ನವದೆಹಲಿ:ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಕಳೆದಿದ್ದರೂ, ಅದರ ಹಾಡಿನ ಕ್ರೇಜ್​ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಊ ಅಂಟವಾ ಹಾಡಿಗೆ ಅನೇಕರು ಇಂದಿಗೂ ಸೊಂಟ ಬಳಕಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಯುವತಿಯೊಬ್ಬಳು ಅದೇ ಹಾಡಿಗೆ ಬೆಲ್ಲಿ ಡಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
kkhushii_sharma ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಲಾಗಿದ್ದು, ಲಕ್ಷಾಂತರ ಲೈಕ್ಸ್​ ಪಡೆದುಕೊಂಡಿದೆ. ಅಲ್ಲದೆ, ಕಾಮೆಂಟ್​ಗಳ ಸುರಿಮಳೆಯೇ ಹರಿದುಬರುತ್ತಿದೆ. ನೆಟಿಗ್ಗರು ಯುವತಿಯ ನೃತ್ಯವನ್ನು ತುಂಬಾ ಇಷ್ಟಪಟ್ಟಿದ್ದು, ಆಕೆಯ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವೀಡಿಯೋದಲ್ಲಿ ನೋಡಿದಂತೆ, ಅದ್ಭುತವಾದ ಕೆಂಪು ಸೀರೆಯಲ್ಲಿ ಖುಷಿ ಶರ್ಮಾ ಊ ಅಂಟವಾ ಹಾಡಿಗೆ ಭರ್ಜರಿಯಾಗಿ ಬೆಲ್ಲಿ ಡಾನ್ಸ್​ ಮಾಡಿದ್ದಾರೆ. ಹಳದಿ ಸೀರೆಯುಟ್ಟ ಯುವತಿಯು ಕೂಡ ನಂತರದಲ್ಲಿ ಖಷಿಯೊಂದಿಗೆ ಸೇರಿ ಸೊಂಟ ಬಳುಕಿಸುತ್ತಾರೆ. ಕಾರ್ಯಕ್ರಮಕ್ಕೆ ಹಾಜರಾಗಿದ್ದ ಪ್ರೇಕ್ಷಕರು ಡಾನ್ಸ್​ ನೋಡಿ ಹುರಿದುಂಬಿಸುತ್ತಿರುವುದು ವಿಡಿಯೋದಲ್ಲಿದೆ.
2022 ರಲ್ಲಿ ನನ್ನ ಅತ್ಯಂತ ವೈರಲ್ ವಿಡಿಯೋ ಎಂದು ಖುಷಿ ಅವರು ಅಡಿಬರಹ ಬರೆದುಕೊಂಡಿದ್ದಾರೆ. ಈ ವಿಡಿಯೋ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಾನು ಹೇಗೆ ಇದನ್ನು ಪೋಸ್ಟ್ ಮಾಡದಿರಲು ಸಾಧ್ಯ ಎಂದಿದ್ದಾರೆ. ಒಟ್ಟಾರೆ, ವಿಡಿಯೋ ಮಾತ್ರ ಎಲ್ಲರಿಗೂ ತುಂಬಾ ಇಷ್ಟವಾಗಿದೆ.(ಏಜೆನ್ಸೀಸ್​)

A post shared by Khushi Sharma (@kkhushii_sharma)

ಕೇರಳದ ವಿಶೇಷ ಕುಜಿಮಂತಿ ಬಿರಿಯಾನಿ ತಿಂದ ಯುವತಿ ದುರಂತ ಸಾವು: ವೈದ್ಯರು ಕೊಟ್ಟ ಕಾರಣ ಹೀಗಿದೆ…

ಎಸ್​​ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಶ್ರೀನಿವಾಸ್ ಬಾಳೆಕಾಯಿ ಸೇರಿದಂತೆ ಯಾರು-ಯಾವ ಕ್ಷೇತ್ರಕ್ಕೆ… ಇಲ್ಲಿದೆ ಮಾಹಿತಿ

‘ಯಾವನ್ಲಾ ನೀನು? ತಿ* ಮುಚ್ಕಂಡು ಫೈಲ್ ತಗೋ ಬಾ…’ ಜನರ ಎದುರೇ ಅಧಿಕಾರಿಗೆ ಬೈದ ಸೋಮಣ್ಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
