ನವದೆಹಲಿ:ನನ್ನ ರಾಜ್ಯದಲ್ಲಿ ಹಿಂಸೆ ನಡೆಯುತ್ತಿದೆ. ಆದರೆ ಆ ಬಗ್ಗೆ ನಾನೇನೂ ಮಾತನಾಡಲು ಆಗುತ್ತಿಲ್ಲ. ಒಂಥರಾ ಉಸಿರು ಕಟ್ಟಿಸೋ ವಾತಾವರಣ ಇದೆ ಎಂದಿರುವ ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಮಾತ್ರವಲ್ಲ, ಅವರು ಸದ್ಯದಲ್ಲೇ ಪಕ್ಷ ತೊರೆದು ಮತ್ತೊಂದು ಪಕ್ಷ ಸೇರುವ ಮಾತುಗಳೂ ಕೇಳಿಬಂದಿದ್ದು, ಈ ಪ್ರಕರಣ ಇದೀಗ ಕುತೂಹಲ ಕೆರಳಿಸಿದೆ.
ಶುಕ್ರವಾರ ರಾಜ್ಯಸಭೆಯಲ್ಲಿ ಬಜೆಟ್ ಅಧಿವೇಶನ ಸಂದರ್ಭದಲ್ಲೇ ಅವರು ಇಂಥದ್ದೊಂದು ಘೋಷಣೆಯನ್ನು ಮಾಡಿದ್ದಾರೆ. ಅಂದಹಾಗೆ ಇಂಥದ್ದೊಂದು ಘೋಷಣೆಯನ್ನು ಮಾಡಿರುವುದು ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಎಂಪಿ ದಿನೇಶ್ ತ್ರಿವೇದಿ. ನನ್ನ ರಾಜ್ಯ (ಪಶ್ಚಿಮ ಬಂಗಾಳ)ದಲ್ಲಿ ತುಂಬಾ ಹಿಂಸೆ ಇದೆ. ನಾವಿಲ್ಲಿ ಏನನ್ನೂ ಮಾತನಾಡಲು ಆಗುತ್ತಿಲ್ಲ ಎಂದು ಅವರು ಬೇಸರವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ:ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!
‘ನನ್ನನ್ನು ಇಲ್ಲಿಗೆ ಕಳುಹಿಸಿದ ನನ್ನ ಪಕ್ಷಕ್ಕೆ ಆಭಾರಿ ಆಗಿದ್ದೇನೆ. ಆದರೆ ನಾನು ನನ್ನ ರಾಜ್ಯದಲ್ಲಿ ನಡೆಯುತ್ತಿರು ಹಿಂಸಾಚಾರದ ಬಗ್ಗೆ ಮಾತನಾಡಲಾಗದಷ್ಟು ಉಸಿರು ಕಟ್ಟಿಸುವ ವಾತಾವರಣದಲ್ಲಿ ಇದ್ದೇನೆ. ಇಲ್ಲಿ ಕುಳಿತುಕೊಂಡು ಕೂಡ ನೀನು ಏನೂ ಮಾಡಲಾಗದಿದ್ದರೆ ರಾಜೀನಾಮೆ ಕೊಡುವುದೇ ಮಿಗಿಲು ಎಂದು ನನ್ನ ಆತ್ಮ ಹೇಳುತ್ತಿದೆ. ಆದರೆ ನಾನು ನನ್ನ ರಾಜ್ಯದ ಜನರಿಗಾಗಿ ನನ್ನ ಕೆಲಸವನ್ನು ಮುಂದುವರಿಸುತ್ತೇನೆ’ ಎಂಬುದಾಗಿ ಅವರು ಹೇಳಿದ್ದಾರೆ. ದಿನೇಶ್​ ತ್ರಿವೇದಿ ಟಿಎಂಸಿ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. (ಏಜೆನ್ಸೀಸ್)
I am resigning from Rajya Sabha today. There is violence happening in my state. We cannot speak anything here: TMC Rajya Sabha MP Dinesh Trivedipic.twitter.com/6xvEYtciwF
— ANI (@ANI)February 12, 2021

Grateful to my party that they've sent me here. I'm feeling suffocated that we're not able to do anything over violence in the state. My soul tells me that if you can't do anything sitting here, then you must resign. I will continue to work for people of WB: TMC MP Dinesh Trivedipic.twitter.com/E9kho7d4UX
— ANI (@ANI)February 12, 2021

ಈ ಥರ ಸಾಯಿಸೋ ಪ್ರಯತ್ನ ಇದುವರೆಗೂ ಯಾರೂ ಮಾಡಿರ್ಲಿಲ್ಲ! ಖತರ್ನಾಕ್​ ಸೇಲ್ಸ್​ಮ್ಯಾನ್​ ಕೊನೆಗೂ ಫೇಲಾದ…

ಆ ‘ಮಹಿಳೆಯರು’ ಹೆದ್ದಾರಿಯಲ್ಲಿ ಲಿಫ್ಟ್ ಕೇಳಿದರು; ಆಮೇಲೆ ಆಗಿದ್ದೇ ಬೇರೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × five =
Remember me
