಿಡಿಯೋದಲ್ಲಿ ಮೊದಲು ಟ್ಯಾಟೂ ಕಲಾವಿದ ಯುವಕ ತುಟಿಯ ಒಳಭಾಗದಲ್ಲಿ ಅಮೃತ ಅನ್ನೋ ಹಸರನ್ನು ಬರೆದು, ನಂತರ ಆ ಹೆಸರಿನ ಮೇಲೆ ಹಚ್ಚೆಯನ್ನು ಬಿಡಿಸುತ್ತಿರುವಂತಹ ದೃಶ್ಯವನ್ನು ಕಾಣಬಬಹುದು. ಅನೇಕರು ಈತನ ಹುಚ್ಚುತನವನ್ನು ಕಂಡು ನಕ್ಕಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
