ಇಂದೋರ್:ಇಂದಿನ ಕಾಲದ ಹುಡುಗಿಯರು ಧರಿಸುವ ಬಟ್ಟೆಗಳನ್ನು ನೋಡಿದರೆ ಅವರನ್ನು ರಾಮಾಯಣದಲ್ಲಿ ಬರುವ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಬಿಜೆಪಿ ಪ್ರದಾನ ಕಾರ್ಯದರ್ಶಿ ಕೈಲಾಶ್​ ವಿಜಯ್​ ವರ್ಗೀಯ ಮಹಿಳೆಯರ ಉಡುಪಿನ ಬಗ್ಗೆ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ಸಂಜೆ ವೇಳೆ ಯುವ ಪೀಳಿಗೆ ಕುಡಿದು ನಶೆಯಲ್ಲಿ ತೇಲಾಡುತ್ತಿರುವುದನ್ನು ನೋಡಿದ ತಕ್ಷಣ ಅವರನ್ನು ಹಿಡಿದು ಬಾರಿಸುವಷ್ಟು ಕೋಪ ಬರುತ್ತದೆ.
ನಾವು ಮಹಿಳೆಯರನ್ನು ದೇವತೆ ಎಂದು ಪೂಜಿಸುತ್ತೇವೆ ಅಂತಹವರು ಎಂತಹ ಬಟ್ಟೆಗಳನ್ನು ಧರಿಸುತ್ತಾರೆ ಎಂದರೆ ರಾಮಾಯಣದಲ್ಲಿ ಬರುವ ಶೂರ್ಪನಕಿಯಂತೆ ಕಾಣುತ್ತಾರೆ. ದೇವರು ನಿಮ್ಮಗೆ ಒಳ್ಳೆಯ ದೇಹವನ್ನು ಕೊಟ್ಟಿದ್ಧಾನೆ ಮೈ ತುಂಬಾ ಬಟ್ಟೆ ಹಾಕಿ. ಮನೆಯಲ್ಲಿ ಈ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿ ಹೇಳಬೇಕು ಎಂದು ಹೇಳಿದ್ದಾರೆ.
BJP Leader@KailashOnlinesays girls dress badly & look like ‘Shurpanakha’. This is a reprehensible & demeaning insult to every woman of this countryWhere is@smritiiraninow? Does she condone this disgusting statement? Or does she only find her voice to attack@RahulGandhi!pic.twitter.com/hzoxrnZpl1
ಈಗಿನ ಕಾಲದ ಹೆಣ್ಣು ಮಕ್ಕಳು ಧರಿಸುವ ಬಟ್ಟೆಗಳಲ್ಲಿ ಅವರು ರಾಮಾಯಣದ ಶೂರ್ಪನಖಿಯಂತೆ ಕಾಣುತ್ತಾರೆ. ಕಡೆಯಲ್ಲಿ ಶೂರ್ಪನಖಿ ಲಕ್ಷ್ಮಣನನ್ನು ಮೋಹಿಸಲು ಹೋಗಿ ಮೂಗು ಮತ್ತು ಕಿವಿಯನ್ನು ಆತ ಕತ್ತರಿಸುತ್ತಾನೆ ಎಂದು ವಿಡಿಯೋದಲ್ಲಿ ಹೇಳಿರುವುದು ಕಂಡು ಬರುತ್ತದೆ.
ಇದನ್ನೂ ಓದಿ:ಮಾನನಷ್ಟ ಪ್ರಕರಣ; ಜಡ್ಜ್​ ನಾಲಿಗೆ ಕತ್ತರಿಸುವುದಾಗಿ ಹೇಳಿದ ಕಾಂಗ್ರೆಸ್​ ಮುಖಂಡ
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಬಿಜೆಪಿ ನಾಯಕರು ಪದೇ ಪದೇ ಹೆಣ್ಣು ಮಕ್ಕಳನ್ನು ಅವಮಾನಿಸುತ್ತಿದ್ದಾರೆ. ಇದು ಅವರ ಆಲೋಚನೆ ಹಾಗೂ ಮನೋಭಾವಗಳನ್ನು ಎತ್ತಿ ತೋರಿಸುತ್ತದೆ. ಬಿಜೆಪಿ ನಾಯಕ ಕೈಲಾಶ್​ ಹೆಣ್ಣು ಮಕ್ಕಳನ್ನು ಶೂರ್ಪನಖಿ ಎಂದು ಕರೆದು ಅವರ ಉಡುಗೆ ಬಗ್ಗೆ ಹೇಳಿಕೆ ನೀಡಿರುವುದು ಆಕ್ಷೇಪಾರ್ಹ ಕೂಡಲೇ ಅವರಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − seven =
Remember me
