ಸೂರತ್ :ಪ್ರೀತಿ ಕುರುಡು ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ತಮ್ಮ ಪ್ರೀತಿ ಸಾಬೀತುಪಡಿಸಲು ಹುಚ್ಚಾಟ ಮಾಡಿ ಬಿಡುತ್ತಾರೆ. ಆದರೆ, 24ರ ಹರೆಯದ ಈ ಯುವತಿಗೆ ಇದೇ ಪ್ರೀತಿ ಅವಳ ಭವಿಷ್ಯವನ್ನು ಅಂಧಕಾರಕ್ಕೆ ದೂಡುವ ಸಾಧ್ಯತೆ ಎದ್ದು ಕಾಣುತ್ತಿದೆ. ಅಸಲಿಗೆ ಅವಳು ಮಾಡಿದ್ದು ಏನೆಂದರೆ, ಉತ್ತರಾಖಂಡದಲ್ಲಿ ಮಜಾ ಮಾಡುತ್ತಿದ್ದ ತನ್ನ ಪ್ರಿಯತಮನ ಬದಲಾಗಿ ಬಿ.ಕಾಂ ಪರೀಕ್ಷೆ ಬರೆದದ್ದು!
ಈ ಯುವತಿ ಇತ್ತೀಚೆಗೆ ನಿಜ ಅಭ್ಯರ್ಥಿಯ ಬದಲಾಗಿ ಪರೀಕ್ಷೆಯ ಹಾಜರಾಗಿ ಸಿಕ್ಕಿ ಬಿದ್ದಿದ್ದಳು. ಈ ವರ್ಷ ನಡೆದ ಮೂರನೇ ವರ್ಷದ ಬಿಕಾಂ ಪರೀಕ್ಷೆಯಲ್ಲಿ ಮಹಿಳೆ ಕಾಲೇಜು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ. ನಂತರ ಮೌಲ್ಯಮಾಪನ ಮತ್ತು ಸಲಹಾ (ಎಫ್‌ಎಸಿಟಿ) ಸಮಿತಿಯು ಶಿಕ್ಷೆಗೆ ಶಿಫಾರಸು ಮಾಡಿದೆ.
ಈ ಯುವತಿಯನ್ನು ಪ್ರಶ್ನಿಸಿದಾಗ, ಪರೀಕ್ಷೆಗೆ ಕೂರಬೇಕಾಗಿದ್ದ ಅಭ್ಯರ್ಥಿ ಹಾಗೂ ಈಕೆ ಶಾಲೆಯಿಂದಲೂ ಸ್ನೇಹಿತರಾಗಿರುವುದು ತಿಳಿದು ಬಂದಿದೆ. ಯುವತಿಯ ಕೃತ್ಯದ ಬಗ್ಗೆ ಆಕೆಯ ಪೋಷಕರಿಗೆ ತಿಳಿದಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಪ್ಯೂಟರ್ ಸಹಾಯದಿಂದ ಹಾಲ್​ಟಿಕೆಟ್ ನಲ್ಲಿ ಬದಲಾವಣೆ ಮಾಡಿ ಪರೀಕ್ಷಾ ಹಾಲ್​ಗೆ ಬರುವಂತೆ ಪ್ರಿಂಟ್ ಔಟ್ ತೆಗೆದುಕೊಂಡಿರುವುದಾಗಿ ಮಹಿಳೆ ಸಮಿತಿಗೆ ತಿಳಿಸಿದ್ದಾರೆ. ‘ಪರೀಕ್ಷಾ ಮೇಲ್ವಿಚಾರಕರು ಪ್ರತಿದಿನ ಬದಲಾಗುತ್ತಾರೆ. ಅವರು ಎಲ್ಲಾ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ತಿಳಿದಿರುವುದಿಲ್ಲ. ಆದರೆ, ಅವರು ಹಾಲ್ ಟಿಕೆಟ್ ಪರಿಶೀಲಿಸುತ್ತಾರೆ. ಈ ಸಂದರ್ಭದಲ್ಲಿ, ಅದೇ ಹಾಲ್‌ನಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಆ ದಿನ ಹುಡುಗಿ ಕುಳಿತಿದ್ದ ಸೀಟ್ ನಂಬರ್‌ನಲ್ಲಿ ಒಬ್ಬ ಹುಡುಗ ಕುಳಿತುಕೊಳ್ಳುತ್ತಿದ್ದ ಎಂದು ಮೇಲ್ವಿಚಾರಕರಿಗೆ ಹೇಳಿದ್ದ’ ಎಂದು ಕಾಲೇಜಿನ ಅಧ್ಯಾಪಕರೊಬ್ಬರು ಹೇಳಿದರು. ಆಗ ಹುಡುಗಿ ಹಾಜರಾಗಿದ್ದ ಹುಡುಗಿ ಸಿಕ್ಕಿಬಿದ್ದಿದ್ದಳು.
ಯುವತಿ ಸಿಕ್ಕಿಬಿದ್ದ ನಂತರ, ಸಮಿತಿ, ಅಸಲಿ ಅಭ್ಯರ್ಥಿಯನ್ನು ಕರೆಸಲು ಹೇಳಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಯುವತಿ ‘ಆತ ಉತ್ತರಾಖಂಡಕ್ಕೆ ಹೋಗಿದ್ದಾನೆ’ ಎಂದು ತಿಳಿಸಿದ್ದಾಳೆ. ವರದಿಗಳ ಪ್ರಕಾರ, ಈ ಹುಡುಗ, ಮೂರನೇ ವರ್ಷದ ಬಿ.ಕಾಂ ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗಿದ್ದನು. ನಂತರ ಈಕೆ ಅವನಿಗಾಗಿ ಡಮ್ಮಿ ಅಭ್ಯರ್ಥಿಯಾಗಿ ಪರೀಕ್ಷೆಯಲ್ಲಿ ಹಾಜರಾಗಿದ್ದಳು.
ಈ ಮಧ್ಯೆ, ವಿಎನ್‌ಎಸ್‌ಜಿಯು ಆ ಯುವತಿಯ ಬಿಕಾಂ ಪದವಿಯನ್ನು ರದ್ದುಗೊಳಿಸುವಂತೆ ವಿಶ್ವವಿದ್ಯಾನಿಲಯದ ಫ್ಯಾಕ್ಟ್ ಸಮಿತಿ ಮಾಡಿದ ಶಿಫಾರಸನ್ನು ಸ್ವೀಕರಿಸಲು ನಿರ್ಧರಿಸಿದರೆ, ಆಕೆ ತನ್ನ ಸರ್ಕಾರಿ ಉದ್ಯೋಗವನ್ನೂ ಕಳೆದುಕೊಳ್ಳಬಹುದು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + fifteen =
Remember me
