ಬೆಂಗಳೂರು:ಅಲ್ಪದಿಂದ ಮಧ್ಯಮ ಹಂತದವರೆಗಿನ ಕೋವಿಡ್​-19 ಚಿಕಿತ್ಸೆಗಾಗಿ ಬಾಯಿ ಮೂಲಕ ಕೊಡಬಹುದಾದ ಫವಿಪಿರಾವಿರ್​ ಔಷಧವನ್ನು ತಯಾರಿಸಿ ಮಾರಾಟ ಮಾಡಲು ಔಷಧ ನಿಯಂತ್ರಕರು ಅನುಮತಿ ನೀಡಿರುವುದಾಗಿ ಗ್ಲೆನ್​ಮಾರ್ಕ್​ ಫಾರ್ಮಸ್ಯುಟಿಕಲ್ಸ್​ ಲಿಮಿಟೆಡ್​ ಹೇಳಿಕೊಂಡಿದೆ.
ಶುಕ್ರವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಮುಂಬೈ ಮೂಲದ ಔಷಧ ತಯಾರಿಕಾ ಕಂಪನಿ ಗ್ಲೆನ್​ಮಾರ್ಕ್​ ಫಾರ್ಮಸ್ಯುಟಿಕಲ್ಸ್​, ತುರ್ತು ಪರಿಸ್ಥಿತಿಯಲ್ಲಿ ಮಾತ್ರವೇ ಈ ಔಷಧವನ್ನು ಬಳಕೆ ಮಾಡಲು ಔಷಧ ನಿಯಂತ್ರಕರು ಅನುಮತಿ ನೀಡಿರುವುದಾಗಿ ತಿಳಿಸಿದೆ. ಇದೇ ವರ್ಗದಲ್ಲಿ ಈ ಔಷಧವನ್ನು ದೇಶಾದ್ಯಂತ ಮಾರಾಟ ಮಾಡಲಾಗುವುದು ಎಂದು ಹೇಳಿದೆ.
ಜಪಾನ್​ನ ಫ್ಯೂಜಿಫಿಲಂ ಹೋಲ್ಡಿಂಗ್ಸ್​ಕಾರ್ಪೋರೇಷನ್​ನ ಬ್ರ್ಯಾಂಡ್​ನೇಮ್​ ಅವಿಗಾನ್​ ಹೆಸರಿನಲ್ಲಿ ಫವಿಪಿರಾವಿರ್​ ಔಷಧವನ್ನು ಮಾರುಕಟ್ಟೆ ಬಿಡುಗಡೆ ಮಾಡುತ್ತಿರುವುದಾಗಿಯೂ ಕಂಪನಿ ಹೇಳಿಕೊಂಡಿದೆ. ಅವಿಗಾನ್​ ಅನ್ನು ಫ್ಲ್ಯೂ ಚಿಕಿತ್ಸೆಯಲ್ಲಿ ಬಳಸುವುದಕ್ಕಾಗಿ 2014ರಲ್ಲಿ ಅನುಮತಿ ದೊರೆತಿತ್ತು.
ಕರೊನಾ ನಿಯಂತ್ರಣ: ಕೇಂದ್ರದ ಶ್ಲಾಘನೆಗೆ ಬಿಎಸ್‌ವೈ ಸಂತಸ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × two =
Remember me
