ನವದೆಹಲಿ:ಕರೊನಾ ಸಂಕಷ್ಟ ಏನೇ ಇರಲಿ, ರಾಜಕಾರಣಿಗಳಿಗೆ ಚುನಾವಣೆಗಿಂತ ಮುಖ್ಯವಾದ ಕೆಲಸ ಇನ್ನೇನಿದೆ ಹೇಳಿ…!ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳಷ್ಟೇ ಉಳಿದಿವೆ. ನಂತರ ಪಶ್ಚಿಮ ಬಂಗಾಳದ ಚುನಾವಣೆಗೆ ಸಜ್ಜಾಗಬೇಕು. ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಆನ್​ಲೈನ್​ ಮೂಲಕ ಪ್ರಚಾರ ಶುರು ಮಾಡಿವೆ. ಸಾಮಾಜಿಕ ಜಾಲ ತಾಣಗಳ ಮೂಲಕ ವರ್ಚುವಲ್​ ಸಮಾವೇಶ ನಡೆಸುತ್ತಿವೆ.
ಇದು ರಾಜಕಾರಣಿಗಳ ಕತೆಯಾದರೆ, ಅಧಿಕಾರಿಗಳು ಕೂಡ ಸಜ್ಜಾಗಬೇಕಲ್ಲ, ಚುನಾವಣೆಗೆ ಅಗತ್ಯ ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಆರಂಭಿಸಿ ಒಟ್ಟಾರೆ ಚುನಾವಣೆ ಪ್ರಕ್ರಿಯೆಗೆ ಏನೆಲ್ಲ ಬೇಕು ಎಂಬುದರ ಪಟ್ಟಿ ಸಿದ್ಧಗೊಳಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸುವಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ಟಿಬೆಟ್​ನಂತೆ ಹಾಂಗ್​ಕಾಂಗನ್ನು ಹೊಸಕಿದ ಚೀನಾ; ಭದ್ರತಾ ಕಾಯ್ದೆ ಅಂಗೀಕಾರ; ಪ್ರಜಾಪ್ರಭುತ್ವ ಹೋರಾಟಕ್ಕೆ ಭಾರಿ ಹಿನ್ನಡೆ
ಬಿಹಾರದ ಅಧಿಕಾರಿಗಳು ಸಲ್ಲಿಸಿರುವ ಪಟ್ಟಿಯಲ್ಲಿ ಕೆಲ ಸಾಮಗ್ರಿಗಳ ಇಂತಿವೆ. ಟೂಥ್​ ಪಿಕ್​ನಂಥ ಬಿದಿರಿನ ಕಡ್ಡಿಗಳು, ಒಮ್ಮೆ ಬಳಸಿ ಬಿಸಾಡುವ ಸಿರಿಂಜ್​ಗಳು, ಚುನಾವಣಾಧಿಕಾರಿ, ಸಿಬ್ಬಂದಿ ಮೇಜಿನ ಸುತ್ತ ಗ್ಲಾಸ್​ ಶೀಲ್ಡ್​… ಹೀಗೆ ಸಾಗುತ್ತದೆ ಪಟ್ಟಿ.
ಹೇಳಿ ಕೇಳಿ ಇದು ಕೋವಿಡ್​ ಕಾಲಮಾನದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹೀಗಾಗಿ ವೈರಸ್​ ಹರಡುವುದನ್ನು ತಡೆಗಟ್ಟಲು ಆದಷ್ಟು ಮಾನವ ಸ್ಪರ್ಶರಹಿತ ವ್ಯವಸ್ಥೆಯನ್ನು ರೂಪಿಸಬೇಕಿದೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ; ಶೇ.98.8 ಉತ್ತೀರ್ಣ, ಶೇ.95 ಫಲಿತಾಂಶ ಪಡೆದರೂ ವಯನಾಡ್​ ಕನಿಷ್ಠ ಸಾಧನೆ
ಮತಯಂತ್ರದಲ್ಲಿ ಗುಂಡಿಯನ್ನು ಅದುಮಲು ಬೆರಳಿನ ಬದಲಿನ ಬದಲು ಬಿದಿರಿನ ಕಡ್ಡಿಯನ್ನು ಬಳಸಬಹುದು. ಏಕೆಂದರೆ ಒಂದೊಂದು ಮತ ಚಲಾಯಿಸಿದಾಗ ಅದನ್ನು ಪ್ರತಿ ಬಾರಿಯೂ ಸ್ಯಾನಿಟೈಸ್​ ಮಾಡುವುದು ಕಷ್ಟವಾಗಲಿದೆ. ಇನ್ನು ಬೆರಳಿಗೆ ಶಾಯಿ ಬಳಿಯಲು ಕಡ್ಡಿಯ ಬದಲು ಒಮ್ಮೆ ಬಳಸುವ ಸಿರಿಂಜ್​ಗಳನ್ನು ಉಪಯೋಗಿಸಬಹುದು. ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿ ಜನರೊಂದಿಗೆ ಅಂತರ ಕಾಪಾಡಿಕೊಳ್ಳಲು ಮೇಜಿನ ಸುತ್ತ ಗಾಜಿನ ಅಥವಾ ಪಾರದರ್ಶಕ ಆವರಣ ಮಾಡಿಕೊಳ್ಳಬೇಕಾಗುತ್ತದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ
ಅಂತೆಯೇ ಇವೆಲ್ಲ ವಸ್ತುಗಳು ಬೇಕಾಗುತ್ತವೆ ಎಂಬ ಯೋಜನೆ ಸಿದ್ಧಪಡಿಸಲಾಗಿದೆ. ಇದಲ್ಲದೇ, ಮಾಸ್ಕ್​, ಸ್ಯಾನಿಟೈಸರ್​ಗಳು ಬೇಕೆಬೇಕಲ್ಲ.ಅಲ್ಲಿಯವರೆಗೆ ಇನ್ನೂ ಯಾವೆಲ್ಲ ಬದಲಾವಣೆಗಳು ಆಗಬಹುದೋ ಯಾರಿಗೆ ಗೊತ್ತು. ಆದರೆ, ಸಿದ್ಧತೆಯನ್ನಂತೂ ಮಾಡಿಕೊಳ್ಳಲೇ ಬೇಕಲ್ಲ…!
ಕರೊನಾ ಲಸಿಕೆ ಮೊದಲಿಗೆ ಸಿಗೋದು ಯಾರಿಗೆ? ಪ್ರಧಾನಿ ಮೋದಿಯೇ ಸಿದ್ಧಪಡಿಸಿದ್ದಾರೆ ವಿತರಣಾ ಯೋಜನೆ ರೂಪುರೇಷೆ…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − seventeen =
Remember me
