ಇಡುಕ್ಕಿ:ಕೇರಳದ ಪಲ್ಲಿವಾಸಲ್​ ಪವರ್​ ಹೌಸ್​ ಬಳಿ ದ್ವಿತೀಯ ಪಿಯು ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ ಆರೋಪಿಯ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಪತ್ತೆಯಾಗಿದೆ.
ಮೃತನನ್ನು ಅರುಣ್​ ಅಲಿಯಾಸ್​ ಅನು ಎಂದು ಗುರುತಿಸಲಾಗಿದೆ. ಈತ ಕೊಲೆಯಾದ ಯುವತಿಯ ಸಂಬಂಧಿಯು ಹೌದು. ಮೃತದೇಹವು ಯುವತಿ ಕೊಲೆ ನಡೆದ ಸ್ಥಳದಿಂದ ಒಂದು ಕಿ.ಮೀ ಅಂತರದಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿರಿ:ಫ್ರೆಂಡ್​​ ಮುಂದೆಯೇ ಗ್ಯಾಂಗ್​ರೇಪ್​: ಘಟನೆ ನಡೆದ 22 ವರ್ಷದ ಬಳಿಕ ಪ್ರಮುಖ ಆರೋಪಿ ಸಿಕ್ಕಿಬಿದ್ದಿದ್ಹೇಗೆ?
ಯುವತಿ ಕೊಲೆಯಾದ ದಿನದಿಂದ ನಾಲ್ಕು ದಿನಗಳವರೆಗೆ ಆರೋಪಿ ಅರುಣ್​ಗಾಗಿ ಪೊಲೀಸರು ಸುತ್ತಾಮುತ್ತಾ ಸಾಕಷ್ಟು ಹುಡುಕಾಡಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಆದರೆ, ಮಂಗಳವಾರ ಬೆಳಗ್ಗೆ ಸ್ಥಳೀಯರು ಅರುಣ್​ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಅರುಣ್​ಗೆ ಸಂಬಂಧಿಸಿದ ಕೆಲವು ಪತ್ರಗಳನ್ನು ಅವರ ಮನೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಯುವತಿ ಮತ್ತು ಅರುಣ್​ ಇಬ್ಬರು ಸಂಬಂಧದಲ್ಲಿದ್ದರು ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಯುವತಿ ಕೊಲೆಯಾದ ಸ್ಥಳದಲ್ಲಿ ಅರುಣ್​ ಮೊಬೈಲ್​ ಪತ್ತೆಯಾಗಿತ್ತು. ಪ್ರಾಥಮಿಕ ವರದಿಯ ಪ್ರಕಾರ ಯುವತಿಯನ್ನು ಅರುಣ್​ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆನ್ನಲಾಗಿದೆ.
ಕೊಲೆಯಾದ ಯುವತಿಯನ್ನು ರೇಷ್ಮಾ ಎಂದು ಗುರುತಿಸಲಾಗಿದೆ. ಈಕೆ ದ್ವಿತೀಯ ಪಿಯು ವಿದ್ಯಾರ್ಥಿನಿ. ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದಳು. ಬಳಿಕ ಪಾಲಕರು ವೆಲ್ಲಥೋವಲ್​ ಪೊಲೀಸ್​ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕಾಲೇಜಿಗೆ ಹೋದವಳು ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿರಿ:ಡಿಮಾರ್ಟ್​ನಿಂದ ಮನೆಗೆ ಮರಳಿದ ಮಹಿಳೆಗೆ ಶಾಕ್​: ಪತಿಯ ಸ್ಥಿತಿ ಕಂಡು ಕುಸಿದುಬಿದ್ದ ಪತ್ನಿ!
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರಿಗೆ ಯುವತಿಯನ್ನು ಅರುಣ್​ ಜತೆ ನೋಡಿದ್ದಾಗಿ ಕೆಲ ಸ್ಥಳೀಯರು ಮಾಹಿತಿ ನೀಡಿದರು. ರೇಷ್ಮಾ ತಂದೆಗೆ ಸ್ನೇಹಿತರು ಸಹ ಅರುಣ್​ ಜತೆ ನೋಡಿದ್ದಾಗಿ ಹೇಳಿದ್ದರು. ಇದೇ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದಾಗ ರೇಷ್ಮಾ ಮೃತದೇಹ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಅರುಣ್​ ಮೃತದೇಹ ಸಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮಾಧ್ಯಮ ವರದಿಗೆ ಸಿಡಿಮಿಡಿಗೊಂಡು ಸ್ಯಾಂಡಲ್​ವುಡ್​ ಕರಾಳ ಮುಖ ಬಿಚ್ಚಿಟ್ಟ ಜಗ್ಗೇಶ್​!

ವಿಧಾನಪರಿಷತ್​ನಲ್ಲಿ ಶಾಸಕರ ಮೊಬೈಲ್​ ಬ್ಯಾನ್! ಕೆಲ ನಿಯಮ ಜಾರಿಗೆ ಹೊರಟ್ಟಿ ಸಜ್ಜು

ಅಂತ್ಯಸಂಸ್ಕಾರಕ್ಕೆ ಪುತ್ರನೇ ಬೇಕೆ? ಅಪ್ಪನ ಶವ ಹೆಗಲಮೇಲೆ ಹೊತ್ತರು- ಚಿತೆಗೆ ಕೊಳ್ಳಿ ಇಟ್ಟ ಪುತ್ರಿಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − ten =
Remember me
