ಹೈದರಾಬಾದ್​:ಆತ್ಮರಕ್ಷಣೆಗಾಗಿ ಹುಡುಗಿಯರು ಯಾರನ್ನು ಬೇಕಾದರೂ ಕೊಲ್ಲಬಹುದು ಎಂದು ಹೈದರಾಬಾದ್​ನ ಮೆಟ್ರೋಪಾಲಿಟನ್ ಕಾನೂನು ಸೇವೆಗಳ ಪ್ರಾಧಿಕಾರ (ಎಂಎಲ್​​​ಎಸ್​ಎ)ದ ಕಾರ್ಯದರ್ಶಿ ಎಂ. ರಾಧಾಕೃಷ್ಣ ಚೌಹಾನ್​ ಹೇಳಿದ್ದಾರೆ.
ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಹಿನ್ನೆಲೆಯಲ್ಲಿ ಗೊಲ್ಕೊಂಡದ ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ಎಂಎಲ್​ಎಸ್​ಎ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ರಾಧಾಕೃಷ್ಣ ಅವರು ಮಾತನಾಡಿದರು. ಹೊರಗಡೆ ಹೋಗುವಾಗ ಜತೆಯಲ್ಲಿ ಪೆಪ್ಪರ್​ ಸ್ಪ್ರೇ ತೆಗೆದುಕೊಂಡು ಹೋಗಲು ಹೆಣ್ಣು ಮಕ್ಕಳಿಗೆ ಸಲಹೆ ನೀಡಿ, ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಆತ್ಮರಕ್ಷಣೆಗಾಗಿ ಕೊಲ್ಲುವುದು ಅಪರಾಧವಲ್ಲ ಎಂದು ತಿಳಿಸಿದರು.
ಇದನ್ನೂ ಓದಿರಿ:ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!
ಹುಡುಗಿಯರು ತಮ್ಮ ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಆತ್ಮರಕ್ಷಣೆಗಾಗಿ ಬೇರೊಬ್ಬರನ್ನು ಕೊಲ್ಲಲು ಕಾನೂನು ಅನುಮತಿ ನೀಡಿದೆ. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ರಕ್ಷಣೆಯನ್ನು ನೀವೇ ಮಾಡಿಕೊಳ್ಳಿ ಎಂದು ಧೈರ್ಯ ತುಂಬಿದ ರಾಧಾಕೃಷ್ಣ, ಮಹಿಳೆಯರಿಗಾಗಿ ಇರುವ ಅನೇಕ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು.
ವಿವಿಧ ಕ್ಷೇತ್ರದ ಶ್ರೇಷ್ಠ ವ್ಯಕ್ತಿಗಳನ್ನು ಅನುಸರಿಸಿ, ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗಿಂತ ಕಡಿಮೆಯೇನಲ್ಲ ಎಂದು ಹೇಳಿದರು.(ಏಜೆನ್ಸೀಸ್​)
ಹಣೆ ಮೇಲೆ ಒಂದೇ ಕಣ್ಣು ಎರಡು ಕಣ್ಣಿನ ಪಾಪೆ: ವಿಚಿತ್ರ ಮೇಕೆ ಮರಿ ದೇವರ ಅವತಾರವಂತೆ!

ಪ್ರೀತಿಸಿದ ಯುವತಿ ಗಿಡಕ್ಕೆ ನೀರು ಹಾಕುತ್ತಿದ್ದರೆ, ಬಿಲ್ಡಿಂಗ್ ಹಾರಿ ಬಂದ ಯುವಕ ಹೀಗಾ ಮಾಡೋದು?!

ಶವಸಂಸ್ಕಾರ ಮಾಡಿ ಬಂದ 10ನೇ ದಿನ ಮನೆಯ ಖುರ್ಚಿ ಮೇಲೆ ಪ್ರತ್ಯಕ್ಷಳಾದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 12 =
Remember me
