ಬೆಂಗಳೂರು:ಮೆಸೇಜಿಂಗ್ ಆ್ಯಪ್​ಗಳ ಪೈಕಿ ಅತ್ಯಾಧುನಿಕ ಹಾಗೂ ಅತ್ಯುತ್ತಮ ಎನಿಸಿಕೊಂಡಿರುವ ಟೆಲಿಗ್ರಾಂ ತನ್ನ ಬಳಕೆದಾರರಿಗೆ ಹೊಸದೊಂದು ಕೊಡುಗೆ ಆರಂಭಿಸಿದ್ದು, ಇದರಿಂದಾಗಿ ಹತ್ತು ಸಾವಿರ ಮಂದಿಗೆ ಉಚಿತವಾಗಿ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಸಿಗಲಿದೆ.
ಈ ಕುರಿತು ಟೆಲಿಗ್ರಾಂ ಸಂಸ್ಥಾಪಕ-ಸಿಇಒ ಡು ರೋವ್ ತಮ್ಮ ಚಾನೆಲ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಟೆಲಿಗ್ರಾಂ ಚಾನೆಲ್​ಗಳಿಗೆಂದೇ ಅವರು ‘ಗಿವ್​ಎವೇ’ ಎಂಬ ಹೊಸ ಕೊಡುಗೆಯನ್ನು ಘೋಷಣೆ ಮಾಡಿದ್ದಾರೆ.
ಟೆಲಿಗ್ರಾಮ್​ನ ಎಲ್ಲ ಚಾನೆಲ್​ಗೂ ಈ ಗಿವ್​ಎವೇ ಸೌಲಭ್ಯ ಘೋಷಣೆ ಮಾಡಿದ್ದು, ಚಾನೆಲ್​ನವರು ತಮ್ಮ ಸಬ್​ಸ್ಕ್ರೈಬರ್ಸ್​ಗೆ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಉಚಿತವಾಗಿ ನೀಡಬಹುದು. ಅದಲ್ಲದೆಯೂ ಬೇರೆ ಇತರ ಕೊಡುಗೆಗಳನ್ನೂ ನೀಡುವಂಥ ವ್ಯವಸ್ಥೆಯೂ ಇದರಲ್ಲಿದೆ.
ಇದನ್ನೂ ಓದಿ:ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?
ಟೆಲಿಗ್ರಾಂ ಚಾನೆಲ್ ಹೊಂದಿರುವವರು ತಮ್ಮ ಅದೃಷ್ಟವಂತ ಸಬ್​ಸ್ಕ್ರೈಬರ್ಸ್​ಗೆ ಗಿವ್​ಎವೇ ಆಗಿ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​ ನೀಡಬಹುದು. ಈ ಮೂಲಕ ತಮ್ಮ ಚಾನೆಲ್​ಗೆ ಹೆಚ್ಚು ಮಂದಿ ಸಬ್​ಸ್ಕ್ರೈಬರ್​ಗಳನ್ನು ಸೆಳೆಯಬಹುದು. ಆದರೆ ಇದಕ್ಕೆ ಚಾನೆಲ್​ನವರೇ ಮುಂಚಿತವಾಗಿ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಮೊತ್ತ ಪಾವತಿಸಿರಬೇಕಾಗುತ್ತದೆ.
ಡು ರೋವ್ ಕೂಡ ತಮ್ಮ ಚಾನೆಲ್​ನಲ್ಲಿ ಈ ಗಿವ್​ಎವೇ ಘೋಷಣೆ ಮಾಡಿದ್ದು, ಅವರು ತಮ್ಮ ಚಾನೆಲ್​ನ ಅದೃಷ್ಟವಂತ 10 ಸಾವಿರ ಸಬ್​​ಸ್ಕ್ರೈಬರ್ಸ್​ಗೆ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ತಾವು ಈಗಾಗಲೇ 2 ಲಕ್ಷ ಡಾಲರ್ ಟನ್​ಕಾಯಿನ್ ಮೂಲಕ ಟೆಲಿಗ್ರಾಮ್​ಗೆ ಪಾವತಿ ಮಾಡಿದ್ದಾಗಿಯೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ರಾಜ್ಯಗಳ ತೆರಿಗೆ ಪಾಲು ಬಿಡುಗಡೆ; 72,961 ಕೋಟಿ ರೂಪಾಯಿಯಲ್ಲಿ ಕರ್ನಾಟಕಕ್ಕೆ ಎಷ್ಟು?
ಡು ರೋವ್ ಅವರ ಚಾನೆಲ್ (https://t.me/durov/236) ​ಗೆ ಸಬ್​ಸ್ಕ್ರೈಬ್ ಮಾಡಿಕೊಂಡಿರುವ ಬಳಕೆದಾರರು ಈ ಉಚಿತ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಪಡೆಯವ ಅವಕಾಶ ಹೊಂದಿರುತ್ತಾರೆ. ಈಗಾಗಲೇ ಸಬ್​ಸ್ಕ್ರೈಬ್ ಆಗಿರದವರು ಸಬ್​ಸ್ಕ್ರೈಬ್ ಆಗುವ ಮೂಲಕ ಈ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬಹುದು.
ನ. 13ರಂದು ರಾತ್ರಿ 9.30ಕ್ಕೆ ಡು ರೋವ್ ಈ ಹತ್ತು ಸಾವಿರ ಅದೃಷ್ಟವಂತರಿಗೆ ಫ್ರೀ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ನೀಡಲಿದ್ದಾರೆ. ಅಂಥವರು 6 ತಿಂಗಳ ಕಾಲ ಈ ಉಚಿತ ಸಬ್​ಸ್ಕ್ರಿಪ್ಷನ್ ಪಡೆಯಲಿದ್ದಾರೆ.
Telegram Channels can now host the first fair and transparent giveaways in the history of social media. Participants can win prizes like Telegram Premium (or Teslas 😉)https://t.co/aOMNhWMgZm
— Telegram Messenger (@telegram)November 7, 2023

ಮಾಮೂಲಿಗಿಂತ ಅರ್ಧಕ್ಕೂ ಅಧಿಕ ಕಡಿಮೆ ಖರ್ಚಲ್ಲಿ ಈಗ ಎಕ್ಸ್ ಸಬ್​ಸ್ಕ್ರಿಪ್ಷನ್ ಲಭ್ಯ; ಏನಿದು ಎಲಾನ್ ಮಸ್ಕ್ ಕಮರ್ಷಿಯಲ್ ಪ್ಲ್ಯಾನ್?

12 ವರ್ಷಗಳಿಂದ ಇನ್ಶೂರೆನ್ಸ್ ಇಲ್ಲದ ವಾಹನದಲ್ಲಿ ಪೊಲೀಸರ ಡ್ಯೂಟಿ; ಸ್ಥಳೀಯ ವ್ಯಕ್ತಿ ಅಧಿಕಾರಿಯನ್ನೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 7 =
Remember me
